ಟರ್ಕಿ ರಾಜಧಾನಿ ಅಂಕಾರಾದಲ್ಲಿ ರಷ್ಯಾದ ರಾಯಭಾರಿ 62 ವರ್ಷದ ಆಂಡ್ರೇ ಕರ್ಲೋವ್‌ ಅವರನ್ನು ಗುಂಡಿಟ್ಟು ಕೊಲೆ ಮಾಡಲಾಗಿದೆ. ಅಂಕಾರಾದ ಕಾರ್ಯಕ್ರಮವೊಂದಕ್ಕೆ ಭೇಟಿ ನೀಡಿದ್ದರು. ಕಾರ್ಯಕ್ರದ ವೇಳೆ ಗನ್‌ಮ್ಯಾನ್‌ ಒಬ್ಬ ಅವರ ಮೇಲೆ ಎಂಟು ಸುತ್ತು ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ. ಘಟನೆ ಬಳಿಕ ಗನ್‌ಮ್ಯಾನ್‌ ಪರಾರಿಯಾಗಲು ಯತ್ನಿಸಿದ್ದಾನೆ. ಪೊಲೀಸರು ಆತನನ್ನು ಗುಂಡಿಟ್ಟು ಹೊಡೆದುರುಳಿಸಿದ್ದಾರೆ.

ಅಂಕಾರಾ(ಡಿ.20): ಟರ್ಕಿ ರಾಜಧಾನಿ ಅಂಕಾರಾದಲ್ಲಿ ರಷ್ಯಾದ ರಾಯಭಾರಿ 62 ವರ್ಷದ ಆಂಡ್ರೇ ಕರ್ಲೋವ್‌ ಅವರನ್ನು ಗುಂಡಿಟ್ಟು ಕೊಲೆ ಮಾಡಲಾಗಿದೆ. ಅಂಕಾರಾದ ಕಾರ್ಯಕ್ರಮವೊಂದಕ್ಕೆ ಭೇಟಿ ನೀಡಿದ್ದರು. ಕಾರ್ಯಕ್ರದ ವೇಳೆ ಗನ್‌ಮ್ಯಾನ್‌ ಒಬ್ಬ ಅವರ ಮೇಲೆ ಎಂಟು ಸುತ್ತು ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ. ಘಟನೆ ಬಳಿಕ ಗನ್‌ಮ್ಯಾನ್‌ ಪರಾರಿಯಾಗಲು ಯತ್ನಿಸಿದ್ದಾನೆ. ಪೊಲೀಸರು ಆತನನ್ನು ಗುಂಡಿಟ್ಟು ಹೊಡೆದುರುಳಿಸಿದ್ದಾರೆ.

ಘಟನೆಯಲ್ಲಿ ಮೂವರಿಗೆ ಗಾಯಗಳಾಗಿವೆ. ರಾಯಭಾರಿ ಕರ್ಲೋವ್‌ ಮೇಲೆ ದಾಳಿ ಮಾಡಿದ ಗನ್‌ಮ್ಯಾನ್‌ಅನ್ನು ಮೆವ್ಲುಟ್‌ ಮೆರ್ಟ್ ಎಂದು ಗುರುತಿಸಲಾಗಿದೆ. ಆರೋಪಿ ಟರ್ಕಿಯ ವಿದೇಶಾಂಗ ಸಚಿವ ಸುಲೇಮಾನ್‌ ಸೋಯ್ಲು ಅವರ ಗನ್‌ಮ್ಯಾನ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಎಂದು ತಿಳಿದುಬಂದಿದೆ. ಕಳೆದ ಎರಡು ವರ್ಷಗಳಿಂದ ಗನ್‌ಮ್ಯಾನ್‌ ಆಗಿ ಕಾರ್ಯನಿರ್ವಹಿಸುತ್ತಿದ್ದ ಎನ್ನಲಾಗಿದೆ. ರಾಯಭಾರಿ ಹತ್ಯೆ ನಂತರ ಟರ್ಕಿ ಸರ್ಕಾರ ಈ ಘಟನೆಗೆ ಬೇಸರ ವ್ಯಕ್ತಪಡಿಸಿದೆ.