ಸಚಿವ ಮಂಜು ದೂರಿಗೆ ಮೂರು ಪುಟಗಳಲ್ಲಿ ಉತ್ತರ ನೀಡಿದ ರೋಹಿಣಿ ಸಿಂಧೂರಿ

news | Wednesday, April 11th, 2018
Suvarna Web Desk
Highlights

ಹಾಸನ ಡಿಸಿ ರೋಹಿಣಿ ಸಿಂಧೂರಿ ವಿರುದ್ಧದ ತನಿಖೆಗೆ ಚುನಾವಣಾ ಆಯೋಗ ಆದೇಶ ನೀಡಿದ ಹಿನ್ನೆಲೆಯಲ್ಲಿ, ಸಚಿವ ಎ.ಮಂಜು-ಡಿಸಿ ರೋಹಿಣಿ ನಡುವೆ  ಪತ್ರ ಸಮರ ಮುಂದುವರಿದಿದೆ.

ಹಾಸನ : ಹಾಸನ ಡಿಸಿ ರೋಹಿಣಿ ಸಿಂಧೂರಿ ವಿರುದ್ಧದ ತನಿಖೆಗೆ ಚುನಾವಣಾ ಆಯೋಗ ಆದೇಶ ನೀಡಿದ ಹಿನ್ನೆಲೆಯಲ್ಲಿ, ಸಚಿವ ಎ.ಮಂಜು-ಡಿಸಿ ರೋಹಿಣಿ ನಡುವೆ  ಪತ್ರ ಸಮರ ಮುಂದುವರಿದಿದೆ.

ಈ ಬಗ್ಗೆ ಮಾಹಿತಿ ಕೇಳಿದ್ದ ಪ್ರಾದೇಶಿಕ ಆಯುಕ್ತರಿಗೆ 3 ಪುಟಗಳಲ್ಲಿ ಜಿಲ್ಲಾಧಿಕಾರಿ ಉತ್ತರ ನೀಡಿದ್ದಾರೆ.  ಸಚಿವರು ಸರ್ಕಾರಿ ಕಚೇರಿ ಬಳಕೆ ಹಾಗೂ ಬಗರ್ ಹುಕುಂ ಅಕ್ರಮದ ಬಗ್ಗೆಯೂ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.

ಪ್ರಾದೇಶಿಕ ಆಯುಕ್ತರ ಎಲ್ಲಾ ಪ್ರಶ್ನೆಗೆ ದಾಖಲೆ ಪತ್ರ, ವಿಡಿಯೋ ಸಹಿತ ಉತ್ತರ ನೀಡಿದ್ದಾರೆ.

ಬಗರ್ ಹುಕುಂ ಸಾಗುವಳಿ ಯೋಜನೆಯಡಿ 1093 ಅರ್ಜಿಯನ್ನು ಹಳೇ ದಿನಾಂಕಕ್ಕೆ ವಿಲೇವಾರಿ ಮಾಡಿದ್ದಾರೆಂದು ಸಚಿವರ ವಿರುದ್ದ ಪತ್ರದಲ್ಲಿ ಉಲ್ಲೇಖ ಮಾಡಿದ್ದ ಬಗ್ಗೆ ಡಿಸಿ ವಿರುದ್ಧ ಸಚಿವ ಮಂಜು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು.

ಈ ಸಂಬಂಧ ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಸಂಜೀವ್ ಕುಮಾರ್ ಝಾ ತನಿಖೆಗೆ ಆದೇಶ ಮಾಡಿದ್ದರು.

Comments 0
Add Comment

    ಸಾಲ ಮನ್ನಾ ಮಾಡಲು ನಮಗೆ ಸ್ಪಷ್ಟ ಬಹುಮತ ಇದೆಯಾ..?

    karnataka-assembly-election-2018 | Wednesday, May 23rd, 2018