ತಿರುವನಂತಪುರ[ಫೆ.07]: ಶಬರಿಮಲೆ ಪ್ರವೇಶಿದ ಕಾರಣಕ್ಕೆ ಗಂಡನ ಮನೆಯವರ ಕೋಪಕ್ಕೆ ಗುರಿಯಾಗಿದ್ದ 39 ವರ್ಷದ ಕನಕದುರ್ಗಾ ಅಂಗಡಿಪುರಂನಲ್ಲಿರುವ ತನ್ನ ಮನೆಯನ್ನು ಪ್ರವೇಶಿಸಿದ್ದಾಳೆ. ಆದರೆ, ಆಕೆಯ ಅತ್ತೆ ಸುಮತಿ ಅಮ್ಮಾ ಮತ್ತು ಪತಿ ಕೃಷ್ಣನ್‌ ಉನ್ನಿ ಮನೆಯನ್ನು ಬಿಟ್ಟು ಇಬ್ಬರು ಮಕ್ಕಳೊಂದಿಗೆ ಬಾಡಿಗೆ ಮನೆಯೊಂದಕ್ಕೆ ತೆರಳಿದ್ದಾರೆ.

ಶಬರಿಮಲೆ ಪ್ರವೇಶ: ಕನಕದುರ್ಗಾಗೆ ಮನೆ ಪ್ರವೇಶಿಸಲು ಅನುಮತಿ

ಇಷ್ಟು ದಿನ ಸರ್ಕಾರಿ ಆಶ್ರಯ ಮನೆಯೊಂದರಲ್ಲಿ ವಾಸವಿದ್ದ ಕನಕದುರ್ಗಾ ಗ್ರಾಮ ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ ಪುನಃ ಗಂಡನ ಮನೆಗೆ ಮರಳಿದ್ದಾಳೆ. ಈ ಕುರಿತು ಪ್ರತಿಕ್ರಿಯಿಸಿರುವ ಆಕೆ, ಮನೆಗೆ ಮರಳಿದ್ದು ಸಂತೋಷವಾಗಿದೆ. ಈಗಲ್ಲದಿದ್ದರೂ ಮುಂದಿನ ದಿನಗಳಲ್ಲಿ ತಾನು ಮಕ್ಕಳನ್ನು ನೋಡುವ ವಿಶ್ವಾಸವಿದೆ ಎಂದು ಹೇಳಿದ್ದಾಳೆ.