ನವದೆಹಲಿ[ಜೂ. 19] ಹಾರ್ಡ್ ಕೌರ್ ಎಂದೇ ಪ್ರಸಿದ್ಧಿ ಪಡೆದಿರುವ ಯುಕೆ ಮೂಲದ ಗಾಯಕಿ ತರಣ್ ಕೌರ್ ಧಿಲ್ಲೋನ್  ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೋಹನ್ ಭಾಗವತ್ ಮತ್ತು ಯೋಗಿ ಆದಿತ್ಯನಾಥ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಯಾರಿವನು? ಕೌರ್ ಎಂದು ಹಲವರು ಆಕ್ರೋಶ ಹೊರ ಹಾಕಿದ್ದಾರೆ.  26/11  ಮುಂಬೈ ದಾಳಿ ಮತ್ತು ಪುಲ್ವಾಮಾ ದಾಳಿಗೆ ಆರ್ ಎಸ್ ಎಸ್  ಮೂಲ ಕಾರಣ ಎಂದು ಆರೋಪ ಮಾಡಿರುವುದು ವಿವಾದ ಹೊತ್ತಿಸಿದೆ.

ದುಷ್ಕರ್ಮಿಗಳಿಂದ ಹತ್ಯೆಯಾದ ಗೌರಿ ಲಂಕೇಶ್ ಅವರ ಚಿತ್ರವನ್ನು ಶೇರ್ ಮಾಡಿಕೊಂಡಿರುವ ಗಾಯಕಿ  ಗೌರಿ ಕುರಿತಾಗಿ ‘ನಿಮ್ಮನ್ನು ಮರೆಯಲು ಸಾಧ್ಯವೇ ಇಲ್ಲ’ ಎಂದು ಬರೆದುಕೊಂಡಿದ್ದಾರೆ.