ಉನ್ನಾವ್‌[ಜೂ.06]: ಉತ್ತರಪ್ರದೇಶದ ಉನ್ನಾವ್‌ ಲೋಕಸಭಾ ಕ್ಷೇತ್ರದಿಂದ ಪುನರಾಯ್ಕೆಯಾಗಿರುವ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್‌ ಅವರು ತಮ್ಮ ಗೆಲುವಿನಲ್ಲಿ ಪಾತ್ರ ವಹಿಸಿದ, ಅತ್ಯಾಚಾರ ಆರೋಪದ ಮೇಲೆ ಜೈಲಿನಲ್ಲಿರುವ ಶಾಸಕರೊಬ್ಬರನ್ನು ಜೈಲಿನಲ್ಲೇ ಭೇಟಿ ಮಾಡಿದ್ದಾರೆ.

ಮತ್ತೊಮ್ಮೆ ಲೋಕಸಭೆಗೆ ಆಯ್ಕೆಯಾಗಲು ಸಹಕಾರ ನೀಡಿದ್ದಕ್ಕಾಗಿ ಧನ್ಯವಾದ ಹೇಳಿದ್ದಾರೆ. ಇದು ವಿವಾದಕ್ಕೆ ಕಾರಣವಾಗಿದೆ.

ಉದ್ಯೋಗ ಕೇಳಿಕೊಂಡು ತನ್ನ ಮನೆಗೆ ಬಂದಿದ್ದ ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಉತ್ತರಪ್ರದೇಶದ ಬಿಜೆಪಿ ಶಾಸಕ ಕುಲದೀಪ್‌ ಸಿಂಗ್‌ ಸೆಂಗರ್‌ 2017ರ ಜೂನ್‌ನಲ್ಲಿ ಅತ್ಯಾಚಾರವೆಸಗಿದ್ದ. ಈ ಕುರಿತು ಸಂತ್ರಸ್ತೆ ದೂರು ನೀಡಿದಾಗ ಪೊಲೀಸರು ಶಾಸಕನನ್ನು ಬಂಧಿಸುವ ಬದಲು, ಸಂತ್ರಸ್ತೆಯ ತಂದೆಯನ್ನೇ ಅರೆಸ್ಟ್‌ ಮಾಡಿ, ಕಿರುಕುಳ ನೀಡಿದ್ದರು. ಆ ವ್ಯಕ್ತಿ ಮೃತಪಟ್ಟಿದ್ದರು.