ಇಂದು ಕಾಬೂಲ್'ನಲ್ಲಿ ಮತ್ತೊಂದು ದುರ್ಘಟನೆ ಸಂಭವಿಸಿದೆ. ಶಾಶ್ ದಾರಕ್ ಎಂಬಲ್ಲಿ ಸ್ಫೋಟವೊಂದು ಸಂಭವಿಸಿದೆ. ಆಫ್ಘಾನಿಸ್ತಾನದಲ್ಲಿ ಶಾಂತಿ ಪಾಲನೆ ಮಾಡುವ ಬಗ್ಗೆ 23 ರಾಷ್ಟ್ರಗಳ ಪ್ರತಿನಿಧಿಗಳು ಭಾಗವಹಿಸಿದ್ದ ಸಭೆಯಲ್ಲಿ ಸ್ಫೋಟವಾಗಿದೆ. ಆಫ್ಘಾನಿಸ್ತಾನ್ ಅಧ್ಯಕ್ಷ ಅಶ್ರಫ್ ಘನಿ ಈ ಸಭೆಯನ್ನು ಉದ್ಘಾಟಿಸಿದ್ದರು. ಸುದೈವವಶಾತ್, ಅಲ್ಲಿಯೂ ಯಾವುದೇ ಜೀವಹಾನಿಯಾದ ಬಗ್ಗೆ ವರದಿ ಬಂದಿಲ್ಲ.

ಕಾಬೂಲ್(ಜೂನ್ 06): ಇತ್ತೀಚೆಗಷ್ಟೇ ಭಾರತೀಯ ರಾಯಭಾರ ಕಚೇರಿ ಸಮೀಪ ಭೀಕರ ಕಾರ್ ಬಾಂಬ್ ಬಿದ್ದು 150ಕ್ಕೂ ಹೆಚ್ಚು ಜನ ಬಲಿತೆಗೆದುಕೊಂಡ ಘಟನೆ ಬೆನ್ನಲ್ಲೇ ಇದೀಗ ಮತ್ತೊಂದು ದುರ್ಘಟನೆ ಸಂಭವಿಸಿದೆ. ಆಫ್ಘಾನಿಸ್ತಾನದ ರಾಜಧಾನಿಯಲ್ಲಿರುವ ಭಾರತೀಯ ರಾಯಭಾರಿಯ ನಿವಾಸದ ಮೇಲೆ ರಾಕೆಟ್'ವೊಂದು ಬಿದ್ದಿರುವುದು ಕಂಡುಬಂದಿದೆ. ಉಗ್ರರು ರಾಕೆಟ್ ದಾಳಿ ನಡೆಸಿರುವ ಶಂಕೆ ಇದೆ. ಮನೆಯ ಆವರಣದಲ್ಲಿರುವ ವಾಲಿಬಾಲ್ ಕೋರ್ಟ್'ನಲ್ಲಿ ಬೆಳಗ್ಗೆ 11:45ಕ್ಕೆ ರಾಕೆಟ್ ಪತನಗೊಂಡಿರುವುದು ತಿಳಿದುಬಂದಿದೆ. ಆದರೆ, ಮನೆಯಲ್ಲಿದ್ದ ಯಾರಿಗೂ ಯಾವುದೇ ಹಾನಿಯಾದ ಬಗ್ಗೆ ಮಾಹಿತಿ ಲಭಿಸಿಲ್ಲ.

ಶಾಂತಿ ಸಭೆ ಮೇಲೆ ಬಾಂಬ್?