2016-17 ನೇ ಸಾಲಿನ ವಿತ್ತೀಯ ಸಾಲಿನಲ್ಲಿ ಅಡ್ವಾನ್ಸ್ ತೆರಿಗೆ ಪಾವತಿ ಮಾಡಿದ ಬಾಲಿವುಡ್ ಸೆಲೆಬ್ರಿಟಿಗಳಲ್ಲಿ ಸಲ್ಮಾನ್ ಖಾನ್ ಎಂದಿನಂತೆ ಅಗ್ರಸ್ಥಾನದಲ್ಲಿದ್ದಾರೆ. ಕಪಿಲ್ ಶರ್ಮಾ, ಕರಣ್ ಜೋಹರ್ ಹಾಗೂ ನಟಿ ಅಲಿಯಾ ಭಟ್ ಟಾಪ್ ಟೆನ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ನವದೆಹಲಿ (ಮಾ.22): 2016-17 ನೇ ಸಾಲಿನ ವಿತ್ತೀಯ ಸಾಲಿನಲ್ಲಿ ಅಡ್ವಾನ್ಸ್ ತೆರಿಗೆ ಪಾವತಿ ಮಾಡಿದ ಬಾಲಿವುಡ್ ಸೆಲೆಬ್ರಿಟಿಗಳಲ್ಲಿ ಸಲ್ಮಾನ್ ಖಾನ್ ಎಂದಿನಂತೆ ಅಗ್ರಸ್ಥಾನದಲ್ಲಿದ್ದಾರೆ. ಕಪಿಲ್ ಶರ್ಮಾ, ಕರಣ್ ಜೋಹರ್ ಹಾಗೂ ನಟಿ ಅಲಿಯಾ ಭಟ್ ಟಾಪ್ ಟೆನ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

2016 ನೇ ಸಾಲಿನಲ್ಲಿ ಸಲ್ಮಾನ್ ಖಾನ್ ರೂ.44.5 ಕೋಟಿ, ಕಪಿಲ್ ಶರ್ಮಾ 23.9ಕೋಟಿ, ಹಾಗೂ ಕರಣ್ ಜೋಹರ್ 11.7 ಕೋಟಿ ತೆರಿಗೆ ಪಾವತಿ ಮಾಡಿದ್ದಾರೆ.

ವಿತ್ತೀಯ ವರ್ಷದಲ್ಲಿ ಆದಾಯವು 10,000 ಕ್ಕಿಂತ ಜಾಸ್ತಿಯಿದ್ದರೆ ವೈಯಕ್ತಿಕಾವಾಗಿ ಅಡ್ವಾನ್ಸ್ ಟ್ಯಾಕ್ಸನ್ನು ಕಟ್ಟಬೇಕು. ತೆರಿಗೆ ಮೂಲವನ್ನು ಕಡಿತಗೊಳಿಸಿದ ಬಳಿಕ ಅಡ್ವಾನ್ಸ್ ಟ್ಯಾಕ್ಸನ್ನು ಲೆಕ್ಕಾಚಾರ ಹಾಕಲಾಗುತ್ತದೆ.