ಸಮಾಜವಾದಿ ಪಕ್ಷದ ರಾಜ್ಯಾಧ್ಯಕ್ಷ ಶಿವಪಾಲ್ ಯಾದವ್ ಮುಖ್ಯಮಂತ್ರಿ ಅಖಿಲೇಶ್ ಯಾದವ್ ರನ್ನು ತಮ್ಮ ನಿವಾಸಕ್ಕೆ ಕರೆಸಿ ಮಾತುಕತೆ ನಡೆಸಿದ್ದಾರೆ. 

ಲಕ್ನೋ (ಜ.06): ಸಮಾಜವಾದಿ ಪಕ್ಷದ ರಾಜ್ಯಾಧ್ಯಕ್ಷ ಶಿವಪಾಲ್ ಯಾದವ್ ಮುಖ್ಯಮಂತ್ರಿ ಅಖಿಲೇಶ್ ಯಾದವ್ ರನ್ನು ತಮ್ಮ ನಿವಾಸಕ್ಕೆ ಕರೆಸಿ ಮಾತುಕತೆ ನಡೆಸಿದ್ದಾರೆ. 

ಕುಟುಂಬ ರಾಜಕಾರಣದಲ್ಲಿ ಉಂಟಾಗಿರುವ ಬಿರುಕಿಗೆ ತೇಪೆ ಹಚ್ಚುವ ಪ್ರಯತ್ನ ನಡೆಸಿದ್ದಾರೆ. ಹೊಂದಾಣಿಕೆ ಸೂತ್ರದ ದಾರ ಬೆಸೆದಿದ್ದಾರೆ ಎನ್ನಲಾಗಿದೆ. ಬಳಿಕ ಶಿವಪಾಲ್ ಯಾದವ್ ಮುಲಯಾಂ ಸಿಂಗ್ ಯಾದವ್ ರನ್ನು ಭೇಟಿಯಾಗಿದ್ದಾರೆ.

ಅಖಿಲೇಶ್ ಯಾದವ್ ತಮ್ಮ ತಂದೆಯನ್ನು ಬರಮಾಡಿಕೊಳ್ಳಲು ವಿಮಾನ ನಿಲ್ದಾಣಕ್ಕೆ ತೆರಳುವವರಿದ್ದರು. ಕಾರಣಾಂತರದಿಂದ ತಮ್ಮ ಪ್ಲಾನನ್ನು ಕೈಬಿಡಬೇಕಾಯಿತು. ಬಳಿಕ ಶಿವಪಾಲ್ ಯಾದವ್ ಅಖಿಲೇಶ್ ರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡಿದ್ದಾರೆ.