Asianet Suvarna News Asianet Suvarna News

ಹಾಸನ ಡಿಸಿಯಾಗಿ ಮತ್ತೆ ಅಧಿಕಾರ ಸ್ವೀಕರಿಸಿದ ರೋಹಿಣಿ ಹೇಳಿದ್ದೇನು?

ಐಎಎಸ್ ಅಧಿಕಾರಿಯೊಬ್ಬರು ನಿಯೋಜನೆಗೊಂಡ ಸ್ಥಳದಲ್ಲಿ ಕನಿಷ್ಠ ಎರಡು ವರ್ಷಗಳ ಕಾಲ ಕಾರ್ಯನಿರ್ವಹಿಸಬೇಕೆಂಬ ನಿಯಮವಿದೆ. ಆದರೆ, ರಾಜಕೀಯ ಮೇಲಾಟದಲ್ಲಿ ಹಾಸನ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ರೋಹಿಣಿ ಸಿಂಧೂರಿಯನ್ನು ಕೆಲವೇ ತಿಂಗಳಲ್ಲಿ ವರ್ಗಾಯಿಸಲಾಗಿತ್ತು. ಸರಕಾರದ ಈ ಕ್ರಮವನ್ನು ಪ್ರಶ್ನಿಸಿದ ಅವರು ಕೋರ್ಟ್ ಮೆಟ್ಟಿಲೇರಿ ಜಯಿಸಿದ್ದಾರೆ. ಮತ್ತೆ ಹಾಸನ ಡಿಸಿಯಾಗಿ ಅಧಿಕಾರಿ ಸ್ವೀಕರಿಸಿಕೊಂಡಿದ್ದಾರೆ.

Rohini Sindhuri takes charge as Hassan DC after long legal battle

ಹಾಸನ: ಸಾಕಷ್ಟು ಕಾನೂನು ಹೋರಾಟ ನಡಿಸಿದ ನಂತರ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತೆ ಹಾಸನ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಕಾನೂನು ಹೋರಾಟದಲ್ಲಿ ಗೆಲುವಿನ ನಗೆ  ಬೀರಿದ ರೋಹಿಣಿ ಈ ಸಮಯದಲ್ಲಿ ಹೇಳಿದ್ದಿಷ್ಟು.

-  ಜಿಲ್ಲಾಧಿಕಾರಿಗೆ ಕನಿಷ್ಠ ಎರಡು ವರ್ಷ ಒಂದು ಜಿಲ್ಲೆಯಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡಬೇಕೆಂಬ ನಿಯಮವಿದೆ. ಆರು ತಿಂಗಳು ಜಿಲ್ಲೆಯ ಸಮಸ್ಯೆ ಅರ್ಥ ಮಾಡಿಕೊಳ್ಳಲು ಸಮಯ ಬೇಕು. ಎಲ್ಲವನ್ನೂ ಅರ್ಥಮಾಡಿಕೊಂಡ ಕೂಡಲೇ ವರ್ಗವಾದರೆ, ಸಮಸ್ಯೆಯಾಗುತ್ತೆ.
- ಇದು ಜಿಲ್ಲೆಯ ಮಟ್ಟಿಗೆ ತೊಂದರೆಯಾಗಲಿದೆ. ಕನಿಷ್ಠ ಅವಧಿ ಇರೋ ಬಗ್ಗೆ ಯಾರೂ ಕೇಳಿಲ್ಲ‌. ಹಾಗಾಗಿ ಜನರಿಗೆ ಈ ಬಗ್ಗೆ‌ ಗೊತ್ತಿಲ್ಲ.
-ಮುಂದಿನ‌‌ ಕೆಲ‌ವು ತಿಂಗಳಿನಲ್ಲಿ ಮತ್ತಷ್ಟು ಉತ್ತಮ‌ ಕೆಲಸ ಮಾಡಲು ಆದ್ಯತೆ. 
- ಸಮ್ಮಿಶ್ರ ಸರ್ಕಾರ ಇದೆ ಎನ್ನೋದು ಅದು ರಾಜಕೀಯ.
 ನಾನು ಹಾಸನ‌ ಜಿಲ್ಲಾಧಿಕಾರಿಯಷ್ಟೇ. ಈ ಮೊದಲು ಹೇಗೆ ಕೆಲಸ ಮಾಡುತ್ತಿದ್ದೇನೊ, ಅದೇ ಕೆಲಸಗಳನ್ನು ಮುಂದುವರಿಸುವೆ. 

ರಂಣೀಪ್ ಸ್ಥಿತಿ ಅತಂತ್ರ
ಹಾಸನ ಜಿಲ್ಲಾಧಿಕಾರಿಯಾಗಿ ರೋಹಿಣಿ ಮುಂದುವರಿಕೆ

ರೋಹಿಣಿ ವರ್ಗಾವಣೆ: ಸರಕಾರ ನಿಲುವು ತಿಳಿಸುವುದು ಯಾವಾಗ?

Follow Us:
Download App:
  • android
  • ios