Asianet Suvarna News Asianet Suvarna News

ಇಂದು ಸಂಸತ್ತಿನಲ್ಲಿ ‘ಗೋರಕ್ಷಣೆ’ ಗಲಾಟೆ; ನಾಳೆ ರಾಜ್ಯಸಭೆಯಲ್ಲಿ ‘ಥಳಿಸಿ ಹತ್ಯೆ’

ಗೋರಕ್ಷಣೆ ಹೆಸರಿನಲ್ಲಿ ಥಳಿಸುವ/ ಥಳಿಸಿ ಹತ್ಯೆಗೈಯುವ ಘಟನೆಗಳು ಇಂದು ಸಂಸತ್ತಿನಲ್ಲೂ ಪ್ರತಿಧ್ವನಿಸಿವೆ. ಈ ಬಗ್ಗೆ ನಾಳೆ ರಾಜ್ಯಸಭೆಯಲ್ಲಿ ಚರ್ಚೆ ನಡೆಯಲಿದೆ. ಇದೇ ವಿಚಾರವಾಗಿ ಪ್ರತಿಪಕ್ಷಗಳು ನಡೆಸಿದ ಪ್ರತಿಭಟನೆಗಳಿಂದಾಗಿ ಸಂಸತ್ತು ಕಲಾಪಗಳನ್ನು ಇಂದು ಮುಂದೂಡಲಾಗಿತ್ತು.

RS to witness a short duration discussion tomorrow on mob lynching

ನವದೆಹಲಿ: ಗೋರಕ್ಷಣೆ ಹೆಸರಿನಲ್ಲಿ ಥಳಿಸುವ/ ಥಳಿಸಿ ಹತ್ಯೆಗೈಯುವ ಘಟನೆಗಳು ಇಂದು ಸಂಸತ್ತಿನಲ್ಲೂ ಪ್ರತಿಧ್ವನಿಸಿವೆ. ಈ ಬಗ್ಗೆ ನಾಳೆ ರಾಜ್ಯಸಭೆಯಲ್ಲಿ ಚರ್ಚೆ ನಡೆಯಲಿದೆ.

ಇದೇ ವಿಚಾರವಾಗಿ ಪ್ರತಿಪಕ್ಷಗಳು ನಡೆಸಿದ ಪ್ರತಿಭಟನೆಗಳಿಂದಾಗಿ ಸಂಸತ್ತು ಕಲಾಪಗಳನ್ನು ಇಂದು ಮುಂದೂಡಲಾಗಿತ್ತು.  ಇನ್ನೊಂದು ಕಡೆ ದಲಿತರು ಹಾಗೂ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿಚಾರದಲ್ಲಿ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಕೂಡಾ ರಾಜೀನಾಮೆ ನೀಡಿದ್ದಾರೆ.

ಮನುಷ್ಯರನ್ನು ಥಳಿಸಿ ಹತ್ಯೆಗೈಯುವ ಘಟನೆಗಳು ಅವ್ಯಾಹತವಾಗಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಚರ್ಚೆಯಾಗಬೇಕೆಂದು ಕಾಂಗ್ರೆಸ್ ನಿನ್ನೆ ನೋಟಿಸ್ ನೀಡಿತ್ತು.

ಸಂಸತ್ತು ಅಧಿವೇಶನ ರಂಭವಾಗುವ ಮುನ್ನ ಭಾನುವಾರ ನಡೆದ ಸರ್ವಪಕ್ಷ ಸಭೆಯಲ್ಲಿ, ಗೋರಕ್ಷಣೆ ಹೆಸರಿನಲ್ಲಿ ನಡೆಯುವ ಹಿಂಸಾಕೃತ್ಯಗಳನ್ನು ಖಂಡಿಸಿದ್ದ ಪ್ರಧಾನಿ ಮೋದಿ, ಅವುಗಳಿಗೆ ಅಂತ್ಯಹಾಡಲು ಎಲ್ಲಾ ಪಕ್ಷಗಳ ಹಾಗೂ ರಾಜ್ಯಸರ್ಕಾರಗಳ ಬೆಂಬಲ ಕೋರಿದ್ದರು.

Follow Us:
Download App:
  • android
  • ios