ಬೆಂಗಳೂರಿನ ಬಸವೇಶ್ವರ ನಗರ ಸಮೀಪ ಇರುವ  ಕಮಲಾನಗರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮೂಲಕ ರಾಜ್ಯ ಸರ್ಕಾರ ಅನ್ನಭಾಗ್ಯಯೋಜನೆಯಡಿ ಪೂರೈಕೆ ಮಾಡುತ್ತಿರುವ  ಉಪ್ಪಿನಲ್ಲಿ  ವಿಷಕಾರಿ ಅಂಶ ಪತ್ತೆಯಾಗಿದೆ. ಹಾಗಂತ ಇದನ್ನು ನಾವು  ಹೇಳುತ್ತಿಲ್ಲ  ಕಮಲಾನಗರದ ಜನರೇ ಹೇಳುತ್ತಿದ್ದಾರೆ.  ಸರ್ಕಾರ ನೀಡಿರುವ ಈ ಉಪ್ಪನ್ನು  ಅನ್ನದ ಮೇಲೆ ಹಾಕಿದರೆ ಅನ್ನ  ಸಂಪೂರ್ಣ ನೀಲಿ ಬಣ್ಣಕ್ಕೆ ತಿರುಗುತ್ತಿದೆ.

ಬೆಂಗಳೂರು(ನ.29): ಬಡವರ ಹೊಟ್ಟೆ ತುಂಬಿಸಲು ರಾಜ್ಯ ಸರ್ಕಾರ ಜಾರಿಗೊಳಿಸಿರುವ ಅನ್ನಭಾಗ್ಯ ಯೋಜನೆ,ಬಡವರ ಪಾಲಿಗೆ ದೌರ್ಭಾಗ್ಯ ಯೋಜನೆಯಾಗಿ ಪರಿಣಮಿಸಿದೆ. ಬಡವರಿಗೆ ಕಡಿಮೆ ಬೆಲೆಯಲ್ಲಿ ಧಾನ್ಯದ ಜೊತೆಗೆ ನೀಡುವ ಉಪ್ಪು ಸಂಪೂರ್ಣವಾಗಿ ರಾಸಾಯನಿಕ ಮಿಶ್ರಣಗೊಂಡಿದ್ದು, ತಿನ್ನುವ ಊಟದಲ್ಲು ಅಚಾತುರ್ಯ ನಡೆದಿದೆ. ಈ ಅವಾಂತರಕ್ಕೆ ಯಾರು ಕಾರಣ? ೆನ್ನುವ ಪ್ರಶ್ನೆ ಇದೀಗ ಎದುರಾಗಿದೆ.

ಬೆಂಗಳೂರಿನ ಬಸವೇಶ್ವರ ನಗರ ಸಮೀಪ ಇರುವ ಕಮಲಾನಗರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮೂಲಕ ರಾಜ್ಯ ಸರ್ಕಾರ ಅನ್ನಭಾಗ್ಯಯೋಜನೆಯಡಿ ಪೂರೈಕೆ ಮಾಡುತ್ತಿರುವ ಉಪ್ಪಿನಲ್ಲಿ ವಿಷಕಾರಿ ಅಂಶ ಪತ್ತೆಯಾಗಿದೆ. ಹಾಗಂತ ಇದನ್ನು ನಾವು ಹೇಳುತ್ತಿಲ್ಲ ಕಮಲಾನಗರದ ಜನರೇ ಹೇಳುತ್ತಿದ್ದಾರೆ. ಸರ್ಕಾರ ನೀಡಿರುವ ಈ ಉಪ್ಪನ್ನು ಅನ್ನದ ಮೇಲೆ ಹಾಕಿದರೆ ಅನ್ನ ಸಂಪೂರ್ಣ ನೀಲಿ ಬಣ್ಣಕ್ಕೆ ತಿರುಗುತ್ತಿದೆ.

ನವೆಂಬರ್‌ ತಿಂಗಳಲ್ಲಿ ನ್ಯಾಯಬೆಲೆ ಅಂಗಡಿಗಳ ಮೂಲಕ ವಿತರಿಸಿರುವ ಉಪ್ಪು ತೀರಾ ಕಳಪೆಯಾಗಿದೆ. ಅಕ್ಟೋಬರ್​ ತಿಂಗಳಲ್ಲಿ ಬಳಕೆಗೆ ಯೋಗ್ಯವಾದ ಉಪ್ಪು ವಿತರಿಸಿದ್ದರೆ, ಈ ಬಾರಿ ಬಳಕೆಗೆ ಯೋಗ್ಯವಲ್ಲದ ಉಪ್ಪನ್ನು ಪಡಿತರದಾರರಿಗೆ ವಿತರಿಸುವ ಮೂಲಕ ರಾಜ್ಯ ಸರ್ಕಾರ ಬಡಜನರನ್ನು ವಂಚಿಸಿದೆಯಾ ಅನ್ನೋ ಅನುಮಾನ ಕಾಡುತ್ತಿದೆ.

ಸಾಮಾನ್ಯವಾಗಿ ಉಪ್ಪುನ್ನು ನೀರಿನಲ್ಲಿ ಹದ್ದಿದಾಗ ಕೆಲವೇ ಕ್ಷಣಗಳಲ್ಲಿ ಕರಗುತ್ತೆ. ಆದ್ರೆ , ಅನ್ನಭಾಗ್ಯದ ಈ ಉಪ್ಪು ನೀರಿನಲ್ಲಿ ಅದ್ದಿದಾಗ ಕರಗದೆ ಹಾಗೆಯೇ ಬೆರಳಿಗೆ ಅಂಟಿಕೊಳ್ಳುತ್ತದೆ. ಇದೂ ಕೂಡಾ ಕಮಲಾನಗರ ಜನರಿಗೆ ಶಾಕ್​ ನೀಡಿದೆ. ಈ ಉಪ್ಪಿನಲ್ಲಿ ಪ್ಲಾಸ್ಟಿಕ್​ ಮಿಶ್ರಣವಾಗಿದೆಯಾ ಎನ್ನುವ ಸಂಶಯವೂ ಎದುರಾಗುತ್ತದೆ.

ಇದು ಕಮಲಾನಗರದ ಕತೆಯಾದರೆ , ಇನ್ನು ಶಿವಮೊಗ್ಗದಲ್ಲೂ ಇದೇ ರೀತಿ ಅನ್ನಭಾಗ್ಯ ಯೋಜನೆಯ ಉಪ್ಪನ್ನು ಹಾಕಿದಾಗ ಅನ್ನ ನೀಲಿಯಾಗುತ್ತಿದೆ. ಸರ್ಕಾರ ಕಳಪೆ ದರ್ಜೆಯ ಉಪ್ಪನ್ನು ನ್ಯಾಯಬೆಲೆ ಅಂಗಡಿಗಳು ಹಾಗೂ ಸೊಸೈಟಿಗಳ ಮೂಲಕ ಬಡ ಜನರಿಗೆ ನೀಡಿ ಅವರ ಆರೋಗ್ಯ ಜೊತೆ ಚೆಲ್ಲಾಟ ವಾಡುತ್ತಿದೆಯಾ ಎಂಬ ಪ್ರಶ್ನೆ ಎದುರಾಗಿದೆ. ಇದಕ್ಕೆ ಆಹಾರ ಸಚಿವ ಯುಟಿ ಖಾದರ್​ ಅವರೇ ಉತ್ತರಿಸಬೇಕು.