ಹೋಗಲ್ಲಾ ಅಂದ್ರೆ ರೋಹಿಂಗ್ಯಾಗಳಿಗೆ ಗುಂಡಿಕ್ಕಿ: ಬಿಜೆಪಿ ಶಾಸಕ!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 1, Aug 2018, 12:07 PM IST
Rohingya Muslims who are staying illegally should be shot dead: BJP Lawmaker
Highlights

ಅಕ್ರಮ ವಲಸಿಗರ ವಿರುದ್ಧ ಬಿಜೆಪಿ ಶಾಸಕ ಗರಂ

ತೆಲಂಗಾಣ ಬಿಜೆಪಿ ಶಾಸಕ ಟಿ. ರಾಜಾ ಸಿಂಗ್

ಅಕ್ರಮ ವಲಸಿಗರಿಗೆ ಗುಂಡಿಕ್ಕಿ ಎಂದ ಶಾಸಕ

ದೇಶ ಬಿಡದಿದ್ದರೆ ಹಿಂಸಾ ಮಾರ್ಗ ಅನುಸರಿಸುತ್ತೇವೆ

ಹೈದರಾಬಾದ್(ಆ.1): ದೇಶದಲ್ಲಿ ಅಕ್ರಮವಾಗಿ ನೆಲೆಸಿರುವ ಕುರಿತು ತೆಲಂಗಾಣದ ಬಿಜೆಪಿ ಶಾಸಕ ಟಿ. ರಾಜಾ ಸಿಂಗ್ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ.

ದೇಶ ಬಿಡಲು ಒಪ್ಪದ ವಲಸಿಗರಿಗೆ ಗುಂಡಿಕ್ಕಿ ಎಂದು ಹೇಳಿರುವ ರಾಜಾ ಸಿಂಗ್, ಹಿಂಸಾ ಮಾರ್ಗ ಅನುಸರಿಸಿಯಾದರೂ ಅಕ್ರಮ ವಲಸಿಗರನ್ನು ದೇಶದಿಂದ ಹೊರ ದಬ್ಬಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಅಸ್ಸಾಂನ ರಾಷ್ಟ್ರೀಯ ಪೌರತ್ವ ನೋಂದಣಿ ದಾಖಲೆಯಲ್ಲಿ ಹೆಸರು ಕೈಬಿಡಲಾದ 40 ಲಕ್ಷ ಅಕ್ರಮ ವಲಸಿಗರು ತಾವಾಗಿಯೇ ದೇಶ ಬಿಟ್ಟರೆ ಸರಿ, ಇಲ್ಲದಿದ್ದರೆ ಗುಂಡು ಹೊಡೆದು ದೇಶ ಬಿಡುವಂತೆ ಮಾಡಲಾಗುವುದು ಎಂದು ರಾಜಾ ಸಿಂಗ್ ಗುಡುಗಿದ್ದಾರೆ.

ಪಾಕ್‌ ಜತೆಗಿನ 1971ರ ಯುದ್ಧದ ವೇಳೆ ಭಾರತಕ್ಕೆ ನುಸುಳಿದ ಬಾಂಗ್ಲಾದೇಶದ ಮುಸ್ಲಿಮರು ಇವರಾಗಿದ್ದು, ಭಾರತದ ವಿರುದ್ಧ ಸಂಚಿನ ಭಾಗವಾಗಿ ಇಷ್ಟು ವರ್ಷ ಇಲ್ಲೇ ಉಳಿಸಿಕೊಳ್ಳಲಾಗಿತ್ತು ಎಂದು ರಾಜಾ ಸಿಂಗ್ ಆರೋಪಿಸಿದ್ದಾರೆ.

loader