ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಐಎಎಸ್‌ ಅಧಿಕಾರಿ ಡಿ.ರಂದೀಪ್  ರೋಹಿಣಿ ಸಿಂಧೂರಿ ವರ್ಗಾವಣೆ ಸಮಯದಲ್ಲಿ ಹಾಸನ ಡಿಸಿಯಾಗಿ ವರ್ಗಾವಣೆಗೊಂಡಿದ್ದರು.  ಅವಧಿ ಪೂರ್ಣಗೊಳ್ಳುವ ಮೊದಲೇ ವರ್ಗಾವಣೆ ಮಾಡಿರುವುದನ್ನು ಪ್ರಶ್ನಿಸಿ ರೋಹಿಣಿ ಸಿಂಧೂರಿ ನ್ಯಾಯಾಲಯದ ಮೆಟ್ಟಿಲೇರಿದ್ದರು.  ಈ ಕಾರಣದಿಂದ ಡಿ.ರಂದೀಪ್‌ ಹಾಸನ ಜಿಲ್ಲಾಧಿಕಾರಿ ಹುದ್ದೆಯಿಂದ ನಿಯೂಕ್ತಿಗೊಂಡಿದ್ದರು. ಸತತ ಕಾನೂನು ಹೋರಾಟದ ನಂತರ ಮತ್ತೆ ಹಾಸನ ಡಿಸಿಯಾಗಿ ರೋಹಿಣಿ ಸಿಂಧೂರಿ ವರ್ಗಾವಣೆಗೊಂಡಿದ್ದಾರೆ. 

ಹಾಸನ (ಜೂ. 26): ಹಾಸನ ಜಿಲ್ಲಾಧಿಕಾರಿಯಾಗಿ ಮತ್ತೆ ರೋಹಿಣಿ ಮುಂದುವರೆದಿದ್ದಾರೆ. ಇದುವರೆಗೂ ಹಾಸನ ಜಿಲ್ಲಾಧಿಕಾರಿಯಾಗಿದ್ದ ಐಎಎಸ್‌ ಅಧಿಕಾರಿ ಡಿ.ರಂದೀಪ್ ಅತಂತ್ರರಾಗಿದ್ದಾರೆ. 

ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಐಎಎಸ್‌ ಅಧಿಕಾರಿ ಡಿ.ರಂದೀಪ್ ರೋಹಿಣಿ ಸಿಂಧೂರಿ ವರ್ಗಾವಣೆ ಸಮಯದಲ್ಲಿ ಹಾಸನ ಡಿಸಿಯಾಗಿ ವರ್ಗಾವಣೆಗೊಂಡಿದ್ದರು. ಅವಧಿ ಪೂರ್ಣಗೊಳ್ಳುವ ಮೊದಲೇ ವರ್ಗಾವಣೆ ಮಾಡಿರುವುದನ್ನು ಪ್ರಶ್ನಿಸಿ ರೋಹಿಣಿ ಸಿಂಧೂರಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ಕಾರಣದಿಂದ ಡಿ.ರಂದೀಪ್‌ ಹಾಸನ ಜಿಲ್ಲಾಧಿಕಾರಿ ಹುದ್ದೆಯಿಂದ ನಿಯೂಕ್ತಿಗೊಂಡಿದ್ದರು.

ಸತತ ಕಾನೂನು ಹೋರಾಟದ ನಂತರ ಮತ್ತೆ ಹಾಸನ ಡಿಸಿಯಾಗಿ ರೋಹಿಣಿ ಸಿಂಧೂರಿ ವರ್ಗಾವಣೆಗೊಂಡಿದ್ದಾರೆ. 

ನನ್ನ ಕರ್ತವ್ಯ ಸ್ಥಳ‌‌ ನಿಗದಿ ಮಾಡುವಂತೆ ಐಎಎಸ್‌ ಅಧಿಕಾರಿ ಡಿ.ರಂದೀಪ್ ಮನವಿ ಮಾಡಿದ್ದರು. ಆದರೆ ಈವರೆಗೂ ಐಎಎಸ್‌ ಅಧಿಕಾರಿಗೆ ಯಾವುದೇ ಹುದ್ದೆ‌ ನೀಡಿಲ್ಲ. ಬರೋಬ್ಬರಿ ಮೂರು ತಿಂಗಳಿನಿಂದ ಕೆಲಸವಿಲ್ಲದೆ ಕುಳಿತಿದ್ದಾರೆ ಐಎಎಸ್ ಅಧಿಕಾರಿ ಡಿ.ರಂದೀಪ್. 

ನಿನ್ನೆ ರೋಹಿಣಿ ಸಿಂಧೂರಿ ವರ್ಗಾವಣೆ ಪ್ರಕರಣ ಇತ್ಯರ್ಥಗೊಂಡಿದೆ. ಆದರೆ ಇನ್ನೂ ಐಎಎಸ್ ಅಧಿಕಾರಿ ಡಿ.ರಂದೀಪ್ ಹುದ್ದೆ ವಿಚಾರ ಇತ್ಯರ್ಥವಾಗಿಲ್ಲ.