ಇದು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿಯವರ ಖಾಸಾ ಸಹೋದರಿಯ ದರ್ಪ. ವ್ಯಕ್ತಿಯ ಕೊರಳಪಟ್ಟಿ ಹಿಡಿದು ಅವಾಚ್ಯ ಹಾಗೂ ಅಮಾನುಷವಾಗಿ ವರ್ತಿಸುತ್ತಿರುವವರ ಹೆಸರು ಪ್ರೇಮಾ. ರಾಣೆಬೆನ್ನೂರಿನ ಬಿಜೆಎಸ್ ಎಸ್ ಖಾಸಗಿ ಕಾಲೇಜು ಗುಮಾಸ್ತೆಯಾಗಿದ್ದಾರೆ.

ಹಾವೇರಿ(ಆ.19): ಇದು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿಯವರ ಖಾಸಾ ಸಹೋದರಿಯ ದರ್ಪ. ವ್ಯಕ್ತಿಯ ಕೊರಳಪಟ್ಟಿ ಹಿಡಿದು ಅವಾಚ್ಯ ಹಾಗೂ ಅಮಾನುಷವಾಗಿ ವರ್ತಿಸುತ್ತಿರುವವರ ಹೆಸರು ಪ್ರೇಮಾ. ರಾಣೆಬೆನ್ನೂರಿನ ಬಿಜೆಎಸ್ ಎಸ್ ಖಾಸಗಿ ಕಾಲೇಜು ಗುಮಾಸ್ತೆಯಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಂದಹಾಗೆ, ಈ ಕಾಲೇಜಿನ ಆಡಳಿತಾತ್ಮಕ ವಿಷಯಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ಮದ್ಯೆ ವ್ಯಾಜ್ಯವಿದೆ. ಅದೀಗ ಕೋರ್ಟ್ ಅಂಗಳದಲ್ಲಿದೆ. ಸದ್ಯ ಕಾಲೇಜಿನ ಆಡಳಿತ, ಸಚಿವ ರುದ್ರಪ್ಪ ಲಮಾಣಿಯವರ ಎದುರುದಾರರ ಕೈಯಲ್ಲಿದೆ. ಕಳೆದ ವಾರ ಈ ಆಡಳಿತ ಮಂಡಳಿಯ ಸಭೆ ಕರೆಯಲಾಗಿತ್ತು. ಅದರಲ್ಲಿ ಸಂಸ್ಥೆಯ ಸೆಕ್ರೆಟರಿ ಎಂ.ಜೆ.ಪಾಟೀಲ್ ತಮ್ಮ ಆಡಳಿತ ಸಮಿತಿಯ ಸಭೆ ಕರೆದಿದ್ದರು. ಇದಕ್ಕೂ ಸಹ ಸದಸ್ಯ ಗೋಪಾಲ್ ಲಮಾಣಿಯವರನ್ನೂ ಸಭೆಗೆ ಕರೆಯಲಾಗಿತ್ತು.

ಈ ಹೊತ್ತಲ್ಲಿ ಸಭೆ ನಡೆಯುತ್ತಿರುವಾಗಲೆ ಸಚಿವ ರುದ್ರಪ್ಪ ಲಮಾಣಿಯವರ ಸಹೋದರಿ ಪ್ರೇಮಾ ನಾರಾಯಣ್ ಏಕಾಏಕಿ ಬಂದು ಗೋಪಾಲ್'ರ ಕೊರಳಪಟ್ಟಿ ಹಿಡಿದು ಹೊರಹಾಕಲು ಯತ್ನಿಸಿದ್ದಾರೆ. ಆಡಳಿತ ಸಮಿತಿ ಸರ್ವ ಸದಸ್ಯರ ಎದುರೇ ಈ ಘಟನೆ ನಡೆದಿದೆ.

ಅವಾಚ್ಯವಾಗಿ ಬೈದು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಅಂತಾ ಗೋಪಾಲ್ ಲಮಾಣಿ ರಾಣೆಬೆನ್ನೂರು ಟೌನ್ ಪೊಲೀಸ್ ಠಾಣೆಯಲ್ಲಿ ಹಲ್ಲೆ, ಕೊಲೆಗೆ ಯತ್ನದ ಪ್ರಕರಣ ದಾಖಲಿಸಿದ್ದಾರೆ. ಇತ್ತ ಸಚಿವ ರುದ್ರಪ್ಪ ಲಮಾಣಿಯವರ ಸಹೋದರಿ ಪ್ರೇಮಾರವರೂ ಸಹ ಸುಮಾರು ಏಳು ಜನ್ರ ಮೇಲೆ ಜಾತಿನಿಂದನೆ ಪ್ರಕರಣ ದಾಖಲಿಸಿದ್ದಾರೆ..