Asianet Suvarna News Asianet Suvarna News

ಸರಕಾರದ ನೀತಿ ಧಿಕ್ಕರಿಸಿ, ಸರಕಾರಿ ಶಾಲೆ ಧ್ವಜಾರೋಹಣ ಮಾಡಿದ ಭಾಗವತ್

ಕಳೆದ ಸ್ವಾತಂತ್ರ್ಯೋತ್ಸವದಲ್ಲಿ ಜಿಲ್ಲಾಧಿಕಾರಿ ಸೂಚನೆ ವಿರೋಧಿಸಿ, ಧ್ವಜಾರೋಹಣ ಮಾಡಿದ್ದ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಗವತ್ ಗಣರಾಜ್ಯೋತ್ಸವದಂದೂ ಸರಕಾರದ ಆದೇಶವನ್ನು ಗಾಳಿಗೆ ತೂರಿ, ಇಲ್ಲಿನ ಶಾಲೆಯೊಂದರಲ್ಲಿ ಧ್ವಜಾರೋಹಣ ನೆರವೇರಿಸಿದ್ದಾರೆ.

RSS chief Mohan Bhagwat flouts govt rule hoists tricolour in Kerala school

ಪಾಲಕ್ಕಾಡ್: ಕಳೆದ ಸ್ವಾತಂತ್ರ್ಯೋತ್ಸವದಲ್ಲಿ ಜಿಲ್ಲಾಧಿಕಾರಿ ಸೂಚನೆ ವಿರೋಧಿಸಿ, ಧ್ವಜಾರೋಹಣ ಮಾಡಿದ್ದ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಗವತ್ ಗಣರಾಜ್ಯೋತ್ಸವದಂದೂ ಸರಕಾರದ ಆದೇಶವನ್ನು ಗಾಳಿಗೆ ತೂರಿ, ಇಲ್ಲಿನ ಶಾಲೆಯೊಂದರಲ್ಲಿ ಧ್ವಜಾರೋಹಣ ನೆರವೇರಿಸಿದ್ದಾರೆ.

ಧ್ವಜ ಸಂಹಿತೆ ನೀತಿಗೆ  ವಿರುದ್ಧವಾಗಿ, ಕೇರಳದ ಶಾಲೆಗಳಲ್ಲಿ ಶಾಲಾ ಮುಖ್ಯಸ್ಥರು ಹೊರತು ಪಡಿಸಿ ಬೇರೆ ಯಾರೂ ರಾಷ್ಟ್ರಧ್ವಜಾರೋಹಣ ಮಾಡುವಂತಿಲ್ಲವೆಂದು ಸರಕಾರ ವಿವಾದಾತ್ಮಕ ಸುತ್ತೋಲೆ  ಹೊರಡಿಸಿತ್ತು. 

ಅಲ್ಲದೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಗಣರಾಜ್ಯೋತ್ಸವದಂದು ಪಾಲಕ್ಕಾಡಿನ ಶಾಲೆಯೊಂದರಲ್ಲಿ ಧ್ವಜ ಹಾರಿಸಲು ಬರುವ ಹಿನ್ನೆಲೆಯಲ್ಲಿ ಈ ಸುತ್ತೋಲೆ ಹೊರಡಿಸಿದ್ದು, ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು.

ದೇಶದ ಪ್ರತಿಯೊಬ್ಬ ನಾಗರಿಕನಿಗೂ ಧ್ವಜಾರೋಹಣ ಮಾಡುವ ಹಕ್ಕಿದ್ದು, ಭಾಗವತ್ ಈ ಕಾರ್ಯಕ್ಕೆ ಮುಂದಾಗಿದ್ದರಲ್ಲಿ ಯಾವುದೇ ತಪ್ಪಿಲ್ಲವೆಂದು ಆರ್‌ಎಸ್‌ಎಸ್ ಹೇಳಿದ್ದು, ಸರಕಾರದ ಸುತ್ತೋಲೆ ವಿರುದ್ಧ ಹರಿಹಾಯ್ದಿದೆ.

ಒಂದಲ್ಲ ಒಂದು ರೀತಿಯಲ್ಲಿ ಸಂಘದ ಕಾರ್ಯ ಚಟುವಟಿಕೆಗಳನ್ನು ಹತ್ತಿಕ್ಕಲು ಕೇರಳ ಸರಕಾರ ಯತ್ನಿಸುತ್ತಿದ್ದು, ಈ ಬಗ್ಗೆ ಸಂಘ ಪರಿವಾರದ ನಾಯಕರು ನಡೆಸಿದ ಸಭೆಯಲ್ಲಿ ಚರ್ಚಿಸಲಾಯಿತು.
 

Follow Us:
Download App:
  • android
  • ios