ಬೆಂಗಳೂರು(ಅ.27): ಅಂತೂ ಇಂತೂ ಆರೆಸ್ಸೆಸ್ ಕಾರ್ಯಕರ್ತ ರುದ್ರೇಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ನವೀದ್, ನಜೀರ್ ಮತ್ತು ಮಜರ್ ಬಂಧಿತ ಆರೋಪಿಗಳು. ಕೊಲೆಯ ಪ್ರಮುಖ ಸೂತ್ರಧಾರ, 4ನೇ ಆರೋಪಿಗಾಗಿ ಪೊಲೀಸರ ಹುಡುಕಾಟ ನಡೆಸಿದ್ದಾರೆ. ರುದ್ರೇಶ್​ ಕೊಲೆಗೆ ಸೈದ್ಧಾಂತಿಕ ಕಾರಣವೇ ಹೊರತು ವೈಯಕ್ತಿಕ ದ್ವೇಷವಲ್ಲ ಎಂಬ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ.

CLICK HERE.. ನನ್ನ ಗಂಡನಿಗೆ ಬಂದ ಸ್ಥಿತಿ ಬೇರಾರಿಗೂ ಬರಬಾರದು - ರುದ್ರೇಶ್ ಪತ್ನಿ

 ರುದ್ರೇಶ್​ ಕೊಲೆ ಆರೋಪಿಗಳೆಲ್ಲ SDPI(ಸೋಷಿಯಲ್​ ಡೆಮಾಕ್ರಟಿಕ್​ ಪಾರ್ಟಿ ಆಫ್ ಇಂಡಿಯಾ) ಎಂಬ ರಾಜಕೀಯ ಪಕ್ಷದ ಸದಸ್ಯರು. SDPI ಕೇರಳದಲ್ಲಿ ಪ್ರಭಾವಿ ಪ್ರಾದೇಶಿಕ ಪಕ್ಷವಾಗಿದ್ದು, ಮಂಗಳೂರು,ಬೆಂಗಳೂರು, ಮೈಸೂರು, ಮಡಿಕೇರಿಯಲ್ಲೂ ಪಕ್ಷದ ಘಟಕಗಳಿವೆ.