ಬೈ ಎಲೆಕ್ಷನ್‌ ಅಭ್ಯರ್ಥಿ ಆಯ್ಕೆಗೆ ಇಂದು ಬಿಜೆಪಿ ಹಿರಿಯರ ಸಭೆ!...

ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಭರಾಟೆ ಆರಂಭವಾಗಿದ್ದು, ಪಕ್ಷದ ಅಭ್ಯರ್ಥಿಗಳ ಆಯ್ಕೆ ಸಂಬಂಧ ಆಡಳಿತಾರೂಢ ಬಿಜೆಪಿಯ ಹಿರಿಯ ನಾಯಕರನ್ನು ಒಳಗೊಂಡ ಕೋರ್‌ ಕಮಿಟಿ ಸಭೆ ಗುರುವಾರ ನಡೆಯಲಿದೆ.

ರಾಷ್ಟ್ರ ರಾಜಕಾರಣಕ್ಕೆ ತೇಜಸ್ವಿ ಸೂರ್ಯ : ಸಿಎಂ ಆಶೀರ್ವಾದ ಪಡೆದ ಯೂತ್ ಲೀಡರ್...

ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಸ್ಥಾನದ ಜವಾಬ್ದಾರಿ ವಹಿಸಿಕೊಂಡ ನಂತರ ಸಿಎಂ ಬಿಎಸ್ ವೈ ಭೇಟಿಯಾಗಿ ತೇಜಸ್ವಿ ಸೂರ್ಯ ಆಶೀರ್ವಾದ ಪಡೆದುಕೊಂಡಿದ್ದಾರೆ

ಸಾರ್ವಜನಿಕರೇ, ಮಾಸ್ಕ್ ಹಾಕದೇ ಓಡಾಡಬೇಡಿ, ಬೀಳುತ್ತೆ ಭಾರೀ ದಂಡ!...

ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕಿಗೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದೆ. ಇಷ್ಟು ದಿನ ಜನರಿಗೆ ಹೇಳಿ ಹೇಳಿ ಸಾಕಾಯ್ತು, ಈಗ ಕಠಿಣ ಕ್ರಮಕ್ಕೆ ಮುಂದಾಗಿದೆ. 

RCB ಪಾಲಾಗಲಿದೆ 13ನೇ ಆವೃತ್ತಿ ಐಪಿಎಲ್ ಟ್ರೋಫಿ: ದಿಗ್ಗಜ ಹೇಳಿದ ಭವಿಷ್ಯ ಎಂದು ಸುಳ್ಳಾಗಿಲ್ಲ!...

13ನೇ ಆವೃತ್ತಿ ಐಪಿಎಲ್ ಟ್ರೋಫಿ ಗೆಲ್ಲುವ ನೆಚ್ಚಿನ ತಂಡ, ಪ್ಲೇ ಆಫ್  ಸ್ಥಾನಕ್ಕೇರುವ ನೆಚ್ಚಿನ 4 ತಂಡಗಳು ಯಾವುದು ಎಂದು ಹಲವು ಕ್ರಿಕೆಟಿಗರು ಭವಿಷ್ಯ ನುಡಿದಿದ್ದಾರೆ. ಆದರೆ ಹೆಚ್ಚಿನವರು ಆರ್‌ಸಿಬಿ ಹೆಸರು ಹೇಳಿಲ್ಲ. ಇದೀಗ ಟೀಂ ಇಂಡಿಯಾ ದಿಗ್ಗಜ ಕ್ರಿಕೆಟಿಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟ್ರೋಫಿ ಕೊರಗು ನೀಗಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಟ್ವಿಟರ್‌ಗೆ ಎಂಟ್ರಿ ಕೊಟ್ಟ ಅನುಷ್ಕಾ ಶೆಟ್ಟಿ: ಕೆಲವೇ ಗಂಟೆಯಲ್ಲಿ 9 ಲಕ್ಷ ಫಾಲೋವರ್ಸ್..!...

ಬಾಹುಬಲಿ ನಟಿ ಅನುಷ್ಕಾ ಶೆಟ್ಟಿ ಟ್ವಿಟರ್‌ಗೆ ಎಂಟ್ರಿ ಕೊಟ್ಟಿದ್ದಾರೆ. ದೇವಸೇನಾ ಟ್ವಿಟರ್‌ಗೆ ಲಗ್ಗೆ ಇಟ್ಟಿದೇ ತಡ ಕೆಲವೇ ಗಂಟೆಗಳಲ್ಲಿ ಸುಮಾರು 9 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್‌ಗಳನ್ನು ಗಳಿಸಿದ್ದಾರೆ.

ಶಾರೂಖ್, ರಣಬೀರ್‌ಗೂ ಡ್ರಗ್ಸ್ ಕಂಟಕ..! ಶೀಘ್ರ NCB ವಿಚಾರಣೆ...

ಬಾಲಿವುಡ್‌ನ ತಾರೆಯರ ವಿಚಾರಣೆ ಮಾಡಿದ ಎನ್‌ಸಿಬಿ ಈಗ ಪ್ರಮುಖ ನಟರತ್ತ ಗಮನ ಹರಿಸಿದೆ. ಕಿಂಗ್ ಖಾನ್ ಶಾರೂಖ್, ರಣಬೀರ್ ಕಪೂರ್ ವಿಚಾರಣೆಯೂ ಸದ್ಯದಲ್ಲಿಯೇ ನಡೆಯಲಿದೆ ಎನ್ನಲಾಗಿದೆ

ಅಕ್ಟೋಬರ್‌ನಲ್ಲಿ 11 ದಿನ ತೆರೆಯಲ್ಲ ಬ್ಯಾಂಕ್!...

ಅಕ್ಟೋಬರ್‌ನಲ್ಲಿ ಬ್ಯಾಂಕಿಂಗ್‌ ವ್ಯವಹಾರಗಳು ಇದ್ದರೆ ಬೇಗನೇ ಮುಗಿಸಿಕೊಳ್ಳಿ. ಇಲ್ಲದಿದ್ದರೆ ತುರ್ತು ವ್ಯವಹಾರಕ್ಕೆ ದಿನಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಬರಬಹುದು!

ಮಾಜಿ ಪ್ರಧಾನಿ ದೇವೇಗೌಡರಿಗೆ ಸರ್ಕಾರ ನೀಡಿದ ವೋಲ್ವೋ ಕಾರಿನ ವಿಶೇಷತೆ ಏನು?...

ಮಾಜಿ ಪ್ರಧಾನಿ ದೇವೇಗೌಡರ ಮನವಿ ಮೇರೆಗೆ ರಾಜ್ಯ ಸರ್ಕಾರ ದುಬಾರಿ ವೋಲ್ಪೋ ಕಾರು ನೀಡಿದೆ. ರಾಜ್ಯ ಸಭಾ ಸದಸ್ಯರಾದ ಬಳಿಕ ದೇವೇಗೌಡರಿಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕಾರು ನೀಡಿದ್ದಾರೆ. ಸಿಎಂ ಹಾಗೂ ಮಾಜಿ ಸಿಎಂಗೆ ಸರ್ಕಾರದಿಂದ ನೀಡಿರುವ ಕಾರಿಗಿಂತ ದೇವೇಗೌಡರಿಗೆ ನೀಡಿರುವ ಕಾರು ದುಬಾರಿಯಾಗಿದೆ. 

ಹತ್ರಾಸ್ ಗ್ಯಾಂಗ್‌ ರೇಪ್, ಮೃತ ಸಂತ್ರಸ್ತೆಯ ಪೋಸ್ಟ್‌ ಮಾರ್ಟಂ ರಿಪೋರ್ಟ್ ಬಹಿರಂಗ!...

ಹತ್ರಾಸ್ ಗ್ಯಾಂಗ್‌ರೇಪ್ ಹಾಗೂ ಕ್ರೌರ್ಯಕ್ಕೆ ಗುರಿಯಾದ ಯುವತಿಯ ಮರಣೋತ್ತರ ವರದಿ ಸದ್ಯ ಬಹಿರಂಗವಾಗಿದೆ. ವರದಿಯಲ್ಲಿ ಯುವತಿಯ ಕತ್ತು ಹಿಸುಕಿದ ಹಾಗೂ ಹಲ್ಲೆ ನಡೆಸಿರುವುದನ್ನು ಉಲ್ಲೇಖಿಸಲಾಗಿದೆ. ಯುವತಿಯ ಬೆನ್ನುಮೂಳೆಗೂ ಹಾನಿಯಾಗಿದೆ ಎಂದು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ವರದಿಯಿಂದ ಯುವತಿಯ ಮೇಲೆ ನಡೆದ ಕ್ರೌರ್ಯ ಎಷ್ಟು ಭೀಕರವಾಗತ್ತೆಂಬುವುದು ಅಂದಾಜಿಸಬಹುದಾಗಿದೆ.

RR ನಗರ ಕ್ಷೇತ್ರ ವಶಕ್ಕೆ ಕೈ ರಣತಂತ್ರ; ನಾಲ್ವರಲ್ಲಿ ಫೈನಲ್ ಯಾರು?...

ಆರ್ ಆರ್‌ ನಗರ ಕ್ಷೇತ್ರವನ್ನು ಕೈ ವಶ ಮಾಡಿಕೊಳ್ಳಲು ಕಾಂಗ್ರೆಸ್ ಕಸರತ್ತು ನಡೆಸುತ್ತಿದೆ. ಅಭ್ಯರ್ಥಿಗಳ ಆಯ್ಕೆಯಲ್ಲಿ ಲೆಕ್ಕಾಚಾರ ಶುರುವಾಗಿದೆ. ಆರ್‌ಆರ್‌ ನಗರ ಟಿಕೆಟ್ ಮೇಲೆ ನಾಲ್ವರು ಕಣ್ಣಿಟ್ಟಿದ್ಧಾರೆ.