ಬೆಂಗಳೂರು (ಅ.19): ದುಷ್ಕರ್ಮಿಗಳಿಂದ ಕೊಲೆಯಾದ ಆರೆಸ್ಸೆಸ್ ಕಾರ್ಯಕರ್ತ ರುದ್ರೆಶ್ ನಿವಾಸಕ್ಕೆ ಇಂದು ಕೇಂದ್ರ ಸಚಿವ ಸದಾನಂದ ಗೌಡ ಭೇಟಿ ನೀಡಿದ್ದಾರೆ.

ರುದ್ರೇಶ್ ಒಬ್ಬ ದೇಶ ಭಕ್ತ, ರುದ್ರೇಶ್ ಕೊಲೆಯು ರಾಜಕೀಯ ಪ್ರೇರಿತ ಹತ್ಯೆಯಾಗಿದೆ, ಬಿಜೆಪಿ ಏಳಿಗೆಯನ್ನು ಸಹಿಸದವರು ಈ ರೀತಿ ಕೃತ್ಯ ನಡೆಸಿರುವ ಶಂಕೆ ಇದೆ ಎಂದು ಅವರು ಹೇಳಿದ್ದಾರೆ.

ಕೇರಳದಲ್ಲೂ ಬಿಜೆಪಿ ಬೆಳವಣಿಗೆಯನ್ನು ಪ್ರತಿಪಕ್ಷಗಳು ಸಹಿಸಿಕೊಳ್ಳುತ್ತಿಲ್ಲ, ಬಿಜೆಪಿ ಎಂದರೆ ಟೆಕನ್ ಫಾರ್ ಗ್ರಾಂಟೆಂಡ್ ಎನ್ನುವಂತಾಗಿದೆ ಎಂದು ಅವರು ಹೇಳಿದ್ದಾರೆ.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ, ಈವರೆಗೂ ರುದ್ರೇಶ್ ಕೊಲೆ ಆರೋಪಿಗಳನ್ನು ಬಂಧಿಸಿಲ್ಲ ಎಂದು ಸದಾನಂದ ಗೌಡ ಹೇಳಿದ್ದಾರೆ.