ತಮಿಳು ಟಿವಿಯೊಂದರ ರಿಯಾಲಿಟಿ ಶೋ ‘ಬಿಗ್ ಬಾಸ್’ ಕಾರ್ಯಕ್ರಮದಲ್ಲಿ ಸ್ಲಂ ವಾಸಿಗಳ ಭಾವನೆಗೆ ಧಕ್ಕೆಯುಂಟಾಗುವ ಹೇಳಿಕೆ ನೀಡಿರುವುದಾಗಿ ಆಪಾದಿಸಲಾಗಿದೆ. ಈ ಸಂಬಂಧ ಖಾಸಗಿ ಟಿವಿ ವಾಹಿನಿ ‘ಸ್ಟಾರ್ ವಿಜಯ್’ ಹಾಗೂ ಕಾರ್ಯಕ್ರಮದ ನಿರೂಪಕ, ನಟ ಕಮಲ್ ಹಾಸನ್ ವಿರುದ್ಧ ದಲಿತ ಪಕ್ಷ ‘ಪುದಿಯ ತಮಿಳಗಂ’ ಕಾನೂನು ನೋಟಿಸ್ ಜಾರಿಗೊಳಿಸಿದೆ.

ಕೊಯಮತ್ತೂರು(ಜು.31): ತಮಿಳು ಟಿವಿಯೊಂದರ ರಿಯಾಲಿಟಿ ಶೋ ‘ಬಿಗ್ ಬಾಸ್’ ಕಾರ್ಯಕ್ರಮದಲ್ಲಿ ಸ್ಲಂ ವಾಸಿಗಳ ಭಾವನೆಗೆ ಧಕ್ಕೆಯುಂಟಾಗುವ ಹೇಳಿಕೆ ನೀಡಿರುವುದಾಗಿ ಆಪಾದಿಸಲಾಗಿದೆ. ಈ ಸಂಬಂಧ ಖಾಸಗಿ ಟಿವಿ ವಾಹಿನಿ ‘ಸ್ಟಾರ್ ವಿಜಯ್’ ಹಾಗೂ ಕಾರ್ಯಕ್ರಮದ ನಿರೂಪಕ, ನಟ ಕಮಲ್ ಹಾಸನ್ ವಿರುದ್ಧ ದಲಿತ ಪಕ್ಷ ‘ಪುದಿಯ ತಮಿಳಗಂ’ ಕಾನೂನು ನೋಟಿಸ್ ಜಾರಿಗೊಳಿಸಿದೆ.

ನೋಟಿಸ್ ಸ್ವೀಕರಿಸಿದ ಏಳು ದಿನಗಳಲ್ಲಿ ನಟ ಮತ್ತು ಟಿವಿ ವಾಹಿನಿ ಬೇಷರತ್ ಕ್ಷಮೆಯಾಚಿಸದಿದ್ದಲ್ಲಿ, 100 ಕೋಟಿ ರು. ಮಾನನಷ್ಟ ಪಾವತಿಸುವಂತೆ ನೋಟಿಸ್‌ನಲ್ಲಿ ತಿಳಿಸಲಾಗಿದೆ. ಕಾರ್ಯಕ್ರಮದಲ್ಲಿ ಗಾಯತ್ರಿ ರಘು ರಾಮನ್ ತಮ್ಮ ಸಹನಟನ ಬಗ್ಗೆ ಹೇಳುವಾಗ, ಅವರ ವರ್ತನೆ ಸ್ಲಂ ವಾಸಿಗಳಂತಿದೆ ಎಂದಿದ್ದರು ಎನ್ನಲಾಗಿದೆ.