ಗುಜರಾತ್ ಮುಖ್ಯಮಂತ್ರಿ ರಾಜೀನಾಮೆ ..?

First Published 15, Jun 2018, 2:03 PM IST
Rumours of my resignation are lies: Gujarat CM Vijay Rupani
Highlights

  ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ರಾಜೀನಾಮೆ ನೀಡುತ್ತಾರೆ ಎನ್ನುವ ಊಹಾಪೋಹಗಳಿಗೆ ಇದೀಗ ತೆರೆ ಬಿದ್ದಿದ್ದು, ಸ್ವತಃ ಅವರೇ ಇದೀಗ ಸ್ಪಷ್ಟನೆ ನೀಡಿದ್ದಾರೆ. ಅಲ್ಲದೇ ಇದೆಲ್ಲಾ ಕೇವಲ ವದಮತಿ ಎಂದು ಹೇಳಿದ್ದಾರೆ.  

ಗಾಂಧಿನಗರ : ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ರಾಜೀನಾಮೆ ನೀಡುತ್ತಾರೆ ಎನ್ನುವ ಊಹಾಪೋಹಗಳಿಗೆ ತೆರೆ ಬಿದ್ದಿದೆ. ಈ ಬಗ್ಗೆ  ಸ್ವತಃ ಅವರೇ  ಇದೀಗ ಸ್ಪಷ್ಟನೆ ನೀಡಿದ್ದಾರೆ. 

ಗುಜರಾತ್ ಮಂತ್ರಿಮಂಡಲದಲ್ಲಿ ಮುಖ್ಯಮಂತ್ರಿ ವಿಜಯ್ ರೂಪಾನಿ ರಾಜೀನಾಮೆಗೆ ಒತ್ತಡ ಕೇಳಿ ಬರುತ್ತಿದೆ ಎಂದು ಪಾಟೀದಾರ್ ಆಂದೋಲನದ ಮುಖಂಡರಾದ ಹಾರ್ದಿಕ್ ಪಟೇಲ್ ಹೇಳಿಕೆ ನೀಡಿದ್ದರು. 

ಅಲ್ಲದೇ ಅವರು ಶಿಘ್ರವೇ ತಮ್ಮ ಸ್ಥಾನವನ್ನೂ ಕೂಡ ತೊರೆಯಲಿದ್ದಾರೆ . 10 ದಿನಗಳಲ್ಲೇ ಈ ಬಗ್ಗೆ ಘೋಷಣೆ ಹೊರಬೀಳಲಿದೆ. ಶೀಘ್ರದಲ್ಲೇ ಪಾಟೀದರ್ ಅಥವಾ ರಜಪೂತ್ ಮುಖಂಡರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ ಎಂದು ಹೇಳಿದ್ದರು. 

ಇದಕ್ಕೆ ಇದೀಗ ವಿಜಯ್ ರೂಪಾನಿ ಹಾಗೂ ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಸೇರಿದಂತೆ ಅನೇಕ ಮುಖಂಡರು ಪ್ರತಿಕ್ರಿಯೆ ನೀಡಿದ್ದು, ಇದೊಂದು ವದಂತಿ  ಎಂದು ಸ್ಪಷ್ಟ ಪಡಿಸಿದ್ದಾರೆ. 

loader