Asianet Suvarna News Asianet Suvarna News

ರ್ಯಾನ್ ಇಂಟರ್'ನ್ಯಾಷನಲ್ ಪ್ರಕರಣ: 3 ವಾರದೊಳಗೆ ಪ್ರತಿಕ್ರಿಯೆ ನೀಡಲು ಕೇಂದ್ರ, ಹರ್ಯಾಣ ಸರ್ಕಾರಕ್ಕೆ ಸುಪ್ರೀಂ ಸೂಚನೆ

ಗುರ್ಗಾಂವ್ ರ್ಯಾನ್ ಇಂಟರ್’ನ್ಯಾಷನಲ್ ಶಾಲೆಯಲ್ಲಿ ಮೃತಪಟ್ಟ 2 ನೇ ತರಗತಿ ಬಾಲಕನ ತಂದೆ ಸಲ್ಲಿಸಿದ ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್ ಒಪ್ಪಿಕೊಂಡಿದ್ದು, ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸಲು ಕೇಂದ್ರ ಸರ್ಕಾರ, ಹರ್ಯಾಣ ಸರ್ಕಾರ ಹಾಗೂ ಸಂಬಂಧಿತ ಅಧಿಕಾರಿಗಳ ಪ್ರತಿಕ್ರಿಯೆಯನ್ನು ಕೋರಿದೆ. ಪ್ರತಿಕ್ರಿಯೆಗೆ 3 ವಾರಗಳ ಗಡುವು ನೀಡಲಾಗಿದೆ.

Ryan school murder  SC issues notice to Centre Haryana govt others seeks reply in 3 weeks

ನವದೆಹಲಿ (ಸೆ.11): ಗುರ್ಗಾಂವ್ ರ್ಯಾನ್ ಇಂಟರ್’ನ್ಯಾಷನಲ್ ಶಾಲೆಯಲ್ಲಿ ಮೃತಪಟ್ಟ 2 ನೇ ತರಗತಿ ಬಾಲಕನ ತಂದೆ ಸಲ್ಲಿಸಿದ ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್ ಒಪ್ಪಿಕೊಂಡಿದ್ದು, ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸಲು ಕೇಂದ್ರ ಸರ್ಕಾರ, ಹರ್ಯಾಣ ಸರ್ಕಾರ ಹಾಗೂ ಸಂಬಂಧಿತ ಅಧಿಕಾರಿಗಳ ಪ್ರತಿಕ್ರಿಯೆಯನ್ನು ಕೋರಿದೆ. ಪ್ರತಿಕ್ರಿಯೆಗೆ 3 ವಾರಗಳ ಗಡುವು ನೀಡಲಾಗಿದೆ.

ಮೃತ ಬಾಲಕನ ತಂದೆ ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಕೋರಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಶಾಲೆಯ ಭದ್ರತಾ ಲೋಪವೇ ತನ್ನ ಮಗನ ಸಾವಿಗೆ ಕಾರಣವೆಂದು ಆರೋಪಿಸಿದ್ದಾರೆ. ಇಂತಹ ದುರ್ಘಟನೆ ಮತ್ತೆಂದೂ ಪುನರಾವರ್ತಿತವಾಗಬಾರದೆಂದು ಎಲ್ಲಾ ಶಾಲೆಗಳಿಗೂ ಮಾರ್ಗದರ್ಶನ ನೀಡಿ ಎಂದು ಅರ್ಜಿಯಲ್ಲಿ ಕೋರಿದ್ದಾರೆ.

ಶಾಲೆಯ ಕೋ ಆರ್ಡಿನೇಟರ್’ರನ್ನು ನಿನ್ನೆ ರಾತ್ರಿ ಬಂಧಿಸಲಾಗಿದೆ. ರ್ಯಾನ್ ಇಂಟರ್’ನ್ಯಾಷನಲ್ ಸಮೂಹದ ಮುಖ್ಯಸ್ಥನನ್ನು ವಿಚಾರಣೆ ಮಾಡಲು ಹರ್ಯಾಣ ಪೊಲೀಸರು ಮುಂಬೈಗೆ ತಂಡವೊಂದನ್ನು ಕಳುಹಿಸಿದ್ದಾರೆ.

 

Follow Us:
Download App:
  • android
  • ios