ಇಲಿಗಳಿಂದ ಡಿಮಾನಿಟೈಜೇಶನ್‌ ನಡೆದಿದ್ದು ಎಲ್ಲಿ ಗೊತ್ತಾಯ್ತು!

Rodents chew cash worth Rs 12 lakh in an ATM in Assam
Highlights

ಚಿಂದಿಯಾಗಿರುವ ಎಟಿಎಂ, ಹರಿದು ಬಿದ್ದಿರುವ ಎರಡು ಸಾವಿರ ಮುಖಬೆಲೆಯ ನೋಟುಗಳು...ಇದು ಕರ್ನಾಟಕದ ಮತ್ತಿಕೆರೆಯ ಎಟಿಎಂ ಎಂಬ ಸುದ್ದಿ ನಿನ್ನೆ ಸಾಮಾಜಿಕ ತಾಣದಲ್ಲಿ ವೈರಲ್ ಆಗಿತ್ತು. ಆದರೆ ಮೂಲವನ್ನು ಹುಡುಕಿದಾಗ ಅದು ಅಸ್ಸಾಂನ ಎಟಿಎಂ ಯಂತ್ರ ಎಂದು ಗೊತ್ತಾಗಿದೆ. ಜತೆಗೆ ಇಲಿ ತಿಂದಿರುವ ಹಣದ ಮೌಲ್ಯವೂ ತಿಳಿದು ಬಂದಿದೆ.

ಬೆಂಗಳೂರು ಜೂನ್ 19:  ಚಿಂದಿಯಾಗಿರುವ ಎಟಿಎಂ, ಹರಿದು ಬಿದ್ದಿರುವ ಎರಡು ಸಾವಿರ ಮುಖಬೆಲೆಯ ನೋಟುಗಳು...ಇದು ಕರ್ನಾಟಕದ ಮತ್ತಿಕೆರೆಯ ಎಟಿಎಂ ಎಂಬ ಸುದ್ದಿ ನಿನ್ನೆ ಸಾಮಾಜಿಕ ತಾಣದಲ್ಲಿ ವೈರಲ್ ಆಗಿತ್ತು. ಆದರೆ ಮೂಲವನ್ನು ಹುಡುಕಿದಾಗ ಅದು ಅಸ್ಸಾಂನ ಎಟಿಎಂ ಯಂತ್ರ ಎಂದು ಗೊತ್ತಾಗಿದೆ. ಜತೆಗೆ ಇಲಿ ತಿಂದಿರುವ ಹಣದ ಮೌಲ್ಯವೂ ತಿಳಿದು ಬಂದಿದೆ.

ಬೆಂಗಳೂರಿನ ಮತ್ತಿಕೆರೆಯ ಎಟಿಎಂ ನಲ್ಲಿ ಇಲಿಗಳು 12.38 ಲಕ್ಷ ರೂ. ಮೌಲ್ಯದ ನೋಟುಗಳನ್ನು ತಿಂದುಹಾಕಿವೆ ಹೀಗೊಂದು ಬರಹದೊಂದಿಗೆ ಎಟಿಎಂನಲ್ಲಿ ಹರಿದ ನೋಟುಗಳಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆದರೆ ಇದು ನಡೆದಿದ್ದು ಅಸ್ಸಾಂನ ತಿನ್ಸುಕೀಯಾ ಜಿಲ್ಲೆಯಲ್ಲಿರುವ ಎಟಿಎಂನಲ್ಲಿ ಎಂಬುದು ಗೊತ್ತಾಗಿದೆ.\

ನರೇಂದ್ರ ಮೋದಿ ನಂತರ ಅಪಮೌಲ್ಯೀಕರಣ ಮಾಡಿದ್ದು ಯಾರು?

ಗುವಾಹಟಿಯ ಗ್ಲೋಬಲ್ ಬಿಸನೆಸ್ ಸೊಲ್ಯುಶನ್ಸ್ ಕಂಪನಿ ಈ ಎಟಿಎಂನ್ನು ನಿರ್ವಹಣೆ ಮಾಡುತಿತ್ತು. ಮೇ 19 ರಂದು ಭಾರತೀಯ ಸ್ಟೇಟ್ ಬ್ಯಾಂಕ್ ನ ಎಟಿಎಂ ಮಶಿನ್ ಗೆ 29 ಲಕ್ಷ ರೂಪಾಯಿ ತುಂಬಿಸಿತ್ತು. ಆದರೆ ತಾಂತ್ರಿಕ ತೊಂದರೆಯಿಂದಾಗಿ ಎಟಿಎಂ ಮೇ 20 ರಂದು ಬಂದ್ ಆಗಿತ್ತು. ಈ ಸಮಯದಲ್ಲಿ ಇಲಿಗಳ ಗುಂಪೊಂದು ಅದು ಹೇಗೋ ಎಟಿಎಂ ಮಶಿನ್ ಒಳಗಡೆ ನುಗ್ಗಿದ್ದವು . ನುಗ್ಗಿದವು ಸುಮ್ಮನೆ ಕೂರುತ್ತವೆಯೆ?  ತುಂಬಿದ್ದ 29 ಲಕ್ಷ ರೂ ಗಳ ಪೈಕಿ 12.38 ಕ್ಷ ರೂ ಮೌಲ್ಯದ ನೋಟುಗಳನ್ನು ಚಿಂದಿ ಮಾಡಿದ್ದವು.

ಜೂನ್ 11ರಂದು ಮಶಿನ್ ದುರಸ್ತಿ ಮಾಡಲು ಹೋದಾಗ ಇಲಿಗಳ ಈ ಕೃತ್ಯ ಬೆಳಕಿಗೆ ಬಂದಿದೆ. ರೂ. 500 ಹಾಗೂ 2000 ರೂ. ನೋಟುಗಳು ಚಿಂದಿಯಾಗಿ ಬಿದ್ದಿದ್ದನ್ನು ಕಂಡು ಅಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದಾರೆ.

ವ್ಯಕ್ತವಾದ ಸಂಶಯ: ಇದು ಕೇವಲ ಇಲಿಗಳ ಕೆಲಸ ಮಾತ್ರ ಆಗಿರಲಾರದು. ಇದರ ಹಿಂದೆ ಬೇರೆ ಯಾರದ್ದಾರೂ ಕೈವಾಡ ಇರಬಹುದು. ಕಳ್ಳತನಕ್ಕೆ ಏನಾದರೂ ಯತ್ನ ನಡೆಸಲಾಗಿತ್ತೆ? ಎಂಬ ವಿಚಾರಗಳನ್ನು ಪರಾಮರ್ಶಿಸುವಂತೆ ನಾಗರಿಕರು ಮನವಿ ಮಾಡಿಕೊಂಡಿದ್ದಾರೆ.

loader