NEWS16, Feb 2019, 2:39 PM IST
ಕೇವಲ 1 ರೂ. ಕೊಡಿ ಸಾಕು: ಸೇನೆಗೆ ನಾವೆಲ್ಲಾ ಕೈ ಜೋಡಿಸಲೇಬೇಕು!
ಹೌದು ಕೇಂದ್ರ ಸರ್ಕಾರ ಇಂತದ್ದೊಂದು ವಿಶೇಷ ಯೋಜನೆಯೊಂದನ್ನು ಈಗಾಗಲೇ ಜಾರಿಗೊಳಿಸಿದ್ದು, ಭಾರತೀಯ ಸೇನೆ ಮತ್ತು ಯುದ್ಧದಲ್ಲಿ ಗಾಯಗೊಂಡ ಸೈನಿಕರ ನೆರವಿಗೆ ಇಡೀ ಭಾರತವನ್ನು ಒಗ್ಗೂಡಿಸಿದೆ. ಅದರಂತೆ ಭಾರತೀಯ ನಾಗರಿಕರು ಸೇನೆಯ ಅಧಿಕೃತ ಬ್ಯಾಂಕ್ ಅಕೌಂಟ್ಗೆ ಕೇವಲ 1 ರೂ. ಸಂದಾಯ ಮಾಡಬೇಕು.
BUSINESS13, Feb 2019, 8:15 PM IST
ಬ್ಯಾಂಕ್ಗಳಿಗೆ ಬಿತ್ತು ಭಾರೀ ದಂಡ: ನಿಮ್ಮ ಬ್ಯಾಂಕ್ ಇದ್ರೆ....!
ಮಹತ್ವದ ಬೆಳವಣಿಗೆಯೊಂದರಲ್ಲಿ ಬ್ಯಾಂಕಿಂಗ್ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಒಟ್ಟು ಏಳು ಬ್ಯಾಂಕ್ಗಳಿಗೆ ಆರ್ಬಿಐ ದಂಡ ವಿಧಿಸಿದೆ. ಆರ್ಬಿಐ ನಿಧಿ ಬಳಕೆ, ಮೇಲ್ವಿಚಾರಣೆಯಲ್ಲಿ ವಂಚನೆ ಸೇರಿ ಹಲವು ನಿಯಮಗಳ ಉಲ್ಲಂಘನೆ ಆರೋಪದ ಮೇಲೆ ಆರ್ಬಿಐ ಈ ಬ್ಯಾಂಕ್ಗಳ ಮೇಲೆ ಕಠಿಣ ಕ್ರಮ ಜರುಗಿಸಿದೆ ಎನ್ನಲಾಗಿದೆ.
BENGALURU9, Feb 2019, 9:55 PM IST
BOB ಯೊಂದಿಗೆ ವಿಲೀನ ಬೇಡ: ವಿಜಯಾ ಬ್ಯಾಂಕ್ ನೌಕರರ ಪ್ರತಿಭಟನೆ!
ಬ್ಯಾಂಕ್ ಆಫ್ ಬರೋಡಾದೊಂದಿಗಿನ ವಿಜಯಾ ಬ್ಯಾಂಕ್ ವಿಲೀನ ನಿರ್ಧಾರ ವಿರೋಧಿಸಿ, ಇಂದು ಬ್ಯಾಂಕ್ ನೌಕರರು ಪ್ರತಿಭಟನೆ ನಡೆಸಿದರು. ಬನ್ನೇರುಘಟ್ಟದ ಬೀಳೆಕಳ್ಳಿ ಬಳಿ ವಿಜಯಾ ಬ್ಯಾಂಕ್ ನೌಕರರು ಪ್ರತಿಭಟನೆ ನಡೆಸಿ ಗಮನಸೆಳೆದರು.
BUSINESS9, Feb 2019, 2:07 PM IST
30 ಲಕ್ಷ ರೂ. ಸಾಲ ಇದೆಯಾ?: ಶನಿವಾರಕ್ಕೆ ಪಾಯಸ ಮಾಡ್ಬಿಡಿ!
ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ವಿತ್ತೀಯ ನೀತಿಯನ್ನು ಪ್ರಕಟಿಸಿದ ಬೆನ್ನಲ್ಲೇ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 30 ಲಕ್ಷ ರೂ.ವರೆಗೆ ಗೃಹ ಸಾಲದ ಮೇಲಿನ ಬಡ್ಡಿದರವನ್ನು ಶೇಕಡಾ 0.05ರಷ್ಟು ಕಡಿತಗೊಳಿಸಿದೆ.
BUSINESS8, Feb 2019, 12:30 PM IST
ತಮ್ಮನ ಕಣ್ಣೀರೇ ಅಣ್ಣನಿಗೆ ಪನ್ನೀರು: ಅಂಬಾನಿ ಆಟ ಅಬ್ಬಬ್ಬಾ!
ಕಿರಿಯ ಸಹೋದರ ಅನಿಲ್ ಅಂಬಾನಿ ಅವರ ಈ ಸಂಕಷ್ಟವೇ ಹಿರಿಯ ಸಹೋದರ ಮುಖೇಶ್ ಅಂಬಾನಿ ಅವರ ಪಾಲಿಗೆ ಭಾಗ್ಯದ ಬಾಗಿಲು ತೆರೆಯಲಿದೆ ಎಂಬುದು ಬಹುತೇಕರಿಗೆ ಗೊತ್ತಿಲ್ಲ. ಅನಿಲ್ ತಮ್ಮ ಸ್ಪೆಕ್ಟ್ರಮ್ ನ್ನು ಮುಖೇಶ್ ಅಂಬಾನಿಗೆ ನೀಡಲಿರುವುದರಿಂದ ಮುಖೇಶ್ ತಮ್ಮ ಜಿಯೋ ಸಾಮ್ರಾಜ್ಯವನ್ನು ವಿಸ್ರರಿಸಲು ಸಜ್ಜಾಗಿದ್ದಾರೆ.
BUSINESS7, Feb 2019, 3:23 PM IST
ಥಟ್ ಅಂತಾ ಮನೆ ಕಟ್ಕೊಳ್ಳಿ, ಫಟ್ ಅಂತಾ ಕಾರು ತೊಗೊಳ್ಳಿ : ಆರ್ಬಿಐ ಗಿಫ್ಟ್!
ಸುಮಾರು 17 ತಿಂಗಳ ನಂತರ ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರವನ್ನು 25 ಬೇಸಿಸ್ ಪಾಯಿಂಟ್ ಗಳಿಂದ ಶೇ. 6.25ಕ್ಕೆ ಕಡಿತಗೊಳಿಸಿದೆ. ಇಂದು ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ನೇತೃತ್ವದಲ್ಲಿ ನಡೆದ ವಿತ್ತೀಯ ನೀತಿ ಸಮಿತಿ, 6ನೇ ದ್ವೈಮಾಸಿಕ ವಿತ್ತೀಯ ಸಭೆಯಲ್ಲಿ ರೆಪೋ ದರದಲ್ಲಿ 25 ಬೇಸಿಸ್ ಪಾಯಿಂಟ್ ಕಡಿತಗೊಳಿಸಿದೆ.
BUSINESS7, Feb 2019, 11:58 AM IST
ನಿಮ್ಮ 10 ರೂ. ನಾಣ್ಯದ ಕತೆ ಏನು?: ಬ್ಯಾಂಕ್ ವ್ಯಥೆ ಕೇಳ್ತಿರೇನು?
10 ರೂ. ನಾಣ್ಯ ಸ್ವೀಕಾರ್ಹ ಎಂದು ಸುಪ್ರೀಂ ಕೋರ್ಟ್ ಮತ್ತು ಆರ್ಬಿಐ ಪದೇ ಪದೇ ಹೇಳುತ್ತಿದೆ. ಆದರೂ ಮಾರುಕಟ್ಟೆಯಲ್ಲಿ 10 ರೂ. ನಾಣ್ಯಗಳನ್ನು ಸ್ವೀಕರಿಸಲು ಹಿಂದೇಟು ಹಾಕುತ್ತಿರುವುದು ಬ್ಯಾಂಕ್ಗಳಿಗೆ ತಲೆನೋವು ತಂದಿದೆ.
state7, Feb 2019, 8:40 AM IST
ಮತ್ತೆ ರೈತಗೆ ಎಕ್ಸಿಸ್ ಕೋಲ್ಕತಾ ವಾರಂಟ್!
ಟ್ರ್ಯಾಕ್ಟರ್ ಸಾಲ ಪಡೆದಿದ್ದ ಮತ್ತೊಬ್ಬ ರೈತನ ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿ ಎಕ್ಸಿಸ್ ಬ್ಯಾಂಕ್ ಕೋಲ್ಕತಾ ನ್ಯಾಯಾಲಯ (ಮೆಟ್ರೊಪಾಲಿಟಿನ್)ದಿಂದ ಅರೆಸ್ಟ್ ವಾರಂಟ್ ಕಳುಹಿಸಿದೆ.
BUSINESS6, Feb 2019, 1:30 PM IST
ಅಣ್ಣನ ಅದೊಂದು ಮಾತು ಕೇಳಿದ್ದರೆ: ಅನಿಲ್ ಬರ್ತಿಲಿಲ್ಲ ಬೀದಿಗೆ!
ಇದು ಮುಖೇಶ್ ಮತ್ತು ಅನಿಲ್ ಅಂಬಾನಿ ಪರಸ್ಪರ ದೂರವಾದ ಕತೆ. ರಿಲಯನ್ಸ್ ಸಾಮ್ರಾಜ್ಯ ಕಟ್ಟಿ ಬೆಳೆಸಿದ್ದ ಧೀರೂಭಾಯಿ ಅಂಬಾನಿ ನಿಧನದ ಬಳಿಕ, ಸಹೋದರರ ನಡುವಿನ ವೈಮನಸ್ಸು ಎಷ್ಟು ಗಾಢವಾಗಿತ್ತೆಂದರೆ ಧೀರೂಭಾಯಿ ಅಂಬಾನಿ ವಾಣಿಜ್ಯ ಸಾಮ್ರಾಜ್ಯ ಒಡೆದು ಚೂರು ಚೂರಾಯಿತು. ಆದರೆ ಹಿರಿಯಣ್ಣ ಮುಖೇಶ್ ಅಂಬಾನಿ ಯಶಸ್ವಿ ಉದ್ಯಮಿ ಎನಿಸಿದರೆ, ಕಿರಿಯ ಸಹೋದರ ಅನಿಲ್ ಅಂಬಾನಿ ಸಾಲ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆ. ಅನಿಲ್ ಅವರ ದಿವಾಳಿತನದ ವ್ಯಥೆ ಇಲ್ಲಿದೆ.
BUSINESS5, Feb 2019, 1:40 PM IST
ರಾಮ್-ಲಖನ್ ಕಹಾನಿ: ಅನಿಲ್ ಹಣೆಬರಹ ಬದಲಿಸಿದ ಮುಖೇಶ್ ಅಂಬಾನಿ!
270 ದಿನಗಳೊಳಗಾಗಿ ಅನಿಲ್ ಅಂಬಾನಿ ತಮ್ಮ ಸಾಲ ತೀರಿಸಬೇಕಾಗಿದ್ದು, ಈ ಕ್ಲಿಷ್ಟಕರ ಸಂದರ್ಭದಲ್ಲಿ ಸಹೋದರನ ನೆರವಿಗೆ ಹಿರಿಯಣ್ಣ ಮುಖೇಶ್ ಅಂಬಾನಿ ದೌಡಾಯಿಸುವ ಸಾಧ್ಯತೆಗಳಿವೆ. ಸುಪ್ರೀಂ ಕೋರ್ಟ್ ರಿಲಯನ್ಸ್ ಕಮ್ಯುನಿಕೇಶನ್ಸ್ ತನ್ನ ಸ್ಪೆಕ್ಟ್ರಮ್ ಗಳನ್ನು ರಿಲಯನ್ಸ್ ಜಿಯೋಗೆ ಮಾರಾಟ ಮಾಡಲು ಇದ್ದ ನಿಯಮಗಳಲ್ಲಿ ಕೆಲವು ಸಡಿಲಿಕೆ ಮಾಡಿ ಆದೇಶ ಹೊರಡಿಸಿದೆ.
NEWS3, Feb 2019, 11:12 AM IST
ಮಲ್ಯ ವಿಹಾರ ನೌಕೆ, ಕಾರುಗಳ ಮೇಲೆ ಬ್ಯಾಂಕ್ಗಳ ಕಣ್ಣು
9 ಸಾವಿರ ಕೋಟಿ ರು. ಸಾಲ ಮರುಪಾವತಿಸದೇ ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಅವರಿಂದ ಸಾಧ್ಯವಾದಷ್ಟುಹಣ ವಸೂಲಿ ಮಾಡಲು ಹರಸಾಹಸ ನಡೆಸುತ್ತಿರುವ ಭಾರತೀಯ ಬ್ಯಾಂಕುಗಳ ಕಣ್ಣು ಇದೀಗ ‘ಮದ್ಯದ ದೊರೆ’ ಹೊಂದಿದ್ದ ಐಷಾರಾಮಿ ವಿಹಾರ ದೋಣಿ (ಯಾಟ್), ದುಬಾರಿ ಬೆಲೆಯ ಕಾರುಗಳು ಹಾಗೂ ಪೇಟಿಂಗ್ನಂತಹ ವಸ್ತುಗಳ ಮೇಲೆ ಬಿದ್ದಿದೆ.
BUSINESS2, Feb 2019, 3:55 PM IST
ಎಲ್ಲಾ ಮಾರಿಬಿಡಿ: ದಿವಾಳಿಯಾದ ಅಂಬಾನಿ ಮಾಡ್ತಿದ್ದಾರೆ ಗಡಿಬಿಡಿ!
ಅನಿಲ್ ಅಂಬಾನಿ ಒಡೆತನದ ರೆಲ್.ಕಾಂ ಸಂಸ್ಥೆ ದಿವಾಳಿ ಅಂಚಿಗೆ ಬಂದು ನಿಂತಿದೆ. ಮಾಡಿದ ಸಾಲ ತೀರಿಸಲು ಅನಿಲ್ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ತಮ್ಮ ಸಂಸ್ಥೆಗೆ ಸೇರಿದ ಎಲ್ಲಾ ಆಸ್ತಿಯನ್ನು ಮಾರಲು ಮುಂದಾಗಿರುವ ಅನಿಲ್ ಅಂಬಾನಿ, ನ್ಯಾಶನಲ್ ಕಂಪನಿ ಲಾ ಟ್ರಿಬ್ಯುನಲ್ ಮೊರೆ ಹೋಗಿದ್ದಾರೆ.
BUSINESS1, Feb 2019, 12:05 PM IST
ಉಳುವಾ ಯೋಗಿಗೆ ಮೋದಿ ಸರ್ಕಾರದ ಬಂಪರ್ ಗಿಫ್ಟ್: 6 ಸಾವಿರ ಸಹಾಯಧನ!
ದೇಶದ ಕೃಷಿ ವಲಯಕ್ಕೆ ಅತ್ಯಂತ ಸಿಹಿ ಸುದ್ದಿ ನೀಡಿರುವ ಮೋದಿ ಸರ್ಕಾರ, ಸಣ್ಣ ಮತ್ತು ಮಧ್ಯಮ ಹಿಡುವಳಿದಾರರಿಗೆ ಬಂಪರ್ ಕೊಡುಗೆ ಘೋಷಿಸಿದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿಯಲ್ಲಿ ವರ್ಷಕ್ಕೆ 6000 ರೂ. ಸಹಾಯಧನ ಘೋಷಿಸಲಾಗಿದೆ.
state1, Feb 2019, 9:52 AM IST
ರಾಜ್ಯ ಸರ್ಕಾರದಿಂದ ರೈತರಿಗೆ ಮತ್ತೊಂದು ಗುಡ್ ನ್ಯೂಸ್
ರೈತ ಸಾಲಮನ್ನಾ ಮಾಡಿದ ರಾಜ್ಯ ಸರ್ಕಾರ ರೈತರಿಗೆ ಮತ್ತೊಂದು ಗುಡ್ ನ್ಯೂಸ್ ನೀಡುತ್ತಿದೆ. ಮಾರ್ಚ್ ವೇಳೆಗೆ ಪೀಕಾರ್ಡ್ ಬ್ಯಾಂಕ್ ನಲ್ಲಿ ಪಡೆದಿದ್ದ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡುವ ಬಗ್ಗೆ ಅಧಿಕೃತ ನಿರ್ಧಾರ ಹೊರಬೀಳಲಿದೆ ಎಂದು ತಿಳಿಸಿದೆ.
INDIA1, Feb 2019, 9:35 AM IST
ಭಾರತಕ್ಕೆ ಸಿಗಲಿದೆ ಮಲ್ಯ ಸ್ವಿಸ್ ಬ್ಯಾಂಕ್ ರಹಸ್ಯ
ಭಾರತಕ್ಕೆ ಸಿಗಲಿದೆ ಮಲ್ಯ ಸ್ವಿಸ್ ಬ್ಯಾಂಕ್ ವಿವರ| ಭಾರತದ ಕೋರಿಕೆಗೆ ಸ್ವಿಸ್ ಸರ್ಕಾರ ಒಪ್ಪಿಗೆ| ವಿವರ ಹಸ್ತಾಂತರ ಪ್ರಶ್ನಿಸಿದ್ದ ಮಲ್ಯ ಅರ್ಜಿ ವಜಾ