ಇಲ್ಲಿನ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು ಸಾರ್ವಜನಿಕರೊಬ್ಬರು ಅಂಗವಿಕಲ ವ್ಯಕ್ತಿಗೆ ಥಳಿಸುತ್ತಿರುವುದನ್ನು ಮೊಬೈಲ್‌ನಲ್ಲಿ ಚಿತ್ರಿಕರಿಸಿ ಯೂಟೂಬ್‌ಗೆ ಅಪ್‌ಲೋಡ್‌ ಮಾಡಿದ್ದಾರೆ. ಅಂಗವಿಕಲ ವ್ಯಕ್ತಿ ಎಂಬುದನ್ನು ಮರೆತ ರೈಲ್ವೆ ಪೊಲೀಸರು ಅಸಹಾಯಕನ  ಎದೆಗೆ, ಬೆನ್ನಿಗೆ ಬೂಟಿನ ಕಾಲಿನಲ್ಲಿ ಹಿಗ್ಗಾಮುಗ್ಗಾ ಥಳಿಸುವ ಮೂಲಕ  ರಾಕ್ಷಸರಂತೆ ವರ್ತಿಸಿದ್ದಾರೆ.

ಒಡಿಶಾ(ಜ.09):ಮೊಬೈಲ್‌ ಕದ್ದಿದ್ದಾರೆ ಎನ್ನುವ ಆರೋಪದಲ್ಲಿ ಅಂಗವಿಕಲ ವ್ಯಕ್ತಿಯೊಬ್ಬರಿಗೆ ಒಡಿಶಾದ ಭುವನೇಶ್ವರ ರೈಲ್ವೇ ಪೊಲೀಸರು ಹಿಗ್ಗಾಮುಗ್ಗಾ ಥಳಿಸುತ್ತಿರುವ ವಿಡಿಯೊ ವೈರಲ್‌ ಆಗಿದೆ.

ಇಲ್ಲಿನ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು ಸಾರ್ವಜನಿಕರೊಬ್ಬರು ಅಂಗವಿಕಲ ವ್ಯಕ್ತಿಗೆ ಥಳಿಸುತ್ತಿರುವುದನ್ನು ಮೊಬೈಲ್‌ನಲ್ಲಿ ಚಿತ್ರಿಕರಿಸಿ ಯೂಟೂಬ್‌ಗೆ ಅಪ್‌ಲೋಡ್‌ ಮಾಡಿದ್ದಾರೆ. ಅಂಗವಿಕಲ ವ್ಯಕ್ತಿ ಎಂಬುದನ್ನು ಮರೆತ ರೈಲ್ವೆ ಪೊಲೀಸರು ಅಸಹಾಯಕನ ಎದೆಗೆ, ಬೆನ್ನಿಗೆ ಬೂಟಿನ ಕಾಲಿನಲ್ಲಿ ಹಿಗ್ಗಾಮುಗ್ಗಾ ಥಳಿಸುವ ಮೂಲಕ ರಾಕ್ಷಸರಂತೆ ವರ್ತಿಸಿದ್ದಾರೆ.

ಪೊಲೀಸರ ಈ ಕೃತ್ಯಕ್ಕೆ ದೇಶದೆಲ್ಲಡೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.