ಶಬರಿಮಲೆ[ಜ.04]: ಶಬರಿಮಲೆಗೆ ಇಬ್ಬರು ಮಹಿಳೆಯರ ಪ್ರವೇಶದಿಂದ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತಿಭಟನೆಯು ಹಿಂಸಾಚಾರ ರೂಪ ಪಡೆದುಕೊಂಡಿದ್ದು, ಇದೀಗ ಕಮ್ಯೂನಿಸ್ಟ್ ಕಾರ್ಯಕರ್ತರು ಕಣ್ಣೂರಿನ ಬಿಜೆಪಿ ಕಚೇರಿಗೆ ಬೆಂಕಿ ಹಚ್ಚಿದ್ದಾರೆ. ಘಟನೆಯಲ್ಲಿ ಓರ್ವ ಕಾರ್ಯಕರ್ತನೆಗೆ ಗಂಭೀರ ಗಾಯಗಳಾಗಿವೆ. 

ವಿರೋಧಕ್ಕೂ ಡೋಂಟ್ ಕೇರ್: ಶಬರಿಮಲೆ ಪ್ರವೇಶಿಸಿದ ಮತ್ತೊಬ್ಬ ಮಹಿಳೆ!

ಗುರುವಾರದಂದು ಬಿಜೆಪಿ ಕಾರ್ಯಕರ್ತರು ಪಾಲಕ್ಕಾಡ್ ನ ಸಿಪಿಎಂ ಕಚೇರಿ ಮೇಲೆ ದಾಳಿ ನಡೆಸಿದ್ದರು. ಇದರಿಂದ ಕೆರಳಿದ ಕಾರ್ಯಕರ್ತರು ಪ್ರತೀಕಾರವಾಗಿ ಬಿಜೆಪಿ ಕಚೇರಿಗೆ ಇಂದು ಶುಕ್ರವಾರ ಬೆಂಕಿ ಹಚ್ಚಿದ್ದಾರೆ. ನಿನ್ನೆ ಹಿಂಸಾಚಾರ ಹಾಗೂ ಬಂದ್ ಗೆ ಸಂಬಂಧಿಸಿದಂತೆ 1000 ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಬಂಧಿಸಲಾಗಿತ್ತು. ಅತ್ತ ತ್ರಿಸ್ಸೂರ್ ನಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಚಾಕುವಿನಿಂದ ಇರಿದಿದ್ದ ಮೂವರು SDPI ಕಾರ್ಯಕರ್ತರನ್ನೂ ಪೊಲೀಸರು ಈಗಾಗಲೇ ಕಂಬಿ ಹಿಂದೆ ಹಾಕಿದ್ದರು. ಇನ್ನು ಕಲ್ಲು ತೂರಾಟದಲ್ಲಿ ಬಲಿಯಾಗಿದ್ದ ಚಂದ್ರನ್ ಉನ್ನಿತ್ತಾನ್ ಅಂತ್ಯಕ್ರಿಯೆ ಹಿನ್ನೆಲೆಯಲ್ಲಿ ಪಂದಳಂ ನಲ್ಲಿ ಭಾರೀ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ಕೇರಳ ಬಂದ್ ವೇಳೆ ಹಿಂಸಾಚಾರ, ಬಿಜೆಪಿ ಕಾರ್ಯಕರ್ತರಿಗೆ ಚಾಕು ಇರಿತ

ಹಿಂಸಾಚಾರ ಹಾಗೂ ಪ್ರತಿಭಟನೆಯಿಂದ ನಿರ್ಮಾಣವಾದ ಉದ್ವಿಗ್ನ ಪರಿಸ್ಥಿತಿಯನ್ನು ನಿಯಂತ್ರಿಸಲು ಕೇರಳ ಪೊಲೀಸರು ಆಪರೇಷನ್ ಬ್ರೋಕನ್ ವಿಂಡೋ ಕಾರ್ಯಾಚರಣೆ ಮುಂದುವರೆಸಿದ್ದಾರೆ.