ರಾಜ್ಯ ರಾಜಕಾರಣದಲ್ಲಿ ಮತ್ತೆ ಅಲ್ಲೋಲ-ಕಲ್ಲೋಲ ಆರಂಭವಾಗಲಿದೆಯೇ? ಡಾ. ಉಮೇಶ್ ಜಾಧವ್ ಸೇರ್ಪಡೆ ನಂತರ ಇಂಥದ್ದೊಂದು ಪ್ರಶ್ನೆ ಸಹಜವಾಗಿಯೇ ಎದ್ದಿದೆ.

ಮೈಸೂರು(ಮಾ. 06) ಮತ್ತೊಮ್ಮೆ ಆಪರೇಷನ್ ಕಮಲ ಮಾಡಲು ಬಿಜೆಪಿ ಯೋಜನೆ ಹಾಕಿಕೊಂಡಿದೆಯೇ? ನಾಯಕರ ಹೇಳಿಕೆ ಇಂಥದ್ದೊಂದು ಪ್ರಶ್ನೆಯನ್ನು ಎತ್ತಿದೆ.

ಬಿಜೆಪಿ ಸರ್ಕಾರ ಮಾಡೋದು ಮ್ಯಾಟರ್ ಆಫ್ ಡೇಸ್. ಉಮೇಶ್ ಜಾಧವ್ ರಾಜೀನಾಮೆ ಮೂಲಕ ಆರಂಭವಾಗಿದೆ. ಇನ್ನೂ ಎರಡು ತಿಂಗಳೋ, ಎರಡುವರೆ ತಿಂಗಳಲ್ಲೋ ಬಿಜೆಪಿ ಸರ್ಕಾರ ಬರುತ್ತದೆ ಎಂದು ಬಿಜೆಪಿ ಸಂಘಟನಾ ಕಾರ್ಯದರ್ಶಿ ಸಂತೋಷ್ ಹೇಳಿಕೆ ನೀಡಿದ್ದಾರೆ.

ಸಿದ್ದರಾಮಯ್ಯ ಈ ಸವಾಲನ್ನು ಈಶ್ವರಪ್ಪ ಸ್ವೀಕರಿಸ್ತಾರಾ?

ದೇವೇಗೌಡ ಹಾಗೂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಜಾತಿಯನ್ನು ಜೆಡಿಎಸ್‌ ನವರು ಅವರ ಅನುಕೂಲಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯ ನವರೂ ಸಹ ಅದೇಜಾತಿ ಪ್ರೇಮದಿಂದ ರಾಜಕಾರಣ ಮಾಡ್ತಿದ್ದಾರೆ. ಇವರು ಸಮಾಜವಾದಿಯಾಗಿದ್ರೆ ಸರ್ವಜ್ಞ ನಗರ, ಎನ್.ಆರ್ ಕ್ಷೇತ್ರ, ಶಿವಾಜಿ ನಗರದಲ್ಲಿ ನಿಲ್ಲಬೇಕಿತ್ತು ಎಂದು ಸವಾಲು ಹಾಕಿದರು.

ಅದನ್ನ ಬಿಟ್ಟು ಕೊನೆಗೆ ಆಯ್ಕೆ ಮಾಡಿಕೊಂಡಿದ್ದು ಅವರ ಜಾತಿಯವರು ಹೆಚ್ಚಿರುವ ಬದಾಮಿ ಕ್ಷೇತ್ರವನ್ನು. ಅಲ್ಲಿಯೂ ಸಹ ಶ್ರೀರಾಮುಲು ಉಸಿರುಗಟ್ಟಿಸಿದ್ದರು. ಇನ್ನೊಂದ್ ಸ್ವಲ್ಪ ಉಸಿರುಗಟ್ಟಿಸಿದ್ರೆ ಸಿದ್ದರಾಮಯ್ಯ ವಿಶ್ರಾಂತಿ ಜೀವನ ಅನುಭವಿಸಬೇಕಾಗಿತ್ತು. ಆದ್ರೆ ಸ್ವಲ್ಪದರಲ್ಲೆ ಬಚಾವಾಗಿದ್ದಾರೆ ಎಂದು ವ್ಯಂಗ್ಯವಾಡಿದರು.