ಮಂಗಳೂರು[ಸೆ.08]: ಚಂದ್ರಯಾನ-2 ಯೋಜನೆ ವೈಫಲ್ಯದ ಹಿಂದೆ ರಷ್ಯಾ ಇದೆಯೇ? ಇಂಥದ್ದೊಂದು ಅನುಮಾವನ್ನು ಈಗ ಮಾಜಿ ಸಚಿವ ಯು.ಟಿ.ಖಾದರ್‌ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಚಂದ್ರಯಾನ ಕುರಿತು ಮಾತನಾಡಿದ ಅವರು, ‘ಚಂದ್ರಯಾನ ಯೋಜನೆಗೆ ಆರಂಭದಲ್ಲಿ ರಷ್ಯಾ ದೇಶದ ಜತೆಗೆ ಇಸ್ರೋ ಒಪ್ಪಂದ ಮಾಡಿಕೊಂಡಿತ್ತು. 2016ರಲ್ಲಿ ಈ ಒಪ್ಪಂದ ಮುರಿಯಿತು. ಈ ಹಿನ್ನೆಲೆಯಲ್ಲಿ ಚಂದ್ರಯಾನ-2 ಯೋಜನೆ ವೈಫಲ್ಯಕ್ಕೆ ರಷ್ಯಾ ಏನಾದರೂ ಮಾಡಿರಬಹುದು. ಇಂಥ ದೇಶಕ್ಕೆ .7 ಸಾವಿರ ಕೋಟಿಗಳನ್ನು ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದಾರೆ’ ಎಂದು ಖಾದರ್‌ ಟೀಕಿಸಿದರು.

ರಾಜ್ಯದಲ್ಲಿ ಪ್ರಕೃತಿ ವಿಕೋಪದಿಂದ ಸಾವಿರಾರು ಮಂದಿ ಸಂಕಷ್ಟಕ್ಕೀಡಾದಾಗ ನಯಾಪೈಸೆ ನೀಡದ ಕೇಂದ್ರ ರಷ್ಯಾಕ್ಕೆ ಕೋಟ್ಯಂತರ ರು. ನೀಡೋದು ಎಲ್ಲಿಂದ? ರಿಸವ್‌ರ್‍ ಬ್ಯಾಂಕ್‌ನ ಹಣದಲ್ಲಿ ದೇಶ ನಡೆಯುತ್ತಿರುವಾಗ ಈ ರೀತಿಯ ನಡೆಯಿಂದ ಜನರನ್ನು ಇನ್ನಷ್ಟುಸಂಕಷ್ಟಕ್ಕೆ ಕೇಂದ್ರ ಸರ್ಕಾರ ತಳ್ಳಿದೆ. ಇದಕ್ಕೆ ಉತ್ತರ ನೀಡಲೇಬೇಕು ಎಂದರು.