ತಂದೆ ನಾಗ್ಪುರ್ ಭೇಟಿಗೆ ಮಗಳಿಂದ ತೀವ್ರ ವಿರೋಧ..!

RSS invite to Pranab Mukherjee BJP’s dirty trick, says daughter
Highlights

ಇಂದು ನಾಗ್ಪುರದಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮದಲ್ಲಿ ಪ್ರಣಬ್ ಮುಖರ್ಜಿ ಭಾಗಿ
ಪ್ರಣಬ್ ನಿರ್ಧಾರಕ್ಕೆ ಹಲವು ಕಾಂಗ್ರೆಸ್ಸಿಗರ ವಿರೋಧ
ಪ್ರಣಬ್ ಮಗಳು ಶಮಿರ್ಮಿಷ್ಟಾ ಕೂಡ ತಂದೆ ನಿರ್ಣಯ ವಿರೋಧಿ
ಸರಣಿ ಟ್ವಿಟ್ ನಲ್ಲಿ ತಂದೆ ನಿರ್ಧಾರ ಟೀಕಿಸಿದ ಶರ್ಮಿಷ್ಟಾ   

ನವದೆಹಲಿ(ಜೂ.7): ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಇಂದು ನಾಗ್ಪುರದಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಈ ಕುರಿತು ಪರ ವಿರೋಧದ ಚರ್ಚೆ ತುಸು ಬಿರುಸಿನಿಂದಲೇ ನಡೆಯುತ್ತಿದೆ. ಆರ್‌ಎಸ್‌ಎಸ್ ಕೇಂದ್ರ ಕಚೇರಿಗೆ ಭೇಟಿ ನೀಡುವ ಪ್ರಣಬ್ ನಿರ್ಧಾರವನ್ನು ಇದೀಗ ಅವರ ಪುತ್ರಿ ಶರ್ಮಿಷ್ಟಾ ಮುಖರ್ಜಿ ಕೂಡ ವಿರೋಧಿಸಿದ್ದಾರೆ. 

ನವದೆಹಲಿಯ ಕಾಂಗ್ರೆಸ್ ವಕ್ತಾರೆಯಾಗಿರುವ ಶರ್ಮಿಷ್ಟಾ ಮುಖರ್ಜಿ, ತಮ್ಮ ತಂದೆಯ ನಾಗ್ಪುರ್ ಭೇಟಿಯನ್ನು ವಿರೋಧಿಸಿದ್ದಾರೆ. ಈ ಕುರಿತು ಸರಣಿ ಟ್ವಿಟ್ ಮಾಡಿರುವ ಅವರು, ಬಿಜೆಪಿ ಸುಳ್ಳು ಪ್ರಚಾರ ಹಬ್ಬಿಸಲು ಪ್ರಣಬ್ ಆಸ್ಪದ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ಬಿಜೆಪಿ ಹಾಗೂ ಸಂಘಪರಿವಾರ ಸುಳ್ಳು ಕಥೆಗಳನ್ನು ಹರಡುವುದಕ್ಕೆ ಪ್ರಣಬ್ ಮುಖರ್ಜಿ ಅತ್ಯುತ್ತಮ ಅವಕಾಶ ಒದಗಿಸುತ್ತಿದ್ದಾರೆ, ಅವರು ಅಲ್ಲಿ ಮಾಡಿದ ಭಾಷಣವನ್ನು ಮರೆಯಲಾಗುತ್ತದೆ, ಆದರೆ ದೃಶ್ಯಗಳು ಮಾತ್ರ ಉಳಿಯುತ್ತವೆ ಎಂದು ಶರ್ಮಿಷ್ಟಾ ಹೇಳಿದ್ದಾರೆ. ಬಿಜೆಪಿಯ ಸುಳ್ಳು ಪ್ರಚಾರ ಮಾಡುವ ವಿಭಾಗ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಮಾಜಿ ರಾಷ್ಟ್ರಪತಿಗಳು ಅರ್ಥಮಾಡಿಕೊಳ್ಳಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

loader