ಸದ್ಯ ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿರುವ 2000 ನೋಟುನ್ನು ಸರಕಾರ ತಾತ್ಕಾಲಿಕವಾಗಿ ಚಲಾವಣೆಗೆ ತಂದಿದ್ದು, ಮುಂದಿನ 6 ತಿಂಗಳಲ್ಲಿ ಇದನ್ನು ಹಿಂಪಡೆಯುವ ಸಾಧ್ಯತೆ ಇದೆ ಎನ್ನುವ ಮಾಹಿತಿ ಉನ್ನತ ಮೂಲಗಳಿಂದ ಲಭ್ಯವಾಗಿದೆ.
ಮುಂಬೈ(ನ.19): ನ.8 ರಂದು ಪ್ರಧಾನಿ ನರೇಂದ್ರ ಮೋದಿ 500 ರೂ ಹಾಗೂ 1000 ರೂ ಮುಖಬೆಲೆಯ ನೋಟುಗಳ ಚಲಾವಣೆಯನ್ನು ನಿಷೇಧಗೊಳಿಸಿ 2000 ರೂ ಮುಖ ಬೆಲೆಯ ನೂತನ ನೋಟಗಳನ್ನು ಪರಿಚಯಿಸಿದ್ದರು. ನಕಲಿ ಹಾಗೂ ಕಪ್ಪು ಹಣದ ಸಮಸ್ಯೆ ನಿವಾರಣೆ ಈ ಕಾರ್ಯ ನಡೆಸುತ್ತಿರುವುದಾಗಿ ಅವರು ತಿಳಿಸಿದರು.
ಸದ್ಯ ಜನ ಸಾಮಾನ್ಯರು ತಮ್ಮ ಮನೆಯಲ್ಲಿ ಇದ್ದಂತಹ ಹಳೇ ನೋಟುಗಳನ್ನು ಹೊಸ ನೋಟಾಗಿ ಪರಿವರ್ತಿಸಿಕೊಳ್ಳಲು ಬ್ಯಾಂಕಿನ ಮುಂದೆ ಕ್ಯೂ ನಿಂತರು. ಆದರೆ ಕಪ್ಪು ಹಣ ಇಟ್ಟಂತಹ ಧನಿಕರು ತಮ್ಮಲ್ಲಿದ್ದ ಹಣವನ್ನು ಬಿಳಿ ಮಾಡಿಕೊಳ್ಳಲು ನಾನಾ ಮಾರ್ಗಗಳನ್ನು ಅರಸುತ್ತ, ವಾಮ ಮಾರ್ಗದಲ್ಲಿ 2000 ರೂ ಮೌಲ್ಯದ ನೋಟುಗಳು ಸಂಗ್ರಹಿಸಿಲು ಶೂರು ಮಾಡಿದರು.
ಇದನ್ನ ತಡೆಯಲು ಕೇಂದ್ರ ಸರಕಾರ ಈಗಾಗಲೇ ಮುಂದಿನ ಯೋಜನೆಯನ್ನು ಹಾಕಿಕೊಂಡಿದೆ ಎನ್ನಲಾಗಿದೆ. ಜನರು ತೆರಿಗೆಯಿಂದ ತಪ್ಪಿಸಿಕೊಳ್ಳಲು ಬಿಡದಂತೆ ಮಾಡಲು, ತಮ್ಮ ಸಂಪತ್ತನ್ನು ಮುಚ್ಚಿದಂತೆ ಮಾಡುವ ಸಲುವಾಗಿ ಸದ್ಯ ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿರುವ 2000 ನೋಟುನ್ನು ಸರಕಾರ ತಾತ್ಕಾಲಿಕವಾಗಿ ಚಲಾವಣೆಗೆ ತಂದಿದ್ದು, ಮುಂದಿನ 6 ತಿಂಗಳಲ್ಲಿ ಇದನ್ನು ಹಿಂಪಡೆಯುವ ಸಾಧ್ಯತೆ ಇದೆ ಎನ್ನುವ ಮಾಹಿತಿ ಉನ್ನತ ಮೂಲಗಳಿಂದ ಲಭ್ಯವಾಗಿದೆ.
2000 ರೂ ನೋಟುಗಳನ್ನು ಜನರು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಿಸುವ ಸಾಧ್ಯತೆ ಇದೆ. ಹೀಗಾಗಿ 2000 ನೋಟುಗಳನ್ನು ಹಿಂಪಡೆದು 500 ಮುಖ ಬೆಲೆಯ ನೋಟುಗಳನ್ನು ಮಾತ್ರ ಜಾರಿಯಲ್ಲಿರುವಂತೆ ಮಾಡುತ್ತಾರೆ ಎನ್ನಲಾಗಿದೆ. ಒಟ್ಟಿನಲ್ಲಿ ಜನರು ಅಡಗಿಸಿಟ್ಟಿರುವ ಹಣವನ್ನು ಹೇಗಾದರು ಮಾಡಿ ಹೊರ ತರಬೇಕು ಎನ್ನುತ್ತಿರುವ ಕೇಂದ್ರ ಸರಕಾರ ಮುಂದಿನ ದಿನದಲ್ಲಿ ಇನಷ್ಟು ಕಠೋರವಾದರು ಆಶ್ವರ್ಯವೇನಿಲ್ಲ. 6 ತಿಂಗಳ ನಂತರ ನೋಟನ್ನು ಹಿಂಪಡೆಯುವ ಸಲುವಾಗಿಯೇ ಹೊಸ ನೋಟನ್ನು ಹೆಚ್ಚಿನ ಗುಣಮಟ್ಟದಲ್ಲಿ ಮುದ್ರಿಸಿಲ್ಲ ಎನ್ನುವ ಮಾತುಗಳು ಕೇಳಿ ಬಂದಿದೆ.
