ಪ್ರೆಸ್’ಕ್ಲಬ್  ಸುದ್ದಿಗೋಷ್ಠಿಯಲ್ಲಿ  ರೌಡಿಶೀಟರ್​ ನಾಗ ವಿಷ ಕುಡಿದಿದ್ದಾನೆ.  ದಿನೇಶ್​ ಗುಂಡೂರಾವ್, ಜಾರ್ಜ್​ರಿಂದ ಮೋಸ ಆಗಿದೆ ಎಂದು ವಿಷ ಸೇವಿಸಿದ್ದಾರೆ.  ಕೂಡಲೇ  ನಾಗರನ್ನು  ಬೌರಿಂಗ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 

ಬೆಂಗಳೂರು (ಏ. 06): ಪ್ರೆಸ್’ಕ್ಲಬ್ ಸುದ್ದಿಗೋಷ್ಠಿಯಲ್ಲಿ ರೌಡಿಶೀಟರ್​ ನಾಗ ವಿಷ ಕುಡಿದಿದ್ದಾನೆ. ದಿನೇಶ್​ ಗುಂಡೂರಾವ್, ಜಾರ್ಜ್​ರಿಂದ ಮೋಸ ಆಗಿದೆ ಎಂದು ವಿಷ ಸೇವಿಸಿದ್ದಾರೆ. ಕೂಡಲೇ ನಾಗರನ್ನು ಬೌರಿಂಗ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 

ನನ್ನ ಸಾವಿಗೆ ದಿನೇಶ್ ಗುಂಡೂರಾವ್, ಜಾರ್ಜ್ ಕಾರಣ. ಅವರ ಕಿರುಕುಳದಿಂದ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಪತ್ರಕರ್ತರ ಎದುರೇ ವಿಷ ಸೇವಿಸಿದ್ದಾನೆ. ಕೂಡಲೇ ಅಲ್ಲಿದ್ದವರೆಲ್ಲಾ ಸೇರಿ ಬೌರಿಂಗ್ ಆಸ್ಪತ್ರೆಗೆ ಸೇರಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ. 

ಆಸ್ತಿ ವಿಚಾರದಲ್ಲಿ ಕುಟುಂಬಕ್ಕೆ ಪ್ರಾಣ ಬೆದರಿಕೆ ಆರೋಪದ ಮೇಲೆ ಇತ್ತೀಚಿಗೆ ಬಂಧನಕ್ಕೊಳಗಾಗಿದ್ದ. ಜಾಮೀನಿನ ಮೇಲೆ ಹೊರಬಂದು ಸುದ್ದಿಗೋಷ್ಠಿ ನಡೆಸುತ್ತಿದ್ದ . ಈ ವೇಳೆ ವಿಷ ಸೇವಿಸಿದ್ದಾನೆ. ಕಬ್ಬನ್​ ಪಾರ್ಕ್​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.