ಮೂರು ದಿನದ ಹಿಂದೆ ಹುಟ್ಟಿದ ಶಿಶು ಅಳುತ್ತಿದೆ ಎಂಬ ಕಾರಣಕ್ಕೆ ಆಸ್ಪತ್ರೆಯ ವಾರ್ಡ್‌‌ ಬಾಯ್‌ ಆ ಶಿಶುವಿನ ಕಾಲು ಮುರಿದ ಘಟನೆ ಉತ್ತರಾಖಂಡ್‌'ನ ರೂರ್ಕಿಯ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.
ಉತ್ತರಾಖಂಡ್(ಫೆ.07): ಮೂರು ದಿನದ ಹಿಂದೆ ಹುಟ್ಟಿದ ಶಿಶು ಅಳುತ್ತಿದೆ ಎಂಬ ಕಾರಣಕ್ಕೆ ಆಸ್ಪತ್ರೆಯ ವಾರ್ಡ್ ಬಾಯ್ ಆ ಶಿಶುವಿನ ಕಾಲು ಮುರಿದ ಘಟನೆ ಉತ್ತರಾಖಂಡ್'ನ ರೂರ್ಕಿಯ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.
ಜನವರಿ 25ರಂದು ಶಿಶು ಜನಿಸಿತ್ತು. ಶಿಶುವಿಗೆ ಉಸಿರಾಟದ ಸಮಸ್ಯೆ ಇದ್ದ ಕಾರಣ ಇಲ್ಲಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಶಿಶು ಅಳುವುದನ್ನು ಕೇಳಿ ಕಿರಿಕಿರಿ ಅನುಭವಿಸಿದ ವಾರ್ಡ್ಬಾಯ್ ಸಿಟ್ಟಿಗೆದ್ದಿದ್ದಾನೆ. ವಾರ್ಡ್'ನಲ್ಲಿ ತಾನು ಒಬ್ಬನೇ ಇರುವಾಗ ಮಗವಿನ ಶಿಶುವಿನ ಕಾಲು ಮುರಿದು ರಕ್ಕಸತನ ಮೆರೆದಿದ್ದಾನೆ.
ಈ ಘಟನೆ 28ರಂದು ನಡೆದಿದ್ದು, ಆಸ್ಪತ್ರೆಯ ಸಿಸಿಟಿವಿಯಲ್ಲಿ ವಾರ್ಡ್ ಬಾಯ್ ಕೃತ್ಯ ಸೆರೆಯಾಗಿದೆ. ಆದರೆ, ವಾರ್ಡ್ಬಾಯ್ ಈ ವಿಷಯ ತನಗೆ ಗೊತ್ತಿಲ್ಲ ಎಂಬಂತೆ ನಟಿಸಿದ್ದಾನೆ. ಇದಾದ ನಂತರ ರೂರ್ಕಿ ಆಸ್ಪತ್ರೆ ವೈದ್ಯರು ಶಿಶುವನ್ನು ಡೆಹ್ರಾಡೂನ್ ಆಸ್ಪತ್ರೆಗೆ ರೆಫರ್ ಮಾಡಿದ್ದಾರೆ. ಆಗ ಈ ಡೆಹ್ರಾಡೂನ್ ವೈದ್ಯರು ಶಿಶುವಿನ ಕಾಲು ಮುರಿದಿರುವುದುನ್ನು ಗುರುತಿಸಿದ್ದಾರೆ. ಈ ಬಗ್ಗೆ ಮಗುವಿನ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.
