ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ಕೋವಿಂದ್ ಅವರು ಪಾಲ್ಗೊಂಡಿದ್ದ ಶ್ರವಣಬೆಳಗೊಳದ ಮಹಾ ಮಸ್ತಕಾಭಿಷೇಕ ಸಂಬಂಧಿ ಕಾರ್ಯಕ್ರಮಗಳ ಆಯೋಜನೆಯಲ್ಲಿ ಶಿಷ್ಟಾಚಾರ ಲೋಪವಾಗಿದ್ದು, ಈ ಬಗ್ಗೆ ಸ್ಪಷ್ಟನೆ ನೀಡುವಂತೆ ರಾಜಭವನವು ರಾಜ್ಯದ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದಿದೆ.

ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ಕೋವಿಂದ್ ಅವರು ಪಾಲ್ಗೊಂಡಿದ್ದ ಶ್ರವಣಬೆಳಗೊಳದ ಮಹಾ ಮಸ್ತಕಾಭಿಷೇಕ ಸಂಬಂಧಿ ಕಾರ್ಯಕ್ರಮಗಳ ಆಯೋಜನೆಯಲ್ಲಿ ಶಿಷ್ಟಾಚಾರ ಲೋಪವಾಗಿದ್ದು, ಈ ಬಗ್ಗೆ ಸ್ಪಷ್ಟನೆ ನೀಡುವಂತೆ ರಾಜಭವನವು ರಾಜ್ಯದ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸರ್ಕಾರದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅವರಿಗೆ ಪತ್ರ ಬರೆದಿರುವ ರಾಜಭವನ ಕಚೇರಿ ಅಧಿಕಾರಿಗಳು, ರಾಷ್ಟ್ರಪತಿ ಹಾಗೂ ಪ್ರಧಾನಮಂತ್ರಿ ಭೇಟಿ ವೇಳೆ ಸೂಕ್ತ ಶಿಷ್ಟಾಚಾರ ಪಾಲನೆ ಮಾಡಬೇಕು. ಈ ಬಗ್ಗೆ ಸ್ಥಳೀಯ ಜಿಲ್ಲಾಧಿಕಾರಿಗಳು ಖುದ್ದು ಜವಾಬ್ದಾರಿ ವಹಿಸಿಕೊಂಡು ಶಿಷ್ಟಾಚಾರ ಪಾಲನೆ ಯಾಗುವಂತೆ ಮಾಡಬೇಕು.

ಆದರೆ, ಇತ್ತೀಚೆಗೆ ರಾಷ್ಟ್ರಪತಿ ಪ್ರಧಾನಿ ಭೇಟಿ ವೇಳೆ ಹಲವು ಲೋಪಗಳು ಆಗಿವೆ. ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಕೋರಿದ್ದಾರೆ. ಮಹಾಮಸ್ತ ಕಾಭಿಷೇಕದದಲ್ಲಿ ರಾಷ್ಟ್ರಪತಿಗಳ ಸಾಲಿಗಿಂತ ಮುಂದೆ ಕುರ್ಚಿ ಹಾಕ ಲಾಗಿತ್ತು. ರಾಷ್ಟ್ರಪತಿಗಳ ಸರಿ ಸಮಾನವಾಗಿ ಯಾರೂ ನಿಲ್ಲಬಾರದು ಎಂಬ ನಿಯಮವಿದ್ದರೂ ಹಲವರಿಗೆ ನಿಲ್ಲಲು ಅವಕಾಶ ನೀಡಲಾಗಿತ್ತೆನ್ನಲಾಗಿದೆ.