ಮಲಪ್ಪುರಂ[ಫೆ.06]: ಶಬರಿಮಲೆ ದೇವಾಲಯಕ್ಕೆ ಪ್ರವೇಶಿಸಿ ವಿವಾದ ಸೃಷ್ಟಿಸಿದ್ದ 50 ವರ್ಷದ ಒಳಗಿನ ಮಹಿಳೆಯರಲ್ಲಿ ಒಬ್ಬರಾದ ಕನಕದುರ್ಗಾಗೆ ಗಂಡನ ಮನೆಯಲ್ಲಿ ಉಳಿಯಲು ಅವಕಾಶ ನೀಡಬೇಕು ಎಂದು ಇಲ್ಲಿನ ಗ್ರಾಮ ಕೋರ್ಟ್‌ವೊಂದು ಆದೇಶಿಸಿದೆ.

ಕೌಟುಂಬಿಕ ಹಿಂಸೆ ತಡೆ ಕಾಯ್ದೆಯ ಅಡಿಯಲ್ಲಿ ತನಗೆ ಗಂಡನ ಮನೆಯಲ್ಲಿ ಉಳಿಯುವ ಹಕ್ಕಿದೆ ಎಂದು ಕೋರಿ ಕನಕದುರ್ಗಾ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಗ್ರಾಮ ನ್ಯಾಯಾಲಯ ಮಧ್ಯಂತರ ಆದೇಶ ಹೊರಡಿಸಿದೆ.

ಶಬರಿಮಲೆ ದೇವಾಲಯಕ್ಕೆ ಪ್ರವೇಶಿಸಿದ ಕಾರಣಕ್ಕಾಗಿ ಕನಕದುರ್ಗಾ ಪತಿ ಹಾಗೂ ಸಂಬಂಧಿಗಳಿಂದ ವಿರೋಧಕ್ಕೆ ಗುರಿಯಾಗಿದ್ದರು. ಮನೆಯಿಂದ ಹೊರ ಹಾಕಿದ್ದರಿಂದ ಆಶ್ರಯ ಮನೆಯಲ್ಲಿ ಉಳಿದುಕೊಂಡಿದ್ದರು.