11:32 PM (IST) Mar 13

India Latest News Live:ಅಪ್ಪ ತೋರಿಸಿದ ಹುಡುಗನ ಮದ್ವೆಯಾಗ್ತೇನೆ ಅಂದಿದ್ದ ಮೊನಾಲಿಸಾಗೆ ಬ್ರೇನ್​ವಾಷ್​? ತಂದೆಯ ಕಣ್ಣೀರು- ಹೇಳಿದ್ದೇನು

ಕುಂಭಮೇಳದ ವೈರಲ್ ಹುಡುಗಿ ಮೊನಾಲಿಸಾ, ತನ್ನ ಪೋಷಕರ ಇಚ್ಛೆಗೆ ವಿರುದ್ಧವಾಗಿ ಫರ್ಮಾನ್ ಖಾನ್ ಎಂಬ ಯುವಕನನ್ನು ವಿವಾಹವಾಗಿದ್ದಾಳೆ. ಇದು ಲವ್ ಜಿಹಾದ್ ಅಲ್ಲ ಎಂದು ಪತಿ ಹೇಳಿದರೆ, ತನ್ನ ಮಗಳಿಗೆ ಬ್ರೈನ್‌ವಾಶ್ ಮಾಡಲಾಗಿದೆ ಎಂದು ತಂದೆ ಆರೋಪಿಸುತ್ತಿದ್ದಾರೆ.
Read Full Story
10:15 PM (IST) Mar 13

India Latest News Live:ಏರ್‌ ಇಂಡಿಯಾ ಬಳಿಕ ವಿಮಾನ ಟಿಕೆಟ್‌ ದರ ಏರಿಸಿದ ಇಂಡಿಗೋ, ಮಧ್ಯರಾತ್ರಿಯಿಂದಲೇ ಜಾರಿ!

ಏರ್ ಇಂಡಿಯಾ ನಂತರ, ಇಂಡಿಗೋ ಏರ್‌ಲೈನ್ಸ್‌ ಕೂಡ ಇಂಧನ ಸರ್‌ಚಾರ್ಜ್ ವಿಧಿಸುವ ಮೂಲಕ ವಿಮಾನ ದರಗಳನ್ನು ಹೆಚ್ಚಿಸುತ್ತಿದೆ. ಅಂತಾರಾಷ್ಟ್ರೀಯ ಸಂಘರ್ಷಗಳಿಂದಾಗಿ ಜೆಟ್ ಇಂಧನ ಬೆಲೆಗಳು ಶೇ.85ರಷ್ಟು ಏರಿಕೆಯಾಗಿರುವುದೇ ಇದಕ್ಕೆ ಕಾರಣ. ಈ ಹೊಸ ದರಗಳು ಮಾರ್ಚ್ 14 ರಿಂದ ಜಾರಿಗೆ ಬರಲಿವೆ.
Read Full Story
09:50 PM (IST) Mar 13

India Latest News Live:ಮಕ್ಕಳ ಭವಿಷ್ಯ ಅಪಾಯದಲ್ಲಿದೆ, ಪೋರ್ನ್‌ ಸೈಟ್ಸ್‌ ಬ್ಯಾನ್ ಮಾಡಿ - ರಾಜ್ಯಸಭೆಯಲ್ಲಿ ಅಬ್ಬರಿಸಿದ ಹರ್ಭಜನ್‌ ಸಿಂಗ್‌

ಮಾಜಿ ಕ್ರಿಕೆಟಿಗ ಹಾಗೂ ಸಂಸದ ಹರ್ಭಜನ್ ಸಿಂಗ್ ಅವರು ಇಂಟರ್ನೆಟ್‌ನಲ್ಲಿನ ಅಶ್ಲೀಲ ವಿಷಯಗಳು ಮತ್ತು ಸಾಮಾಜಿಕ ಜಾಲತಾಣಗಳ ದುರುಪಯೋಗದ ವಿರುದ್ಧ ಕಠಿಣ ಕಾನೂನು ರೂಪಿಸಲು ರಾಜ್ಯಸಭೆಯಲ್ಲಿ ಒತ್ತಾಯಿಸಿದ್ದಾರೆ. 

Read Full Story
09:49 PM (IST) Mar 13

India Latest News Live:18 ವರ್ಷಗಳ ಸುಧೀರ್ಘ ಸಮಯದ ಬಳಿಕ ಅಡೋಬ್ ಸಿಇಒ ಹುದ್ದೆಯಿಂದ ಇದ್ದಕ್ಕಿದ್ದಂತೆ ಹಿಂದೆ ಸರಿದ ಭಾರತದ ಶಾಂತನು ನಾರಾಯಣ್!

ಸುಮಾರು 18 ವರ್ಷಗಳ ಕಾಲ ಅಡೋಬ್ ಸಿಇಒ ಆಗಿ ಸೇವೆ ಸಲ್ಲಿಸಿದ ಭಾರತೀಯ ಮೂಲದ ಶಾಂತನು ನಾರಾಯಣ್ ಅವರು ತಮ್ಮ ಹುದ್ದೆಯಿಂದ ಕೆಳಗಿಳಿಯುವ ನಿರ್ಧಾರ ಪ್ರಕಟಿಸಿದ್ದಾರೆ. ಹೊಸ ಸಿಇಒ ನೇಮಕವಾಗುವವರೆಗೆ ಅವರು ಮುಂದುವರಿಯಲಿದ್ದು, ನಂತರ ಮಂಡಳಿಯ ಅಧ್ಯಕ್ಷರಾಗಲಿದ್ದಾರೆ. ಅವರ ನಾಯಕತ್ವದಲ್ಲಿ, ಅಡೋಬ್ ಕ್ಲೌಡ್ ಮಾದರಿಗೆ ಪರಿವರ್ತನೆಗೊಂಡು ಜಾಗತಿಕವಾಗಿ ಬೃಹತ್ ಯಶಸ್ಸು ಸಾಧಿಸಿದೆ.
Read Full Story
09:17 PM (IST) Mar 13

India Latest News Live:ಹೊಸ ಆದಾಯ ತೆರಿಗೆ ಕಾಯ್ದೆ ಏಪ್ರಿಲ್ 1ರಿಂದ ಜಾರಿ - ತೆರಿಗೆ ಸ್ಲ್ಯಾಬ್‌ಗಳ ಬಗ್ಗೆ ತಿಳಿದುಕೊಳ್ಳಲೇಬೇಕು

ಏ.1, 2025 ರಿಂದ ಜಾರಿಗೆ ಬರಲಿರುವ ಹೊಸ ಆದಾಯ ತೆರಿಗೆ ಕಾಯ್ದೆಯು, 1961ರ ಹಳೆಯ ಕಾಯ್ದೆಯನ್ನು ಬದಲಿಸಿ ತೆರಿಗೆ ವ್ಯವಸ್ಥೆಯನ್ನು ಸರಳಗೊಳಿಸುವ ಗುರಿ ಹೊಂದಿದೆ. ತೆರಿಗೆ ದರಗಳಲ್ಲಿ ಯಾವುದೇ ತಕ್ಷಣದ ಬದಲಾವಣೆ ತರುವುದಿಲ್ಲ, ಬದಲಾಗಿ ಕಾನೂನನ್ನು ಸುಲಭವಾಗಿ ಅರ್ಥಮಾಡಿಕೊಳ್ಳುವಂತೆ ಮಾಡುತ್ತದೆ.

Read Full Story
08:59 PM (IST) Mar 13

India Latest News Live:ಮಲ ಕೊಟ್ಟರೆ ಸಿಗುತ್ತೆ 1.5 ಕೋಟಿ ರೂಪಾಯಿ! ಖಂಡಿತ ಇದು ಸುಳ್ಳಲ್ಲ- ಏಕೆ ಇದಕ್ಕಿಷ್ಟು ಬೆಲೆ?

ಅಮೆರಿಕ ಮೂಲದ ಹ್ಯೂಮನ್ ಮೈಕ್ರೋಬ್ಸ್ ಸಂಸ್ಥೆಯು ಆರೋಗ್ಯವಂತರಿಂದ ಮಲವನ್ನು ದಾನವಾಗಿ ಪಡೆದು ವಾರ್ಷಿಕ 1.5 ಕೋಟಿ ರೂ. ನೀಡುತ್ತಿದೆ. ಈ ಮಲವನ್ನು ಗಂಭೀರ ಕರುಳಿನ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಮಲ ಮೈಕ್ರೋಬಯೋಟಾ ಕಸಿ (FMT) ಗಾಗಿ ಬಳಸಲಾಗುತ್ತದೆ.

Read Full Story
08:58 PM (IST) Mar 13

India Latest News Live:ಇರಾನ್‌ ಯುದ್ಧ ತೀವ್ರವಾಗುವ ಭೀತಿ, ಯೂರಿಯಾಗಾಗಿ ಚೀನಾದ ಸಹಾಯ ಕೇಳಿದ ಭಾರತ!

ಮಧ್ಯಪ್ರಾಚ್ಯದ ಯುದ್ಧದಿಂದ ನೈಸರ್ಗಿಕ ಅನಿಲ ಪೂರೈಕೆಯಲ್ಲಿ ವ್ಯತ್ಯಯವಾಗಿ, ಭಾರತದ ರಸಗೊಬ್ಬರ ಉತ್ಪಾದನೆಗೆ ಹೊಡೆತ ಬಿದ್ದಿದೆ. ಈ ತುರ್ತು ಪರಿಸ್ಥಿತಿ ನಿಭಾಯಿಸಲು, ಕೆಲವು ಯೂರಿಯಾ ಸರಕುಗಳ ಮಾರಾಟಕ್ಕೆ ಅನುವು ಮಾಡಿಕೊಡುವಂತೆ ಭಾರತವು ಚೀನಾಕ್ಕೆ ಮನವಿ ಮಾಡಿದೆ. 

Read Full Story
08:35 PM (IST) Mar 13

India Latest News Live:Vadivelu Speech - ಆಗ ಕ್ಯಾಪ್ಟನ್... ಈಗ ದಳಪತಿನಾ? ಡಿಎಂಕೆ ವೇದಿಕೆಯಲ್ಲಿ ವಿಜಯ್ ವಿರುದ್ಧ ವಡಿವೇಲು ವಾಗ್ದಾಳಿ!

ಹಾಸ್ಯ ನಟ ವಡಿವೇಲು ಅವರು ಡಿಎಂಕೆ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರು ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಅಧ್ಯಕ್ಷ, ನಟ ವಿಜಯ್ ಅವರನ್ನು ಗುರಿಯಾಗಿಸಿ ಮಾತನಾಡಿದ್ದಾರೆ. ಇದರ ಸಂಪೂರ್ಣ ವಿವರ ಇಲ್ಲಿದೆ.

Read Full Story
08:23 PM (IST) Mar 13

India Latest News Live:'ಭಾರತ ನಮ್ಮ ಆಪ್ತ ಗೆಳೆಯ' - ಇಂಧನ ಬಿಕ್ಕಟ್ಟಿನ ನಡುವೆ ಗುಡ್‌ ನ್ಯೂಸ್‌ ನೀಡಿದ ಇರಾನ್‌ ರಾಯಭಾರಿ ಮೊಹಮ್ಮದ್ ಫತಾಲಿ!

ಭಾರತದಲ್ಲಿ ತೈಲ ಮತ್ತು ಎಲ್‌ಪಿಜಿ ಬಿಕ್ಕಟ್ಟಿನ ಆತಂಕದ ನಡುವೆ, ಇರಾನ್ ತನ್ನ ಮಿತ್ರ ರಾಷ್ಟ್ರವಾದ ಭಾರತಕ್ಕೆ ಹಾರ್ಮುಜ್ ಜಲಸಂಧಿಯ ಮೂಲಕ ತೈಲ ಟ್ಯಾಂಕರ್‌ಗಳಿಗೆ ಸುರಕ್ಷಿತ ಮಾರ್ಗವನ್ನು ಒದಗಿಸಲು ಸಿದ್ಧವಿದೆ ಎಂದು ಇರಾನ್ ರಾಯಭಾರಿ ಮೊಹಮ್ಮದ್ ಫತಾಲಿ ಭರವಸೆ ನೀಡಿದ್ದಾರೆ. 

Read Full Story
08:21 PM (IST) Mar 13

India Latest News Live:ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಈ ರಾಜಕಾರಣಿಯ ಕರ್ಮಕಾಂಡ ಬಯಲು - ಮೃತ್ಯುಗಿಂತಲೂ ಘೋರ ರಾಜಕೀಯ ಅಂತ್ಯ!

ಕಿರಣ್ ಕುಮಾರ್ ಗುರೂಜಿ ಅವರ ಪ್ರಕಾರ, ಇರಾನ್-ಇಸ್ರೇಲ್ ಯುದ್ಧವು 40-55 ದಿನಗಳಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿದೆ. ಈ ಯುದ್ಧವು ರಷ್ಯಾದ ಮೇಲೆ ಗಂಭೀರ ಪರಿಣಾಮ ಬೀರಲಿದ್ದು, ಜಾಗತಿಕ ಮಟ್ಟದಲ್ಲಿ ಒಬ್ಬ ಪ್ರಮುಖ ನಾಯಕನ ಅಂತ್ಯವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. 

Read Full Story
08:08 PM (IST) Mar 13

India Latest News Live:ಪತ್ನಿ ಬಳಿಕ ದಳಪತಿ ವಿಜಯ್‌ಗೆ ಶಾಕ್‌ ನೀಡಿದ ಪುತ್ರ ಜೇಸನ್‌!

ನಟ ವಿಜಯ್ ಅವರ ಪತ್ನಿ ಸಂಗೀತಾ, ವಿಜಯ್‌ಗೆ ಅಕ್ರಮ ಸಂಬಂಧವಿದೆ ಎಂದು ಆರೋಪಿಸಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಬೆಳವಣಿಗೆಯಿಂದ ಅಸಮಾಧಾನಗೊಂಡಿರುವ ಪುತ್ರ ಜೇಸನ್ ಸಂಜಯ್, ತಮ್ಮ ಹೆಸರಿನಿಂದ ತಂದೆಯ ಇನೀಶಿಯಲ್ 'V' ಅನ್ನು ತೆಗೆದುಹಾಕಿ ತಾಯಿಯ ಇನೀಶಿಯಲ್ 'S' ಬಳಸಲು ನಿರ್ಧರಿಸಿದ್ದಾರೆ.
Read Full Story
07:43 PM (IST) Mar 13

India Latest News Live:Mahindra SUV - ನಟ ಅಜಿತ್‌ಗೆ ಸಿಕ್ತು 30 ಲಕ್ಷದ ಗಿಫ್ಟ್! ಏನಿದು ವಿಶ್ವದ ಮೊದಲ ಫಾರ್ಮುಲಾ E ಥೀಮ್‌ನ SUV?

ನಟ ಅಜಿತ್ ಕುಮಾರ್ ಕಾರ್ ರೇಸ್‌ನಲ್ಲಿ ಭಾಗವಹಿಸಲು ದುಬೈಗೆ ಹೋಗಿದ್ದರು. ದುಬೈನಿಂದ ವಾಪಸಾದ ಅಜಿತ್ ಕುಮಾರ್‌ಗೆ ಮಹೀಂದ್ರಾ ಕಂಪನಿಯು ತನ್ನ ಹೊಚ್ಚ ಹೊಸ ಫಾರ್ಮುಲಾ E ಥೀಮ್‌ನ ಎಸ್‌ಯುವಿ ಕಾರನ್ನು ಉಡುಗೊರೆಯಾಗಿ ನೀಡಿದೆ.

Read Full Story
07:10 PM (IST) Mar 13

India Latest News Live:ಗ್ಯಾಸ್ ಸಮಸ್ಯೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮೀಮ್ಸ್ ವೈರಲ್, ಸಂಕಷ್ಟದ ನಡುವೆ ನಕ್ಕು ಸುಸ್ತಾದ ಜನ

LPG ಗ್ಯಾಸ್ ಸಮಸ್ಯೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮೀಮ್ಸ್ ವೈರಲ್, ಸಂಕಷ್ಟದ ನಡುವೆ ನಕ್ಕು ಸುಸ್ತಾದ ಜನ, ದೇಶದಲ್ಲಿ ಎದುರಾಗರುವ ಗ್ಯಾಸ್ ಕೊರತೆ ಸಮಸ್ಯೆಯನ್ನು ಹಲವರು ತಮಾಷೆ ಮಾಡಿದ್ದಾರೆ. ಈ ಕುರಿತ ಮೀಮ್ಸ್ ಇಲ್ಲಿದೆ.

Read Full Story
06:50 PM (IST) Mar 13

India Latest News Live:Dhurandhar - ಪಾರ್ಟ್ 2 ಬರೋ ಮುನ್ನ ಪಾರ್ಟ್ 1 ಮತ್ತೆ ರಿಲೀಸ್ - ರಣವೀರ್ ಫ್ಯಾನ್ಸ್‌ಗೆ ಡಬಲ್ ಧಮಾಕಾ!

ರಣವೀರ್ ಸಿಂಗ್ ನಟನೆಯ 'ಧುರಂಧರ್' ಸಿನಿಮಾ ಮತ್ತೆ ಥಿಯೇಟರ್‌ಗೆ ಎಂಟ್ರಿ ಕೊಡುತ್ತಿದೆ. ಇದರ ಸೀಕ್ವೆಲ್ ಬರುವ ಮುನ್ನ, ಚಿತ್ರದ ಮೊದಲ ಭಾಗವನ್ನು ವಿಶ್ವಾದ್ಯಂತ ಮರು-ಬಿಡುಗಡೆ ಮಾಡಲಾಗುತ್ತಿದೆ.

Read Full Story
06:37 PM (IST) Mar 13

India Latest News Live:ಅಮೆರಿಕದಲ್ಲಿ ಭಾರತೀಯ ಸಹೋದರರ ಕರಾಳ ಮುಖ, ಸವಾನಿ ಬ್ರದರ್ಸ್‌ಗೆ 835 ವರ್ಷಗಳ ಜೈಲು ಶಿಕ್ಷೆ!

ಅಮೆರಿಕದಲ್ಲಿ ಭಾರತೀಯ ಮೂಲದ ಭಾಸ್ಕರ್ ಮತ್ತು ಅರುಣ್ ಸವಾನಿ ಸಹೋದರರು ಆರೋಗ್ಯ ರಕ್ಷಣೆ, ವೀಸಾ ವಂಚನೆ ಮತ್ತು ಹಣಕಾಸು ಅಪರಾಧಗಳಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿದೆ. ತಮ್ಮ 'ಸವಾನಿ ಗ್ರೂಪ್' ಮೂಲಕ ಮೆಡಿಕೈಡ್ ಯೋಜನೆಗೆ ವಂಚನೆ, H-1B ವೀಸಾ ದುರುಪಯೋಗ ಮತ್ತು ತೆರಿಗೆ ವಂಚನೆ ನಡೆಸಿದ ಇವರು ಒಟ್ಟು 835 ವರ್ಷಗಳ ಜೈಲು ಶಿಕ್ಷೆ ಎದುರಿಸುತ್ತಿದ್ದಾರೆ.
Read Full Story
06:34 PM (IST) Mar 13

India Latest News Live:ಇರಾನ್ ಯುದ್ಧದ ಕೆನ್ನಾಲಿಗೆಗೆ ಬೆಂದು ಹೋದ ಗಲ್ಫ್‌ ರಾಷ್ಟ್ರಗಳು - ಯುದ್ಧ ಮಾಡದೇ ಇದ್ದರೂ ಸೌದಿ, ಯುಎಇಗೆ ಕೋಟ್ಯಂತರ ನಷ್ಟ!

ಇರಾನ್-ಇಸ್ರೇಲ್ ಯುದ್ಧದಿಂದಾಗಿ, ನೇರ ಸಂಬಂಧವಿಲ್ಲದಿದ್ದರೂ ಗಲ್ಫ್ ದೇಶಗಳು ಭಾರಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಸೌದಿ ಅರೇಬಿಯಾ ಮತ್ತು ಯುಎಇ ತಲಾ ₹42,000 ಕೋಟಿಗೂ ಅಧಿಕ ನಷ್ಟ ಅನುಭವಿಸಿದ್ದು, ಇಂಧನ ಆದಾಯ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳು ತೀವ್ರವಾಗಿ ಹಾನಿಗೊಳಗಾಗಿವೆ.

Read Full Story
06:07 PM (IST) Mar 13

India Latest News Live:Allu Arjun - 'ಅಲ್ಲು ಸಿನಿಮಾಸ್ ವಾಲ್ ಆಫ್ ಫೇಮ್' ಗೋಡೆ ಮೇಲೆ ಕನ್ನಡದ ಇಬ್ಬರು ಡೈರೆಕ್ಟರ್! ಯಾರು ಗೊತ್ತಾ?

ಹೈದರಾಬಾದ್‌ನಲ್ಲಿ ನಟ ಅಲ್ಲು ಅರ್ಜುನ್ ಹೊಸ ಮಲ್ಟಿಪ್ಲೆಕ್ಸ್ 'ಅಲ್ಲು ಸಿನಿಮಾಸ್' ಶುರು ಮಾಡಿದ್ದಾರೆ. ಇಲ್ಲಿನ 'ವಾಲ್ ಆಫ್ ಫೇಮ್'ನಲ್ಲಿರೋ ನಿರ್ದೇಶಕರ ಲಿಸ್ಟ್ ಈಗ ಸಖತ್ ಚರ್ಚೆಯಲ್ಲಿದೆ.

Read Full Story
06:06 PM (IST) Mar 13

India Latest News Live:ಪೆಟ್ರೋಲ್‌, ಡೀಸೆಲ್‌ ಕೊರತೆಯಿಲ್ಲ, ಆದ್ರೆ ಎಲ್‌ಪಿಜಿಯದ್ದೇ ಸಮಸ್ಯೆ - ಕೇಂದ್ರ ಸರ್ಕಾರ

ಪಶ್ಚಿಮ ಏಷ್ಯಾದಲ್ಲಿನ ಯುದ್ಧ ಮತ್ತು ಹಾರ್ಮುಜ್ ಜಲಸಂಧಿ ಮುಚ್ಚಿರುವ ಕಾರಣ, ಭಾರತದಲ್ಲಿ ಎಲ್‌ಪಿಜಿ ಪೂರೈಕೆಯ ಬಗ್ಗೆ ಕಳವಳ ಹೆಚ್ಚಾಗಿದೆ, ಇದು ಗ್ಯಾಸ್ ಬುಕಿಂಗ್‌ಗಳಲ್ಲಿ ಹಠಾತ್ ಏರಿಕೆಗೆ ಕಾರಣವಾಗಿದೆ. ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕೊರತೆಯಿಲ್ಲ ಎಂದು ಕೇಂದ್ರ ಹೇಳಿದೆ.

Read Full Story
05:46 PM (IST) Mar 13

India Latest News Live:ಊಟ ಮಾಡಿ ಆಟ ಆಡಿ ಬೇರೆ ಮದುವೆಯಾದ ಪೊಲೀಸಪ್ಪ, ದುರಂತ ಅಂತ್ಯಕಂಡ ಮಹಿಳೆ ಕೊನೆ ವಿಡಿಯೋ

ಊಟ ಮಾಡಿ ಆಟ ಆಡಿ ಬೇರೆ ಮದುವೆಯಾದ ಪೊಲೀಸಪ್ಪ, ದುರಂತ ಅಂತ್ಯಕಂಡ ಮಹಿಳೆ ಕೊನೆ ವಿಡಿಯೋ, ಕಳೆದ ನಾಲ್ಕು ವರ್ಷದಿಂದ ಪತ್ನಿ ರೀತಿ ನನ್ನ ಇಟ್ಟುಕೊಂಡಿದ್ದ. ಆತ ಪೊಲೀಸ್ ಆಗಿದ್ದ ಕಾರಣ ನನಗೆ ಯಾರಿಂದಲೂ ನೆರವು ಸಿಗಲಿಲ್ಲ ಎಂದು ದುರಂತ ಅಂತ್ಯಕಂಡಿದ್ದಾಳೆ.

Read Full Story
05:21 PM (IST) Mar 13

India Latest News Live:Hansika Divorce - 'ಸಣ್ಣ ವಿಷಯಕ್ಕೂ ಜಗಳ ಆಗ್ತಿತ್ತು' - ಡಿವೋರ್ಸ್ ಬಳಿಕ ಮೊದಲ ಪ್ರತಿಕ್ರಿಯೆ ನೀಡಿದ ಹನ್ಸಿಕಾ

ಪತಿ ಸೊಹೇಲ್ ಖತೂರಿಯಾ ಜೊತೆಗಿನ ನಾಲ್ಕು ವರ್ಷಗಳ ದಾಂಪತ್ಯಕ್ಕೆ ನಟಿ ಹನ್ಸಿಕಾ ಮೋಟ್ವಾನಿ ಅಂತ್ಯ ಹಾಡಿದ್ದಾರೆ. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳೇ ವಿಚ್ಛೇದನಕ್ಕೆ ಕಾರಣವಾಗಿದ್ದು, ಹನ್ಸಿಕಾ ಯಾವುದೇ ಜೀವನಾಂಶ ಪಡೆದಿಲ್ಲ ಎಂದು ವರದಿಯಾಗಿದೆ.

Read Full Story