ಪ್ರತಿಪಕ್ಷಗಳ ಗದ್ದಲದಿಂದ ಸಂಸದ ಸಚಿನ್ ತೆಂಡೂಲ್ಕರ್’ಗೆ ನಿನ್ನೆ ರಾಜ್ಯಸಭೆಯಲ್ಲಿ ಮಾತನಾಡುವ ಅವಕಾಶ ಸಿಗದಿದ್ದರೂ, ಭಾರತದಲ್ಲಿ ಕ್ರೀಡೆಯ ಭವಿಷ್ಯದ ಬಗ್ಗೆ ಚರ್ಚಿಸಲು ಅವರು ಸೋಶಿಯಲ್ ಮೀಡಿಯಾದ ಮೊರೆ ಹೋಗಿದ್ದಾರೆ.

ನವದೆಹಲಿ: ಪ್ರತಿಪಕ್ಷಗಳ ಗದ್ದಲದಿಂದ ಸಂಸದ ಸಚಿನ್ ತೆಂಡೂಲ್ಕರ್’ಗೆ ನಿನ್ನೆ ರಾಜ್ಯಸಭೆಯಲ್ಲಿ ಮಾತನಾಡುವ ಅವಕಾಶ ಸಿಗದಿದ್ದರೂ, ಭಾರತದಲ್ಲಿ ಕ್ರೀಡೆಯ ಭವಿಷ್ಯದ ಬಗ್ಗೆ ಚರ್ಚಿಸಲು ಅವರು ಸೋಶಿಯಲ್ ಮೀಡಿಯಾದ ಮೊರೆ ಹೋಗಿದ್ದಾರೆ.

ಕ್ರೀಡೆ ಏಕೆ ಬೇಕು, ದೇಶದಲ್ಲಿ ಕ್ರೀಡೆಗೆ ಹೇಗೆ ಪ್ರೋತ್ಸಾಹ ನೀಡಬೇಕು ಎಂಬಿತ್ಯಾದಿ ವಿಚಾರಗಳ ಬಗ್ಗೆ 15 ನಿಮಿಷದ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾಗಳಲ್ಲಿ ಅಪ್ಲೋಡ್ ಮಾಡಿದ್ದಾರೆ.

ಭಾರತದಲ್ಲಿ ಕ್ರೀಡೆಯನ್ನು ಪ್ರೋತ್ಸಾಹಿಸುವ ಮೂಲಕ ಹೇಗೆ ಸ್ವಸ್ಥ ಹಾಗೂ ಸದೃಢ ಭಾರತವನ್ನು ರೂಪಿಸಬಹುದು ಎಂಬುವುದರ ಬಗ್ಗೆ ದೂರದೃಷ್ಟಿಯನ್ನು ಸಚಿನ್ ಹಂಚಿಕೊಂಡಿದ್ದಾರೆ.

ಕ್ರೀಡೆಯನ್ನು ಪ್ರೋತ್ಸಾಹಿಸದಿರುವುದರಿಂದ ಅದು ಆರ್ಥಿಕತೆ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂದು ಸಚಿನ್ ವಿವರಿಸಿದ್ದಾರೆ. ಭಾರತದಲ್ಲಿ ಬಲವಾದ ಕ್ರೀಡಾ ಸಂಸ್ಕೃತಿಯನ್ನು ಬೆಳೆಸುವ ಅನಿವಾರ್ಯತೆ ಬಗ್ಗೆಯು ಅವರು ವಿಡಿಯೋದಲ್ಲಿ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ನಿನ್ನೆ ರಾಜ್ಯಸಭೆಯಲ್ಲಿ ಕ್ರೀಡೆಗೆ ಸಂಬಂಧಿಸಿದ ಚರ್ಚೆಯನ್ನು ಸಚಿನ್ ನಡೆಸಬೇಕಿತ್ತು. ಆದರೆ ಕಾಂಗ್ರೆಸ್ ಸಂಸದರ ಗದ್ದಲದಿಂದಾಗಿ ಸಚಿನ್’ಗೆ ಮಾತನಾಡುವ ಅವಕಾಶ ಸಿಗಲಿಲ್ಲ.