ರಷ್ಯಾದ ರಾಯಭಾರಿಯನ್ನ ಭದ್ರತಾ ಸಿಬ್ಬಂದಿಯೇ ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ಟರ್ಕಿಯ ರಾಜಧಾನಿ ಅಂಕಾರದಲ್ಲಿ ನಡೆದಿದೆ. ಚಿತ್ರಕಲಾ ಪ್ರದರ್ಶನ ಒಂದರಲ್ಲಿ ಭಾಗಿಯಾಗಿದ್ದ ರಷ್ಯನ್ ರಾಯಭಾರಿ ಅಂಡ್ರೆ ಕಾರ್ಲೋವ್ ಅವರನ್ನ ಸೂಟ್ ಧರಿಸಿದ್ದ ಬಂಧೂಕುದಾರಿಯೊಬ್ಬ ಹಿಂದಿನಿಂದ ಗುಂಡು ಹಾರಿಸಿದ್ದಾನೆ. ಕಾರ್ಲೋವ್ ಅವರ ದೇಹಕ್ಕೆ 8 ಗುಂಡುಗಳು ಹೊಕ್ಕಿದ್ದರಿಂದ ಗಂಭೀರ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಅಂಕಾರ(ಡಿ.20): ರಷ್ಯಾದ ರಾಯಭಾರಿಯನ್ನ ಭದ್ರತಾ ಸಿಬ್ಬಂದಿಯೇ ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ಟರ್ಕಿಯ ರಾಜಧಾನಿ ಅಂಕಾರದಲ್ಲಿ ನಡೆದಿದೆ. ಚಿತ್ರಕಲಾ ಪ್ರದರ್ಶನ ಒಂದರಲ್ಲಿ ಭಾಗಿಯಾಗಿದ್ದ ರಷ್ಯನ್ ರಾಯಭಾರಿ ಅಂಡ್ರೆ ಕಾರ್ಲೋವ್ ಅವರನ್ನ ಸೂಟ್ ಧರಿಸಿದ್ದ ಬಂಧೂಕುದಾರಿಯೊಬ್ಬ ಹಿಂದಿನಿಂದ ಗುಂಡು ಹಾರಿಸಿದ್ದಾನೆ. ಕಾರ್ಲೋವ್ ಅವರ ದೇಹಕ್ಕೆ 8 ಗುಂಡುಗಳು ಹೊಕ್ಕಿದ್ದರಿಂದ ಗಂಭೀರ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಇನ್ನು, ಹತ್ಯೆಗೈದ ವ್ಯಕ್ತಿ ಟರ್ಕಿಯ ಸರ್ಕಾರದ ಅಡಿಯಲ್ಲಿ ಪೊಲೀಸ್ ಆಗಿ ಕಾರ್ಯ ನಿರ್ವಹಿಸತ್ತಿದ್ದ ಎನ್ನಲಾಗಿದ್ದು, ಆತನನ್ನ ಹತ್ಯೆಗೈಯಲಾಗಿದೆ. ಹತ್ಯೆಯಾದ ರಷ್ಯಾ ರಾಯಭಾರಿ ಅಂಡ್ರೆ ಕಾರ್ಲೋವ್, 2013ರಿಂದ ರಷ್ಯನ್ ರಾಯಭಾರಿಯಾಗಿ ಟರ್ಕಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಟರ್ಕಿ ಅಧ್ಯಕ್ಷ ಬಶರ್ ಅಲ್ ಅಸದ್ ಅವರ ಬೆಂಬಲಕ್ಕೆ ನಿಂತಿರುವ ರಷ್ಯದ ವಿರುದ್ಧ ಈ ಕೃತ್ಯ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ರಾಯಭಾರಿ ಹತ್ಯೆಗೆ ತೀವ್ರ ಖಂಡನೆ
ಇನ್ನು, ರಷ್ಯಾದ ರಾಯಭಾರಿಯ ಹತ್ಯೆಗೆ ವಿಶ್ವಾದ್ಯಂತ ಭಾರೀ ಖಂಡನೆ ವ್ಯಕ್ತವಾಗಿದೆ. ರಷ್ಯಾ ಸರ್ಕಾರ ಘಟನೆಯನ್ನ ತೀವ್ರವಾಗಿ ಖಂಡಿಸಿದ್ದು, ಇದೊಂದು ಭಯೋತ್ಪಾದನಾ ಕೃತ್ಯ ಎಂದು ಹೇಳಿದೆ. ಅಲ್ಲದೇ, ಅಮಾಯಕರ ಸಾವಿಗೆ ಕಾರಣರಾಗುತ್ತಿರುವ ಭಯೋತ್ಪಾದಕರ ವಿರುದ್ಧ ನಮ್ಮ ಹೋರಾಟ ನಿರಂತರ ಎಂದು ಹೇಳಿದೆ. ಮತ್ತೊಂದೆಡೆ, ಅಮೆರಿಕ ಕೂಡ ಘಟನೆಯನ್ನ ತೀವ್ರವಾಗಿ ಖಂಡಿಸಿದ್ದು, ಭಯೋತ್ಪಾದನೆ ವಿರುದ್ಧದ ಹೋರಾಟವನ್ನ ನಾವು ಮುಂದುವರೆಸುತ್ತೇವೆ ಎಂದಿದೆ. ಅಲ್ಲದೇ, ಈ ಕೃತ್ಯಕ್ಕೆ ವಿಶ್ವಾದ್ಯಂತ ಭಾರೀ ಖಂಡನೆ ವ್ಯಕ್ತವಾಗಿದೆ.
