ಸಹಾರ ಕಂಪನಿಯು ಪುಣೆಯಲ್ಲಿರುವ ಅಂಬೆ ವ್ಯಾಲಿ ರೆಸಾರ್ಟನ್ನು ಸೆಬಿಯ ಸುಪರ್ದಿಗೆ ನೀಡಬೇಕೆಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ.

ನವದೆಹಲಿ (ಫೆ.06): ಸಹಾರ ಕಂಪನಿಯು ಪುಣೆಯಲ್ಲಿರುವ ಅಂಬೆ ವ್ಯಾಲಿ ರೆಸಾರ್ಟನ್ನು ಸೆಬಿಯ ಸುಪರ್ದಿಗೆ ನೀಡಬೇಕೆಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ.

ಸಹಾರ ಸಮೂಹವು ಸೆಬಿಗೆ ರೂ. 14,779 ಕೋಟಿ ಹಣ ಪಾವತಿಸುವುದು ಬಾಕಿಯಿದೆ. ಈಗಾಗಲೇ 11 ಕೋಟಿಗಳನ್ನು ಪಾವತಿಸಿಯಾಗಿದೆ. ಬಾಕಿ ಬರಬೇಕಾಗಿರುವ ಹಣಕ್ಕೆ ಸುಪ್ರೀಂಕೋರ್ಟ್ ಅಂಬೆ ವ್ಯಾಲಿಯನ್ನು ಸೆಬಿಯ ಸುಪರ್ದಿಗೆ ನೀಡುವಂತೆ ಆದೇಶಿಸಿದೆ. ಜೊತೆಗೆ ಸಾರ್ವಜನಿಕ ಹರಾಜಿಗಿಡಲು ಫೆ. 20 ರೊಳಗೆ ಆಸ್ತಿಯ ವಿವರಗಳನ್ನು ನೀಡುವಂತೆ ಸೂಚಿಸಿದೆ.

ಮುಂದಿನ ವಿಚಾರನೆಯನ್ನು ಫೆ. 20 ಕ್ಕೆ ನಿಗದಿಗೊಳಿಸಲಾಗಿದೆ.