ಸಮ್ಮೇಳನಕ್ಕೆ ಹೋಗಬೇಕಿದ್ದ ರಷ್ಯಾ ವಿಮಾನ ಹವಾಮಾನ ವೈಪರಿತ್ಯದಿಂದ ಶನಿವಾರ ಬೆಳಗ್ಗೆ ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಿತು
ಬೆಂಗಳೂರು(ಅ.16): ರಷ್ಯಾ ಸಚಿವರು ಮತ್ತು ಅಕಾರಿಗಳಿದ್ದ ವಿಶೇಷ ವಿಮಾನ ಶನಿವಾರ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಗೋವಾದಲ್ಲಿ ಆಯೋಜನೆಗೊಂಡಿದ್ದ ‘‘ಬ್ರಿಕ್ಸ್’’ ಸಮ್ಮೇಳನಕ್ಕೆ ಹೋಗಬೇಕಿದ್ದ ರಷ್ಯಾ ವಿಮಾನ ಹವಾಮಾನ ವೈಪರಿತ್ಯದಿಂದ ಶನಿವಾರ ಬೆಳಗ್ಗೆ ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಿತು. ಈ ಹಿನ್ನೆಲೆಯಲ್ಲಿ ಬೆಳಗ್ಗೆ 9 ಗಂಟೆ ಸುಮಾರಿಗೆ ನಿಲ್ದಾಣದಲ್ಲಿ ಇಳಿದ ವಿಮಾನ 10 ಗಂಟೆ ಸುಮಾರಿಗೆ ಇಂಧನ ತುಂಬಿಸಿಕೊಂಡು ಮತ್ತೆ ಗೋವಾ ಕಡೆ ಹೊರಟಿತು. ಈ ವಿಮಾನದಲ್ಲಿ ರಷ್ಯಾದ ರೈಲ್ವೆ ಸಚಿವ ಹಾಗೂ ಇತರೆ ಗಣ್ಯರಿದ್ದರು ಎಂದು ವಿಮಾನ ನಿಲ್ದಾಣದ ಅಕಾರಿಗಳು ತಿಳಿಸಿದ್ದಾರೆ.
