ಬೆಂಗಳೂರು (ಏ.03): ನಂಜನಗೂಡು ಮತ್ತು ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಹೊಸದೊಂದು ದಾಖಲೆ ಮಾಡಲು ಚುನಾವಣಾ ಪ್ರಚಾರ ಸಜ್ಜಾಗಿದೆ. ಎಸ್.ಎಂ.ಕೃಷ್ಣರೊಂದಿಗೆ ಮಾಜಿ ಡಿಸಿಎಂ ಆರ್.ಅಶೋಕ್ ಸಾಥ್ ನಿಂದ ಎರಡು ದಿನಗಳ ಕಾಲ ಪ್ರಚಾರ  ನಡೆಯಲಿದೆ.

ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣ ಬೆಳಸಿದ ಎಸ್.ಎಂ.ಕೃಷ್ಣ ಉಪ-ಚುನಾವಣೆಯ ಪ್ರಚಾರಕ್ಕೆ ತೆರಳುತ್ತಿದ್ದಾರೆ.   ಎಸ್.ಎಂ.ಕೃಷ್ಣ ರವರು ಸತತ ಎರಡು ದಿನಗಳ ಕಾಲ ನಂಜನಗೂಡು, ಗುಂಡ್ಲುಪೇಟೆಯಲ್ಲಿ ಪ್ರಚಾರ ನಡೆಸಲಿದ್ದಾರೆಂದು ಬಿಜೆಪಿ ಮುಖಂಡ ಆರ್.ಅಶೋಕ್ ಹೇಳಿಕೆ ನೀಡಿದ್ದಾರೆ. ಎಸ್.ಎಂ.ಕೃಷ್ಣ ಸೇರಿದಂತೆ ಅನೇಕರು ಬಿಜೆಪಿ ಕಡೆ ಒಲವು ತೋರುತ್ತಿದ್ದು ಜಾಫರ್ ಷರೀಫ್, ಎಂ.ವಿ.ರಾಜಶೇಖರನ್ ಎಲ್ಲರು ಬಿಜೆಪಿಗೆ ಶ್ಲಾಘನೆ ಹರಿಸಿದರು.

ಈ ಉಪ-ಚುನಾವಣೆ ಮುಂದಿನ ಸಾರ್ವತ್ರಿಕ ಚುನಾವಣೆಗೆ ದಿಕ್ಸೂಚಿ ಅಲ್ಲ.ಇದೊಂದು ಸಾಮಾನ್ಯ ಚುನಾವಣ ನಾನು ಬಿಜೆಪಿಯಿಂದ ಪ್ರೇರಿತನಾಗಿ ಪಕ್ಷಕ್ಕೆ ಬಂದಿದ್ದೇನೆ.ಪ್ರಚಾರ ಮಾಡ್ತೀನಿ. ನನಗೆ ಪ್ರಚಾರ ಹೊಸದೇನು ಅಲ್ಲ.ಈಗ ಬಿಜೆಪಿ ಪರ ಪ್ರಚಾರ ಮಾಡಲು ಹೊರಟಿದ್ದೇನೆ ಎಂದು ಎಸ್.ಎಂ.ಕೃಷ್ಣ  ಹೇಳಿದ್ದಾರೆ.