ರಷ್ಯಾ ವಿಮಾನ ಪತನ, 71 ಸಾವು

First Published 11, Feb 2018, 8:17 PM IST
Russian Plane Crashes 71 Dies
Highlights
  • ಮಾಸ್ಕೋದಿಂದ ಸುಮಾರು 1500 ಕಿ.ಮೀ ದೂರದಲ್ಲಿರುವ ಒರ್ಸ್ಕ್ ನಗರಕ್ಕೆ ಹೊರಟ್ಟಿದ್ದ AN-148 ವಿಮಾನ
  • ಮಾಸ್ಕೋನಿಂದ ಸುಮಾರು 40 ಕಿ.ಮೀ. ದೂರದ ರ್ಯಾಮೆನ್ಸ್ಕೋಯ್ ಎಂಬ ಊರಿನಲ್ಲಿ ವಿಮಾನದ ಅವಶೇಷಗಳು ಪತ್ತೆ

 

ನವದೆಹಲಿ: ರಷ್ಯಾದ ಸಾರಟೋವ್ ಏರ್’ಲೈನ್ಸ್  ಮಾಸ್ಕೋ ಬಳಿ ಪತನಗೊಂಡಿದ್ದು ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಹಾಗೂ ಸಿಬ್ಬಂದಿ ಸೇರಿ 71 ಸಾವನಪ್ಪಿದ್ದಾರೆಂದು ವರದಿಯಾಗಿದೆ.

ಮಾಸ್ಕೋದಿಂದ ಸುಮಾರು 1500 ಕಿ.ಮೀ ದೂರದಲ್ಲಿರುವ ಒರ್ಸ್ಕ್ ನಗರಕ್ಕೆ ಹೊರಟ್ಟಿದ್ದ AN-148 ವಿಮಾನದಲ್ಲಿ 65 ಮಂದಿ ಪ್ರಯಾಣಿಕರು ಹಾಗೂ 6 ಮಂದಿ ಸಿಬ್ಬಂದಿಗಳಿದ್ದರು ಎನ್ನಲಾಗಿದೆ.

ಮಾಸ್ಕೋ ಡೋಮೋಡಿಡೋವೋ ವಿಮಾನ ನಿಲ್ದಾಣದಿಂದ ಹಾರಾಟ ಆರಂಭಿಸಿದ ಕೆಲವೇ ನಿಮಿಷಗಳಲ್ಲಿ ವಿಮಾನವು ರಾಡಾರ್’ನಿಂದ ತನ್ನ ಸಂಪರ್ಕವನ್ನು ಕಳೆದುಕೊಂಡಿದೆ.

ಮಾಸ್ಕೋನಿಂದ ಸುಮಾರು 40 ಕಿ.ಮೀ. ದೂರದ ರ್ಯಾಮೆನ್ಸ್ಕೋಯ್ ಎಂಬ ಊರಿನಲ್ಲಿ ವಿಮಾನದ ಅವಶೇಷಗಳು ಪತ್ತೆಯಾಗಿದ್ದು, ಯಾರೂ ಬದುಕುಳಿದಿಲ್ಲವೆಂದು ಹೇಳಲಾಗಿದೆ.

ವಿಮಾನ ಪತನಕ್ಕೆ ಕಾರಣಗಳೇನು ಎಂಬುವುದು ಈವರೆಗೆ ಧೃಡಪಟ್ಟಿಲ್ಲವೆಂದು ರಷ್ಯಾ ಅಧಿಕಾರಿಗಳು ತಿಳಿಸಿದ್ದಾರೆ. ಪತನಕ್ಕೆ  ಹವಾಮಾನ ವೈಪರೀತ್ಯವೋ ಅಥವಾ ಪೈಲಟ್’ ಪ್ರಮಾದವೋ ಎಂದು ತನಿಖೆಯಿಂದ ತಿಳಿಯುವುದು ಎಂದು ಅವರು ಹೇಳಿದ್ದಾರೆ.

loader