ಮತ್ತಿಕೆರೆ ಎಟಿಎಂಗೆ ಇಲಿ ನುಗ್ಗಿದ್ದು ನಿಜವೆ?

First Published 18, Jun 2018, 5:29 PM IST
Mice chew through 2000 rupees Note's in ATM
Highlights

ಚಿಂದಿಯಾಗಿರುವ ಎಟಿಎಂ, ಹರಿದು ಬಿದ್ದಿರುವ ಎರಡು ಸಾವಿರ ಮುಖಬೆಲೆಯ ನೋಟುಗಳು... ಹೌದು ಎರಡು ಸಾವಿರ ಮುಖಬೆಲೆಯ ಗರಿ ಗರಿ ನೋಟನ್ನು ಮನಸೋ ಇಛ್ಛೆ ಹರಿದು ಹಾಕಲಾಗಿದೆ. ಕಲ್ಲಿ ಅಂತ ಕೇಳ್ತಿರಾ ಅದು ಎಟಿಎಂ ಯಂತ್ರದ ಒಳಗೇನೆ! ಯಾಕೆ ಅಂತ ಕೇಳ್ತಿರಾ ... ಮುಂದೆ ಓದಿ ಗೊತ್ತಾಗುತ್ತೆ...

ಚಿಂದಿಯಾಗಿರುವ ಎಟಿಎಂ, ಹರಿದು ಬಿದ್ದಿರುವ ಎರಡು ಸಾವಿರ ಮುಖಬೆಲೆಯ ನೋಟುಗಳು... ಹೌದು ಎರಡು ಸಾವಿರ ಮುಖಬೆಲೆಯ ಗರಿ ಗರಿ ನೋಟನ್ನು ಮನಸೋ ಇಛ್ಛೆ ಹರಿದು ಹಾಕಲಾಗಿದೆ. ಕಲ್ಲಿ ಅಂತ ಕೇಳ್ತಿರಾ ಅದು ಎಟಿಎಂ ಯಂತ್ರದ ಒಳಗೇನೆ! ಯಾಕೆ ಅಂತ ಕೇಳ್ತಿರಾ ... ಮುಂದೆ ಓದಿ ಗೊತ್ತಾಗುತ್ತೆ...

ಎಟಿಎಂ ವೊಂದರಲ್ಲಿ ನೋಟು ಹರಿದು ಹಾಕಿರುವ ಫೋಟೋಗಳೆರಡು ಸಾಮಾಜಿಕ ತಾಣದಲ್ಲಿ ಬೆಳಗ್ಗೆಯಿಂದ ಹರಿದಾಡ್ತಾ ಇದೆ. ಬೆಂಗಳೂರಿನ ಮತ್ತಿಕೆರೆಯ ಎಟಿಎಂವೊಂದರ ದೃಶ್ಯ ಎಂದು ಹರಿದಾಡ್ತಿದೆ. ಕೆಲವೊಬ್ಬರು ಇದು ಬಸವೇಶ್ವರ ನಗರದ ಎಟಿಎಂ ಎಂದು ಸಹ ಹೇಳಿದ್ದಾರೆ.

ಫೋಟೋವನ್ನು ಬೆನ್ನು ಹತ್ತಿದ ಸುವರ್ಣ ವೆಬ್ ತಂಡ ಸತ್ಯಾಸತ್ಯತೆಯ ಪರಾಮರ್ಶೆ ಮಾಡಿತು. ಕರ್ನಾಟಕದ ಎಟಿಎಂಗಳು ಡೈಬೋಲ್ಡ್ ಮತ್ತು   ಎನ್‌ಸಿಆರ್ ಕಾರ್ಪೋರೇಶನ್ ಗೆ ಸಂಬಂಧಿಸಿದ್ದವು. ಮತ್ತಿಕೆರೆಯ ಎಟಿಎಂ ಇದು ಎಂಬ ಮಾತು ಕೇಳಿ ಬಂದಿದ್ದರಿಂದ ಎರಡು ಕಂಪನಿಯನ್ನು ಸಂಪರ್ಕ ಮಾಡಿದೆವು. ಡೈಬೋಲ್ಡ್ ಕಂಪನಿಗೆ ಇಂಥಹ ಯಾವುದೇ ದೂರು ಬಂದಿಲ್ಲ ಆದರೆ ಎನ್ ಸಿಆರ್ ಕಾರ್ಪೋರೇಶನ್ ಜಗೆ ಸಂಬಂಧಿಸಿದ ಯಂತ್ರಕ್ಕೆ ಇಲಿ ಸೇರಿಕೊಂಡಿವೆ ಆದರೆ ಕಾಣುತ್ತಿರುವ ಚಿತ್ರ ಕರ್ನಾಟಕದ್ದಲ್ಲ ಎಂಬ ಸ್ಪಷ್ಟನೆ ಕಂಪನಿಯಿಂದ ಬಂದಿತು.

ಬ್ಯಾಂಕ್ ಅಧಿಕಾರಿಗಳೊಂದಿಗೆ ಚರ್ಚಿಸಿದ ಸಿಂಡಿಕೇಟ್ ಬ್ಯಾಂಕ್‌ನ ನಿವೃತ್ತ ಎಜಿಎಂ ಎಸ್.ಎಸ್.ಬಾಲಕೃಷ್ಣ ಅವರು 'ಇಂಥ ಘಟನೆ ನಡೆದಿರುವುದು ಸತ್ಯಕ್ಕೆ ದೂರವಾದ ಮಾತಾಗಿದ್ದು, ಎಲ್ಲಿಯೂ ಈ ರೀತಿಯ ದೂರು ದಾಖಲಾಗಿಲ್ಲ. ಇಂಥ ಘಟನೆ ನಡೆದಿರುವ ಬಗ್ಗೆ ಬ್ಯಾಂಕ್ ವಲಯದಲ್ಲಿ ಸುದ್ದಿಯಾಗಿಲ್ಲ,' ಎಂಬುದನ್ನು ಸುವರ್ಣ ನ್ಯೂಸ್. ಕಾಂಗೆ ಸ್ಪಷ್ಟಪಡಿಸಿದ್ದಾರೆ.

ಒಟಿಪಿ ಹಂಚಿಕೊಂಡು ಒಂದು ವಾರದಲ್ಲಿ 7 ಲಕ್ಷ ಕಳೆದುಕೊಂಡ ಮಹಿಳೆ

ಹಿಂದೆಲ್ಲಿ  ನಡೆದಿತ್ತು? 2018 ರ ಜನವರಿಯಲ್ಲಿ ಕಝಕ್ ರಾಜಧಾನಿ ಆಸ್ತಾನಾದಲ್ಲಿ ಇಂಥದ್ದೆ ಒಂದು ಪ್ರಕರಣ ನಡೆದಿತ್ತು. ಎಟಿಎಂಗೆ ರಾತ್ರಿ ನುಗ್ಗಿದ್ದ ಇಲಿಗಳು ಬೆಳಗಾಗುವುದರೊಳಗೆ ಕರೆನ್ಸಿಯನ್ನು ಸಂಪೂರ್ಣ ತಿಂದುಹಾಕಿದ್ದವು.

loader