ಬಿಬಿಎಂಪಿ ಭಾರೀ ಟೀಕೆಗಳ ಬಳಿಕ ಗುಂಡಿ ಮುಚ್ಚೋ ಕೆಲಸ ಮಾಡಿದೆ. ಈಗ ಗುಂಡಿ ಮುಚ್ಚೋಕೆ ಹೊಸ ಐಡಿಯಾ ಮಾಡುತ್ತಿದೆ.
ಬೆಂಗಳೂರು (ಡಿ.24): ಬಿಬಿಎಂಪಿ ಭಾರೀ ಟೀಕೆಗಳ ಬಳಿಕ ಗುಂಡಿ ಮುಚ್ಚೋ ಕೆಲಸ ಮಾಡಿದೆ. ಈಗ ಗುಂಡಿ ಮುಚ್ಚೋಕೆ ಹೊಸ ಐಡಿಯಾ ಮಾಡುತ್ತಿದೆ ಬಿಬಿಂಎಪಿ. ಇದೀಗ ಗುಂಡಿ ಮುಕ್ತ ಬೆಂಗಳೂರು ಮಾಡ್ತಿವಿ ಅಂತಿರುವ ಬಿಬಿಎಂಪಿ ಬಹುತೇಕ ವೈಟ್ ಟ್ಯಾಪಿಂಗ್ ರಸ್ತೆಗಳನ್ನ ಮಾಡುತ್ತಿದ್ದು, ಮತ್ತೊಂದು ಕಡೆ ರಬ್ಬರ್ ಮ್ಯಾಟ್ ಬಳಸಿ ಟಾರ್ ರೋಡ್ಗಳನ್ನ ನಿರ್ಮಾಣ ಮಾಡುತ್ತಿದೆ.
ನಗರದ ಮಡಿವಾಳದ ಅಂಡರ್ಪಾಸ್ ಬಳಿ ಎರಡು ಬದಿಯಲ್ಲಿ ಸುಮಾರು 500ಮೀಟರ್ಗೂ ಹೆಚ್ಚು ಉದ್ದ ರಬ್ಬರ್ ಮ್ಯಾಟ್ ಟಾರ್ ರೋಡ್ ನಿರ್ಮಾಣ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಇದನ್ನ ಪರಿಚಯಿಸಲಾಗುತ್ತಿದೆ. ಇದರ ವಿಶೇಷ ಎಂದರೆ ಮಳೆ ಬಂದರೂ ಕೂಡ ಟಾರ್ ಕಿತ್ತು ಬರುವುದಿಲ್ಲ. ಅಷ್ಟೆ ಅಲ್ಲ ಇಂಥಹ ರಸ್ತೆಗಳು ಬರೋಬ್ಬರಿ 5 ವರ್ಷಗಳಾದ್ರು ಬಾಳಿಕೆ ಬರುತ್ತೆ ಅಂತಾ ಬಿಬಿಎಂಪಿ ಗುತ್ತಿಗೆದಾರ ಸ್ಟಾಲಿನ್ ಹೇಳುತ್ತಾರೆ.
ಇನ್ನು ಈ ರಬ್ಬರ್ ಮ್ಯಾಟ್ ಗಳನ್ನ ಮುಂಬೈನಿಂದ ಇಂಪೋರ್ಟ್ ಮಾಡಿಕೊಳ್ಳಲಾಗಿದೆ. ಈಗಾಗಲೇ ಮುಂಬೈ, ನಾಗಪುರದಲ್ಲಿ ಇದನ್ನ ಬಳಸಿ ಅಲ್ಲಿನ ನಗರಗಳು ಸಕ್ಸಸ್ ಆಗಿವೆ. ಇಡೀ ಬೆಂಗಳೂರಿನಲ್ಲಿ ಇನ್ನುಮುಂದೆ ಇಂತಹ ರಸ್ತೆಗಳನ್ನ ಮಾಡುತ್ತೇವೆ ಎಂದು ಬಿಬಿಎಂಪಿ ಹೇಳುತ್ತಿದೆ. ಇನ್ನು ಬಿಬಿಎಂಪಿಯ ಕೌನ್ಸಿಲ್ ಸಭೆಗೆ ಈ ವಿಷಯವನ್ನ ತರದೇ ರಸ್ತೆಗಳನ್ನ ನಿರ್ಮಾಣ ಮಾಡುತ್ತಿರುವುದು ನೋಡಿದರೆ, ಅನುಮಾನ ಮೂಡಿದೆ ಅಂತಾರೆ ಸಾಮಾಜಿಕ ಕಾರ್ಯಕರ್ತ ಅಮರೇಶ್.
