ಮಂತ್ರಾಲಯ ರಸ್ತೆಯಲ್ಲಿರುವ ಔಟ್ ಚೆಕ್ ಪೋಸ್ಟ್ ನಲ್ಲಿ ನಿರಂತರ ವಸೂಲಿ ನಡೆಸುತ್ತಿದ್ದಾರೆ .
ರಾಯಚೂರು ಪೊಲೀಸರು ಹಗಲು ದರೋಡೆಗಿಳಿದಿದ್ದಾರೆ . ಹಾಡ ಹಗಲೇ ನಡೆಯುವ ಅಕ್ರಮ ಸುವರ್ಣ ನ್ಯೂಸ್ ಕ್ಯಾಮರಾದಲ್ಲಿ ಸೆರೆಯಾಗಿದೆ . ಮಂತ್ರಾಲಯ ರಸ್ತೆಯಲ್ಲಿರುವ ಔಟ್ ಚೆಕ್ ಪೋಸ್ಟ್ ನಲ್ಲಿ ನಿರಂತರ ವಸೂಲಿ ನಡೆಸುತ್ತಿದ್ದಾರೆ . ಈ ಮಾರ್ಗದಲ್ಲಿ ಸಂಚರಿಸೋ ಆಟೋ ,ಟ್ರ್ಯಾಕ್ಟರ್ ,ಲಾರಿಗಳಿಂದಿಡಿದು ನಗರಕ್ಕೆ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಬರುವ ರೈತರಿಂದ ಪ್ರತಿ ವಾಹನಕ್ಕೆ ಇಂತಿಷ್ಟು ಹಣವನ್ನ ಪೀಕುತ್ತಿದ್ದಾರೆ . ತಪಾಸಣೆ ಹೆಸರಿನಲ್ಲಿ ವಾಹನಗಳನ್ನ ತಡೆಯುತ್ತಾರಾದರೂ ಯಾವುದೇ ದಾಖಲಾತಿ ಪರಿಶೀಲಿಸುವುದು ಇವರ ಉದ್ದೇಶವಾಗಿಲ್ಲ . ತಡೆದ ವಾಹನಸವಾರರು ನೇರವಾಗಿ ಹಣ ನೀಡಿ ಹೋಗುತ್ತಿರಬೇಕು . ಪೊಲೀಸರ ಲಂಚಬಾಕತನ ನಿರಂತರ ನಡೆಯುತ್ತಿದ್ರೂ ಮೇಲಾಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿರೋದು ಸಾರ್ವಜನಿಕರ ಅನುಮಾನಕ್ಕೆ ಕಾರಣವಾಗಿದೆ .ಇನ್ನು ಇದೇ ವೇಳೆ ಪೊಲೀಸರ ಕೃತ್ಯವನ್ನ ಸೆರೆಹಿಡಿಯಲು ಹೋದವರ ಮೇಲೂ ಪೊಲೀಸರು ದರ್ಪ ತೋರಿಸಿದ ಪ್ರಸಂಗವೂ ನಡೀತು.
