ರಿಪಬ್ಲಿಕನ್‌ ಹಾಗೂ ಡೆಮೊಕ್ರಟಿಕ್‌ ಪಕ್ಷದ ಸದಸ್ಯರು ಮಂಡನೆ ಮಾಡಿರುವ ಅಷ್ಟೂವಿಧೇಯಕಗಳ ತಿರುಳು ಒಂದೇ: ಎಚ್‌-1ಬಿ ವೀಸಾದಿಂದಾಗಿ ಅಮೆರಿಕನ್ನರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ ಎಂಬುದು.
ವಾಷಿಂಗ್ಟನ್: ಭಾರತೀಯ ಐಟಿ ಉದ್ಯೋಗಿ ಗಳ ಅಮೆರಿಕ ಪ್ರವಾಸಕ್ಕೆ ರಹದಾರಿಯಾಗಿರುವ ಎಚ್-1ಬಿ ವೀಸಾ ಪದ್ಧತಿಗೆ ದಿನೇದಿನೇ ಸಂಕಷ್ಟ ಹೆಚ್ಚಾಗತೊಡಗಿದೆ. ಭಾರತೀಯ ಐಟಿ ಕಂಪನಿಗಳ ನೆಚ್ಚಿನ ಆಯ್ಕೆಯಾಗಿರುವ ಎಚ್-1ಬಿ ವೀಸಾ ಅಮೆರಿಕನ್ನರ ಉದ್ಯೋಗ ಗಳನ್ನು ಕಿತ್ತುಕೊಳ್ಳುತ್ತಿದೆ ಎಂದು ದೂಷಿಸಿ, ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾದ ಬಳಿಕ ಅಮೆರಿಕ ಸಂಸತ್ತಿನ ಉಭಯ ಸದನಗಳಲ್ಲೂ ಈವರೆಗೆ ಅರ್ಧ ಡಜನ್ ಮಸೂದೆಗಳು ಮಂಡನೆಯಾಗಿವೆ.
ರಿಪಬ್ಲಿಕನ್ ಹಾಗೂ ಡೆಮೊಕ್ರಟಿಕ್ ಪಕ್ಷದ ಸದಸ್ಯರು ಮಂಡನೆ ಮಾಡಿರುವ ಅಷ್ಟೂವಿಧೇಯಕಗಳ ತಿರುಳು ಒಂದೇ: ಎಚ್-1ಬಿ ವೀಸಾದಿಂದಾಗಿ ಅಮೆರಿಕನ್ನರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ ಎಂಬುದು.
ಸಂಶೋಧನಾ ವಿದ್ವಾಂಸರು, ಆರ್ಥಿಕ ತಜ್ಞರು, ಸಿಲಿಕಾನ್ ವ್ಯಾಲಿಯ ಉನ್ನತ ಅಧಿ ಕಾರಿಗಳು ಈ ವಾದವನ್ನು ಅಲ್ಲಗಳೆದುಕೊಂಡು ಬಂದಿದ್ದರೂ, ಸಂಸದರು ಅದನ್ನು ನಂಬುತ್ತಿಲ್ಲ. ಎಚ್-1ಬಿ ವೀಸಾ ಪಡೆಯುವವರಿಗೆ ಕನಿಷ್ಠ 90 ಲಕ್ಷ ರು. ಆದಾಯವಿರಬೇಕು, 50ಕ್ಕಿಂತ ಹೆಚ್ಚು ನೌಕರರನ್ನು ಹೊಂದಿರುವ ಹಾಗೂ ಆ ಪೈಕಿ ಅರ್ಧದಷ್ಟುಎಚ್-1ಬಿ ವೀಸಾ ಹೊಂದಿ ರುವವರನ್ನೇ ನೇಮಕ ಮಾಡಿಕೊಂಡಿರುವ ಕಂಪನಿಗಳು ಮತ್ತಷ್ಟುವಿದೇಶಿ ಉದ್ಯೋಗಿ ಗಳನ್ನು ನೇಮಕ ಮಾಡಿಕೊಳ್ಳುವಂತಿಲ್ಲ, ಎಚ್-1ಬಿ ವೀಸಾದವರನ್ನು ನೇಮಿಸಲು ಅಮೆರಿ ಕನ್ ಉದ್ಯೋಗಿಗಳನ್ನು ಕಿತ್ತುಹಾಕುವಂತಿಲ್ಲ ಎಂಬ ಅಂಶಗಳು ಈ ವಿಧೇಯಕಗಳಲ್ಲಿ ಇವೆ. ವಿದೇಶಿ ನೌಕರರು ಅಮೆರಿಕದಲ್ಲಿ ದುಡಿಮೆ ಮಾಡಲು ಎಚ್-1ಬಿ ವೀಸಾ ಅನುವು ಮಾಡಿ ಕೊಡುತ್ತಿದೆ.
ಅತಿ ಕುಶಲರಿಗಷ್ಟೇ ಎಚ್-1ಬಿ ವೀಸಾ?
ಎಚ್-1ಬಿ ವೀಸಾದಡಿದಲ್ಲಿ ಸದ್ಯ ಅಮೆರಿಕಕ್ಕೆ ಬರುತ್ತಿರುವ ವಿಜ್ಞಾನಿಗಳು ವಿವಿಧ ಕ್ಷೇತ್ರಗಳಲ್ಲಿ ಅತಿ ಕುಶಲತೆ ಹೊಂದಿಲ್ಲ. ಹೀಗಾಗಿ ಈ ವೀಸಾ ನೀತಿಯಲ್ಲಿ ಸುಧಾರಣೆ ಮಾಡಿ, ಪಿಎಚ್ಡಿ ಪದವೀಧರರು ಹಾಗೂ ಕಂಪ್ಯೂಟರ್ ವಿಜ್ಞಾನಿಗಳಂತಹ ಪ್ರತಿಭಾ ವಂತರು ದೇಶಕ್ಕೆ ಬರುವಂತೆ ಮಾಡಬೇಕು ಎಂದು ರಿಪಬ್ಲಿಕನ್ ಪಕ್ಷದ ಸಂಸದ ಟಾಮ್ ಕಾಟನ್ ಅವರು ಅಧ್ಯಕ್ಷ ಟ್ರಂಪ್ ಅವರನ್ನು ಭೇಟಿ ಮಾಡಿ ಒತ್ತಾಯಿಸಿದ್ದಾರೆ.
(epaper.kannadaprabha.in)
