ಆರ್ಯಭಟ, ಶಿವಾಜಿಯಂತಹ ಮಗು ಬೇಕೇ?: ಆರೆಸ್ಸೆಸ್‌ ಬಳಿ ಸಿದ್ಧಸೂತ್ರವಿದೆ!

RSS Publishes Books For Women To Produce Kids Like Maharana Pratap Aryabhatta
Highlights

ಪುರಾತನ ಅಥವಾ ಐತಿಹಾಸಿಕ ಬುದ್ಧಿವಂತ, ಶೂರ ವ್ಯಕ್ತಿಗಳಂತೆಯೇ ತಮ್ಮ ಮಕ್ಕಳು ಆಗಬೇಕೆಂಬುದು ಪ್ರತಿಯೊಬ್ಬರಿಗೂ ಕನಸಿರುತ್ತದೆ. ಅಂತಹ ಆಸೆಯನ್ನು ಈಡೇರಿಸುವುದಕ್ಕೆ ಇದೀಗ ಆರೆಸ್ಸೆಸ್‌ನ ಗರ್ಭವಿಜ್ಞಾನ ಅನುಸಂಧಾನ ಕೇಂದ್ರವೊಂದು ಸಿದ್ಧಸೂತ್ರ ರಚಿಸಿದೆ.

ನವದೆಹಲಿ: ಪುರಾತನ ಅಥವಾ ಐತಿಹಾಸಿಕ ಬುದ್ಧಿವಂತ, ಶೂರ ವ್ಯಕ್ತಿಗಳಂತೆಯೇ ತಮ್ಮ ಮಕ್ಕಳು ಆಗಬೇಕೆಂಬುದು ಪ್ರತಿಯೊಬ್ಬರಿಗೂ ಕನಸಿರುತ್ತದೆ. ಅಂತಹ ಆಸೆಯನ್ನು ಈಡೇರಿಸುವುದಕ್ಕೆ ಇದೀಗ ಆರೆಸ್ಸೆಸ್‌ನ ಗರ್ಭವಿಜ್ಞಾನ ಅನುಸಂಧಾನ ಕೇಂದ್ರವೊಂದು ಸಿದ್ಧಸೂತ್ರ ರಚಿಸಿದೆ.

ನಿಮಗೆ ಆರ್ಯಭಟನಂತಹ ಬುದ್ಧಿವಂತ ಗಣಿತಜ್ಞ, ಶಿವಾಜಿ ಮಹಾರಾಜ ಅಥವಾ ರಾಣಾ ಪ್ರತಾಪ್‌ನಂತಹ ಮೈಕಟ್ಟಿನ ಮಗ ಬೇಕಾದಲ್ಲಿ, ಗರ್ಭಿಣಿ ಮಹಿಳೆ ಗರ್ಭಧಾರಣೆಯ ಪ್ರತಿ ಹಂತದಲ್ಲಿ ಏನು ಮಾಡಬೇಕೆಂಬುದರ ಕುರಿತ ಪುಸ್ತಕ, ಸಿಡಿಗಳನ್ನು ಕೇಂದ್ರ ಬಿಡುಗಡೆಗೊಳಿಸಿದ್ದು, ಅದನ್ನು ಪಾಲಿಸಿದಲ್ಲಿ ತಮ್ಮ ಬಯಕೆಯ ಮಗು ದೊರೆಯವುದಂತೆ.

ಗುಜರಾತ್‌ನ ಜಾಮ್‌ನಗರ ಮೂಲದ ಕೇಂದ್ರ ಅತ್ಯುತ್ತಮ ಗರ್ಭ ಸಂಸ್ಕಾರವನ್ನು ಒದಗಿಸುವ ಬಗ್ಗೆ ಭರವಸೆ ನೀಡಿದೆ. ಈ ಕುರಿತು ‘ಕುಟುಂಬ ಪ್ರಭೋಧನಾ’ ಎಂಬ ವಿಚಾರ ಸಂಕಿರಣ ಕಾರ್ಯಕ್ರಮವನ್ನೂ ಹಮ್ಮಿಕೊಂಡಿದೆ. ಮಕ್ಕಳು ಬುದ್ಧಿವಂತ ಮತ್ತು ಲಕ್ಷಣವಾಗಿರುವುದು ಹೆತ್ತವರ ಸಂಸ್ಕೃತಿ ಮತ್ತು ಮೌಲ್ಯವನ್ನು ಆಧರಿಸಿದೆ ಎಂದು ಕೇಂದ್ರದ ಮ್ಯಾನೇಜರ್‌ ರೇಖಾ ಗೌರ್‌ ಹೇಳುತ್ತಾರೆ.

loader