ಬೆಂಗಳೂರು[ಮಾ.03] ಇಡೀ ದೇಶ ಭಾರತೀಯ ವಾಯುಸೇನೆ ವಿಂಗ್ ಕಮಾಂಡರ್ ಅಭಿನಂದನ್ ಅವರ ಸುರಕ್ಷಿತ ಬರುವಿಕೆಗೆ ಸಂತಸ ವ್ಯಕ್ತಪಡಿಸಿದ್ದರೆ ಕಾಂಗ್ರೆಸ್ ಇದರಲ್ಲಿಯೂ ರಾಜಕಾರಣ ಹುಡುಕಿದೆ ಎಂಬ ಅನುಮಾನ ವ್ಯಕ್ತವಾಗುವಂಥ ಹೇಳಿಕೆಗಳು ಬಂದಿವೆ.

ಆದರೆ ಕಾಂಗ್ರೆಸ್ ಕೇಂದ್ರ ನಾಯಕರಿಗೆ ಕೆಪಿಸಿಸಿ ಅಧ್ಯಕ್ಷರೆ ಟಾಂಗ್ ನೀಡಿದ್ದಾರೆ.  ಸಲ್ಮಾನ್ ಖುರ್ಷಿದ್ ವಿವಾದಾತ್ಮಕ ಟ್ವೀಟ್ ಗೆ ಪ್ರತಿಕ್ರಿಯಾತ್ಮಕ ಉತ್ತರ ನೀಡಿರುವ ದಿನೇಶ್ ಇದೆಂಥ ಮೂರ್ಖತನದ ಪ್ರತಿಕ್ರಿಯೆ, ಈ ರೀತಿಯ ಕೀಳು ಮಟ್ಟದ ಸ್ಥಿತಿ ಬಿಡಿ ಎಂದು ಟ್ವೀಟ್ ಮಾಡಿದ್ದಾರೆ.

ಅಭಿನಂದನ್ ಯುಪಿಎ ಅವಧಿಯಲ್ಲಿ ಪೈಲೆಟ್ ಆಗಿದ್ದು: ಸಲ್ಮಾನ್ ಖುರ್ಷಿದ್!

ಅಭಿನಂದನ್‌ ಕುರಿತು ಸರಣಿ ಟ್ವೀಟ್‌ಗಳನ್ನು ಮಾಡಿದ್ದ ಕೇಂದ್ರ ಮಾಜಿ ಸಚಿವ ಸಲ್ಮಾನ್ ಖುರ್ಷಿದ್, ‘ಶತ್ರುಗಳ ಆಕ್ರಮಣವನ್ನು ತಡೆದ ಭಾರತದ ಅಭಿನಂದನ್ ವರ್ಧಮಾನ್‌ಗೆ ಅಭಿನಂದನೆಗಳು. ವಿಂಗ್ ಕಮಾಂಡರ್ ಅಭಿನಂದನ್ ಪ್ರತಿಕೂಲ ಪರಿಸ್ಥಿತಿಯಲ್ಲಿ ಮಹಾನ್ ಸಮತೋಲನ ಮತ್ತು ವಿಶ್ವಾಸ ತೋರಿಸಿದ್ದಾರೆ. ಅವರು 2004ರಲ್ಲಿ ಸೇವೆಗೆ ಸೇರಿದ್ದು, ಯುಪಿಎ ಸರ್ಕಾರದ ಅವಧಿಯಲ್ಲಿ ಯುದ್ಧ ವಿಮಾನಗಳನ್ನು ಚಲಾಯಿಸುವ ಫೈಟರ್‌ ಪೈಲಟ್‌ ಆಗಿ ಪರಿಣತಿ ಹೊಂದಿದ್ದರು ಎಂದು ಟ್ವೀಟ್ ಮಾಡಿದ್ದರು.