ನವದೆಹಲಿ(ನ.3): ರಾಮಮಂದಿರ ವಿವಾದದ ವಿಚಾರಣೆಯನ್ನು ಮುಂದೂಡಿರುವ ಸುಪ್ರೀಂ ಕೋರ್ಟ್ ನಿರ್ಧಾರಕ್ಕೆ ಹಲವು ಸಂಘಟನೆಗಳು ಬೇಸರ ವ್ಯಕ್ತಪಡಿಸಿದ್ದು, ಮಂದಿರ ನಿರ್ಮಾಣಕ್ಕೆ ಕಾನೂನು ಜಾರಿಗೊಳಿಸಬೇಕೆಂದು ಪಟ್ಟು ಹಿಡಿದಿವೆ.

ಈ ನಡುವೆ ಬಿಜೆಪಿ ಮುಖಂಡ ರಾಮ್ ಮಾಧವ್ ಆರ್‌ಎಸ್ಎಸ್ ಈ ವಿಚಾರವಾಗಿ ತೆಗೆದುಕೊಂಡಿರುವ ನಿಲುವಿನ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ನ್ಯಾಯಾಂಗ 1992 ರ ವಿಳಂಬವನ್ನೇ ಪುನರಾವರ್ತನೆ ಮಾಡುತ್ತಿದೆ. ನ್ಯಾಯಾಂಗದ ತೀರ್ಪಿಗೆ ಇನ್ನೆಷ್ಟು ವರ್ಷ ಕಾಯಬೇಕು ಎಂಬ ಆರ್‌ಎಸ್ಎಸ್ ಪ್ರಶ್ನೆ ಹಿಂದೂಗಳ ಆತಂಕವನ್ನು ಅಭಿವ್ಯಕ್ತಗೊಳಿಸುತ್ತಿದೆ ಎಂದು ಹೇಳಿದ್ದಾರೆ.

ರಾಮಮಂದಿರ ವಿಷಯಕ್ಕೆ ಸಂಬಂಧಿಸಿದಂತೆ ತನ್ನ ನಿಲುವನ್ನು ಸ್ಪಷ್ಟಪಡಿಸಿದ್ದ ಆರ್‌ಎಸ್ಎಸ್, ರಾಮಮಂದಿರ ನಿರ್ಮಾಣಕ್ಕಾಗಿ ಅಗತ್ಯವಿದ್ದರೆ ಚಳುವಳಿ ಪ್ರಾರಂಭಿಸುವುದಾಗಿಯೂ ಹೇಳಿತ್ತು. 

ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ರಾಮ್ ಮಾಧವ್, ನ್ಯಾಯಾಂಗ 1992 ರಲ್ಲಿ ಯಾವ ರೀತಿಯಲ್ಲಿ ವಿಳಂಬವನ್ನೇ ಈಗಲೂ ಪುನರಾವರ್ತನೆ ಮಾಡುತ್ತಿದೆ, ಈ ಹಿನ್ನೆಲೆಯಲ್ಲಿ ಆರ್‌ಎಸ್ಎಸ್ ಹೇಳಿಕೆ ಹಿಂದೂಗಳ ಆತಂಕವನ್ನು ಅಭಿವ್ಯಕ್ತಿಗೊಳಿಸುವ ರೀತಿಯಲ್ಲಿದೆ ಎಂದಿದ್ದಾರೆ.