ಪ್ರಾಥಮಿಕ ತನಿಖೆ ವೇಳೆ ಮುಂಬೈನಿಂದ ಆನ್‌ಲೈನ್‌ ಮೂಲಕವೇ ಕಿಶೋರಿ ಲಾಲ್‌ ಖಾತೆಯಲ್ಲಿ ಹಣದ ವ್ಯವಹಾರ ನಡೆಸಿರುವುದು ಕಂಡುಬಂದಿದೆ. ಹೀಗಾಗಿ ಐಟಿ ಅಧಿಕಾರಿಗಳು ಬ್ಯಾಂಕ್‌ನ ಸಿಸಿಟೀವಿ ದೃಶ್ಯಾವಳಿಗಳನ್ನು ನೀಡುವಂತೆ ಬ್ಯಾಂಕ್‌'ಗೆ ಸೂಚಿಸಿದ್ದಾರೆ.

ವಿಜಯವಾಡದ ಕಿಶೋರಿ ಲಾಲ್‌ ಎಂಬಾತನದ್ದು ಅಂಗಡಿಯಿಂದ ಅಂಗಡಿಗೆ ತೆರಳಿ ಚಾಕಲೇಟ್‌ ಮಾರುವ ಸಣ್ಣ ಕೆಲಸ. ಆದರೆ ಖಾತೆಯಲ್ಲಿ ನೋಡಿದರೆ ಭರ್ಜರಿ 18 ಕೋಟಿ ರು. ಹಣ. ಅನುಮಾನಗೊಂಡ ಆದಾಯ ತೆರಿಗೆ ಇಲಾಖೆ ಆತನಿಗೆ ಸಮನ್ಸ್‌ ನೀಡಿದೆ.

ಸಮನ್ಸ್‌ ಸಿಕ್ಕ ಬಳಿಕವಷ್ಟೇ ಕಿಶೋರಿ ಲಾಲ್‌ಗೆ ತನ್ನ ಖಾತೆಯಲ್ಲಿ ಇಷ್ಟುಹಣ ಇರುವುದು ಕಂಡುಬಂದಿದೆ. ಪ್ರಾಥಮಿಕ ತನಿಖೆ ವೇಳೆ ಮುಂಬೈನಿಂದ ಆನ್‌ಲೈನ್‌ ಮೂಲಕವೇ ಕಿಶೋರಿ ಲಾಲ್‌ ಖಾತೆಯಲ್ಲಿ ಹಣದ ವ್ಯವಹಾರ ನಡೆಸಿರುವುದು ಕಂಡುಬಂದಿದೆ. ಹೀಗಾಗಿ ಐಟಿ ಅಧಿಕಾರಿಗಳು ಬ್ಯಾಂಕ್‌ನ ಸಿಸಿಟೀವಿ ದೃಶ್ಯಾವಳಿಗಳನ್ನು ನೀಡುವಂತೆ ಬ್ಯಾಂಕ್‌'ಗೆ ಸೂಚಿಸಿದ್ದಾರೆ.