ಸಾಲು ಮರದ ತಿಮ್ಮಕ್ಕ ಅವರಿಗೆ ಪದ್ಮಶ್ರೀ ಪ್ರಶಸ್ತಿ| ರಾಷ್ಟ್ರಪತಿ ಭವನದಲ್ಲಿ ತಿಮ್ಮಕ್ಕ ಅವರಿಗೆ ಪ್ರಶಸ್ತಿ ಪ್ರಧಾನ| ಪದ್ಮಶ್ರೀ ಪ್ರಶಸ್ತಿ ಪ್ರಧಾನ ಮಾಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್| ಪ್ರಶಸ್ತಿ ಸ್ವೀಕರಿಸಿ ಕೋವಿಂದ್ ಅವರಿಗೆ ಆರ್ಶೀವಾದ ನೀಡಿದ ತಿಮ್ಮಕ್ಕ| 

ನವದೆಹಲಿ(ಮಾ.16): ಸಾವಿರಾರು ಸಸಿಗಳನ್ನು ನೆಟ್ಟು ಪೋಷಿಸಿದ ಸಾಲು ಮರದ ತಿಮ್ಮಕ್ಕ ಅವರಿಗೆ ಇಂದು ಪದ್ಮಶ್ರೀ ಪುರಸ್ಕಾರ ನೀಡಿ ಗೌರವಿಸಲಾಯಿತು.

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸಾಲುಮರದ ತಿಮ್ಮಕ್ಕ ಅವರಿಗೆ ರಾಷ್ಟ್ರಪತಿ ಭವನದಲ್ಲಿ ಪ್ರಶಸ್ತಿ ಪ್ರದಾನ ಮಾಡಿದರು. ಈ ವೇಳೆ ತಿಮ್ಮಕ್ಕ ಅವರು ರಾಷ್ಟ್ರಪತಿ ಅವರ ಹಣೆ ಮುಟ್ಟಿ ಆಶೀರ್ವದಿಸಿದರು.

Scroll to load tweet…

ರಾಷ್ಟ್ರಪತಿಗಳು ಸಹ ದೀರ್ಘಾಯುಶಿ ತಿಮ್ಮಕ್ಕ ಅವರನ್ನು ಆಶೀರ್ವಾದವನ್ನು ಭಕ್ತಿ ಪೂರ್ವಕವಾಗಿ ಸ್ವೀಕರಿಸಿದ ಅಪೂರ್ವ ಘಟನೆ ನಡೆಯಿತು. ಪ್ರಶಸ್ತಿ ಸಮಾರಂಭದ ವೇಳೆ ರಾಷ್ಟ್ರಪತಿ ಭವನದಲ್ಲಿ ಪಾಲಿಸಲಾಗುವ ಶಿಷ್ಟಾಚಾರವನ್ನು ರಾಷ್ಟ್ರಪತಿಗಳು ಬದಿಗೊತ್ತಿದ್ದು ವಿಶೇಷವಾಗಿತ್ತು.

Scroll to load tweet…

ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಲು ಬರುತ್ತಿದ್ದಂತೆ ಸಮಾರಂಭದಲ್ಲಿ ನೆರೆದಿದ್ದ ಗಣ್ಯರು ಚಪ್ಪಾಳೆ ತಟ್ಟುವ ಮುಖಾಂತರ ಸಾಲುಮರದ ತಿಮ್ಮಕ್ಕರಿಗೆ ಗೌರವ ಸಲ್ಲಿಸಿದ್ದಾರೆ.