ಪಾಕಿಸ್ತಾನ ಪರ ಮತ್ತು ಆರ್‌ಎಸ್‌ಎಸ್ ವಿರೋಧಿ ಹೇಳಿಕೆ ನೀಡಿದ ಜಮ್ಮು-ಕಾಶ್ಮೀರ ಮಾಜಿ ಸಿಎಂ ಫಾರೂಖ್ ಅಬ್ದುಲ್ಲಾ ಅವರ ನಾಲಿಗೆಯನ್ನು ಕತ್ತರಿಸಿದವರಿಗೆ 21 ಲಕ್ಷ ರು. ಬಹುಮಾನ ನೀಡುವುದಾಗಿ ‘ಭಾರತೀಯ ಉಗ್ರ ನಿಗ್ರಹ ರಂಗ’ ಎಂಬ ಸಂಘಟನೆ ಮಂಗಳವಾರ ಘೋಷಣೆ ಮಾಡಿದೆ.

ಚಂಡೀಗಢ/ ನವದೆಹಲಿ: ಪಾಕಿಸ್ತಾನ ಪರ ಮತ್ತು ಆರ್‌ಎಸ್‌ಎಸ್ ವಿರೋಧಿ ಹೇಳಿಕೆ ನೀಡಿದ ಜಮ್ಮು-ಕಾಶ್ಮೀರ ಮಾಜಿ ಸಿಎಂ ಫಾರೂಖ್ ಅಬ್ದುಲ್ಲಾ ಅವರ ನಾಲಿಗೆಯನ್ನು ಕತ್ತರಿಸಿದವರಿಗೆ 21 ಲಕ್ಷ ರು. ಬಹುಮಾನ ನೀಡುವುದಾಗಿ ‘ಭಾರತೀಯ ಉಗ್ರ ನಿಗ್ರಹ ರಂಗ’ ಎಂಬ ಸಂಘಟನೆ ಮಂಗಳವಾರ ಘೋಷಣೆ ಮಾಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಉಗ್ರ ವಿರೋಧಿ ರಂಗದ ರಾಷ್ಟ್ರೀಯ ಅಧ್ಯಕ್ಷ ವೀರೇಶ್ ಶಾಂಡಿಲ್ಯ ಈ ಘೋಷಣೆ ಮಾಡಿದ್ದು ‘ಶ್ರೀನಗರದ ಸಂಸದರಾದ ಫಾರೂಖ್ ವಿರುದ್ಧ ತ್ವರಿತವಾಗಿ ತನಿಖೆ ಕೈಗೊಂಡು, ಅವರನ್ನು ಬಂಧಿಸಬೇಕು’ ಎಂದು ಆಗ್ರಹಿಸಿದ್ದಾರೆ.

ಫಾರೂಖ್ ಅವರು ದೇಶದ್ರೋಹಿಯಾಗಿದ್ದು, ಅವರಿಗೆ ನೀಡಲಾಗಿರುವ ಝಡ್ ಪ್ಲಸ್ ಭದ್ರತೆಯನ್ನು ಕೇಂದ್ರ ವಾಪಸ್ ಪಡೆಯಬೇಕು. ಫಾರೂಖ್ ನಾಲಿಗೆ ಕತ್ತರಿಸಿದವರಿಗೆ 21 ಲಕ್ಷ ರು. ಇನಾಮು ನೀಡುತ್ತೇವೆ ಎಂದು ಅವರು ತಿಳಿಸಿದ್ದಾರೆ.

ಹೈಕೋರ್ಟ್ ನಕಾರ: ಈ ನಡುವೆ, ಅಬ್ದುಲ್ಲಾ ವಿರುದ್ಧ ಯಾವುದೇ ಆದೇಶ ಹೊರಡಿಸಲು ದೆಹಲಿ ಹೈಕೋರ್ಟ್ ನಿರಾಕರಿಸಿದೆ. ಈ ಕುರಿತು ಸಂಬಂಧಪಟ್ಟ ಸರ್ಕಾರಿ ಇಲಾಖೆಗೆ ದೂರು ಸಲ್ಲಿಸಬೇಕು. ಸರ್ಕಾರವೇ ಈ ಬಗ್ಗೆ ಕ್ರಮ ಜರುಗಿಸಬೇಕು ಎಂದು ಸೂಚನೆ ನೀಡಿದೆ.